ಕೇರಳದಲ್ಲಿ ಸೋಮಾಲಿಯ ಉರಿಯುತ್ತಿದೆ
ಪ್ರಧಾನಿ ಮೋದಿ ಹೇಳಿಕೆ ವಿರುದ್ಧ ಕಾಂಗ್ರೆಸ್ ಎಡ ಪಕ್ಷಗಳ ರಂಗಪ್ರವೇಶ!

ಹೊಸದಿಲ್ಲಿ/ಕೊಚ್ಚಿ, ಮೇ.13 : ಪ್ರಧಾನಿ ನರೇಂದ್ರ ಮೋದಿ ಕೇರಳವನ್ನು ಸೋಮಾಲಿಯಕ್ಕೆ ಹೋಲಿಸಿದ್ದು ಈಗ ಉರಿಯುತ್ತಿದೆ. ಪ್ರಧಾನಿ ಹೇಳಿಕೆ ವಿರುದ್ದ ಈಗ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಜೊತೆಜೊತೆಯಾಗಿ ರಂಗಪ್ರವೇಶಿಸಿವೆ. ಮೋದಿ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಪ್ರತಿಭಟನೆಗೆ ಕಾರಣವಾಗಿರುವ ನಡುವೆಯೇ ಪ್ರಮುಖ ರಾಜಕೀಯ ಪಕ್ಷಗಳು ಮೋದಿ ವಿರುದ್ಧ ಕಟು ಮಾತಿನ ದಾಳಿ ನಡೆಸುತ್ತಿವೆ ಎಂದು ವರದಿಯಾಗಿದೆ. ಕೇರಳದ ವಿಧಾನಸಭಾಚುನಾವಣೆಗೆ 2 ಕೇವಲ ದಿವಸ ಇದ್ದು ಸೋಮಾಲಿಯ ವಾದ ಈವರೆಗೂ ಪ್ರಚಾರ ವಿಷಯಗಳನ್ನು ಕಳಾಹೀನಗೊಳಿಸಿ ಉರಿಯುತ್ತಿದೆ ಎಂದು ವರದಿಗಳು ತಿಳಿಸಿವೆ.
ಈ ನಡುವೆ ತನ್ನ ತಪ್ಪನ್ನು ತಿದ್ದಿಕೊಳ್ಳಲು ಸಿದ್ಧವಾಗದಿರುವ ಪ್ರಧಾನಿ ವಿರುದ್ಧ ಚುನಾವಣಾ ಆಯೋಗವನ್ನು ಸಂಪರ್ಕಿಸುವೆ ಎಂದು ಮುಖ್ಯಮಂತ್ರಿ ಉಮ್ಮನ್ ಚಾಂಡಿ ಕೊಚ್ಚಿಯಲ್ಲಿ ಘೋಷಿಸಿದ್ದಾರೆ. ಇದಕ್ಕೆ ಕಾನೂನಾತ್ಮಕ ಮಗ್ಗುಲುಗಳನ್ನು ಹುಡುಕಲಾಗುತ್ತಿದ್ದು ಇಂತಹ ವಿಷಯಗಳನ್ನು ಹೇಳುವಾಗ ಅಧಿಕೃತವಾದ ಯಾವುದಾದರೂ ದಾಖಲೆ ಇರಬೇಕು ಎಂದು ಮುಖ್ಯಮಂತ್ರಿ ಅಭಿಪ್ರಾಯವಾಗಿದೆ. ಸಿಪಿಐಎಂ ಪ್ರಧಾನಕಾರ್ಯದರ್ಶಿ ಸೀತಾರಾಂ ಯಚೂರಿ ಮೋದಿ ಅಸಂಬಂಧ ಹೇಳಿದ್ದಾರೆ. ಅವರಿಗೆ ಜನರು ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆ ಎಂದಿದ್ದಾರೆ. ಈ ಹೇಳಿಕೆ ಮೋದಿಯ ಸ್ಥಾನಮಾನಕ್ಕೆ ಸೂಕ್ತವಾದುದಲ್ಲ. ಆದ್ದರಿಂದ ಇದು ದೇಶದ ಒಟ್ಟಾರೆ ನಾಚಿಕೆ ಕೇಡಿನ ವಿಷಯವಾಯಿತೆಂದು ಎಐಸಿಸಿ ವಕ್ತಾರ ಜಯರಾಂ ರಮೇಶ್ ಹೇಳಿದ್ದಾರೆ. ಕೇರಳವನ್ನು ಸೋಮಾಲಿಯಕ್ಕೆ ಹೋಲಿಸಿದ ಪ್ರಧಾನಿಗೆ ಸೋಶಿಯಲ್ ಮೀಡಿಯದಲ್ಲಿ ಸಿಕ್ಕಿದ ಅಪಹಾಸ್ಯ ಜನರ ಸಹಜ ಪ್ರತಿಕ್ರಿಯೆ ಆಗಿದೆ. ವಿಶ್ವಸಂಸ್ಥೆಯಿಂದ ಕೂಡ ಅಂಗೀಕಾರ ಲಭಿಸಿರುವ ಕೇರಳ ಮಾದರಿಯಾಗಿದೆ ಎಂದು ಪ್ರಧಾನಿ ಹೇಳಬೇಕಿತ್ತು ಎಂದು ಯೆಚೂರಿ ಹೇಳಿದ್ದಾರೆ. ಮುಖನೋಡಿ ಸುಳ್ಳು ಹೇಳುವ ವ್ಯಕ್ತಿ ಮೋದಿ ಎಂಬುದು ಬಹಿರಂಗವಾದ ವಿಚಾರ ಎಂದೂ ಜೈರಾಂ ರಮೇಶ್ ಹೇಳಿದ್ದಾರೆ.
ಮೋದಿಯ ಹೇಳಿಕೆ ಕ್ಷಮೆಗರ್ಹವಾಗಿಲ್ಲ ಎಂದು ಎಕೆಆ್ಯಂಟನಿ ಅಲಪ್ಪುಝದಲ್ಲಿ ಹೇಳಿದ್ದಾರೆ. ಸಮುದ್ರಕಳ್ಳರು ಮತ್ತು ಆಹಾರಕ್ಕಾಗಿ ಆಕ್ರಂದನ ಮಾಡುತ್ತಿರುವ ಹಸಿವ ಬಡವರ ನಾಡನ್ನು ಮೋದಿ ಕೇರಳಕ್ಕೆ ಹೋಲಿಸಿದ್ದು. ತನ್ನ ಸ್ಥಾನದ ಅಂತಸ್ಸು ಅರಿತಿಲ್ಲದ ಮೋದಿಯ ಮಾತುಗಳಿಂದ ಬಿಜೆಪಿಗೆ ಸಿಗಬಹುದಾದ ವೋಟುಗಳನ್ನು ಕಳಕೊಳ್ಳುವಂತೆ ಮಾಡಿದೆ ಎಂದು ಅವರು ಹೇಳಿದ್ದಾರೆ. ಪ್ರಧಾನಿ ಹೇಳಿದ್ದು ಸರಿ. ಕೇರಳದಲ್ಲಿ ಕಾನೂನು ವ್ಯವಸ್ಥೆ ಸರಿಯಿಲ್ಲ ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಕಾನೂನು ವ್ಯವಸ್ಥೆ ಸರಿಯಿಲ್ಲದ ನಾಡು ಸೋಮಾಲಿಯ. ಕೇರಳದಲ್ಲಿಯೂ ಅದು ಸರಿಯಿಲ್ಲ ಎಂದು ಸ್ವಾಮಿ ಸಮರ್ಥಿಸಿಕೊಂಡಿದ್ದಾರೆ. ಪ್ರಧಾನಿಯ ಸ್ಥಾನಮಾನಕ್ಕೆ ಯೋಗ್ಯವಲ್ಲದ ಹೇಳಿಕೆಯನ್ನು ಮೋದಿ ನೀಡಿದರೆಂದು ಕೆಪಿಸಿಸಿ ಅಧ್ಯಕ್ಷ ಸುಧೀರನ್ ಹೇಳಿದ್ದಾರೆ ಎಂದು ವರದಿಯಾಗಿದೆ.







