ಪ್ರತಿಷ್ಠಿತ ಕಂಪೆನಿಯ ಓಟ್ಸ್ ನಲ್ಲಿ ಕ್ಯಾನ್ಸರ್ ಕಾರಿ ಅಂಶ !
ಆರೋಗ್ಯದ ಹೆಸರಲ್ಲಿ ಪ್ರಾಣದೊಂದಿಗೆ ಚೆಲ್ಲಾಟ

ನ್ಯೂಯಾರ್ಕ್ : ಖ್ಯಾತ ಅಮೆರಿಕನ್ ಕಂಪೆನಿ ಖ್ವೇಕರ್ ಓಟ್ಸ್ ಬಹಳಷ್ಟು ಜನಪ್ರಿಯವಾಗಿರುವ ಬ್ರೇಕ್ ಫಾಸ್ಟ್ ಉತ್ಪನ್ನಗಳನ್ನು ಉತ್ಪಾದಿಸುವ ಕಂಪನಿಯಾಗಿದ್ದುತಾನು ಆರೋಗ್ಯಕರ ಹಾಗೂ ನೈಸರ್ಗಿಕ ಉತ್ಪನ್ನಗಳನ್ನು ಜನರಿಗೆ ಅರ್ಪಿಸುತ್ತಿದೆಯೆಂದು ಕಂಪೆನಿ ಹೇಳಿಕೊಂಡಿದ್ದರೂ ಇದೀಗ ಅದರ ಖ್ಯಾತಿ ಹಾಗೂ ಜನಪ್ರಿಯತೆಗೆ ಚ್ಯುತಿ ಬರುವ ಬೆಳವಣಿಗೆಯೊಂದು ನಡೆದಿದ್ದು ಈ ಕಂಪೆನಿಯ ಓಟ್ಸ್ ನಲ್ಲಿ ಕ್ಯಾನ್ಸರ್ ಕಾರಿ ಅಂಶವಿದೆಯೆಂಬ ದೂರು ಕೇಳಿ ಬಂದಿದೆ.
ನ್ಯೂಯಾರ್ಕ್ ಹಾಗೂ ಕ್ಯಾಲಿಫೋರ್ನಿಯಾದ ಕೆಲ ನಾಗರಿಕರು ಫೆಡರಲ್ ಡಿಸ್ಟ್ರಿಕ್ಟ್ ಕೋರ್ಟಿನಲ್ಲಿ ದಾಖಲಿಸಿರುವ ದಾವೆಯೊಂದು ಖ್ವೇಕರ್ ಓಟ್ಸ್ ಪ್ಯಾಕೇಜಿಂಗ್ ನಲ್ಲಿ ಅದು ಶೇ. 100 ನೈಸರ್ಗಿಕ ಉತ್ಪನ್ನ ಎಂದು ಹೇಳಲಾಗಿದೆಯಾದರೂಅದು ತಪ್ಪು ಎಂದು ಹೇಳಿಕೊಂಡಿದ್ದಾರೆ.
ಪರೀಕ್ಷೆಯೊಂದರಲ್ಲಿ ಕಂಡುಕೊಂಡಂತೆ ಈ ಉತ್ಪನ್ನದಲ್ಲಿ ‘ಗ್ಲೈಫೋಸೇಟ್’ ಎಂಬ ಅಂಶವಿದ್ದುಇದನ್ನು ಹೆಚ್ಚಾಗಿ ಆಹಾರ ಬೆಳೆಗಳಿಗೆ ಹಾಗೂ ಮನೆಗಳ ಅಂಗಳದಲ್ಲಿ ಬೆಳೆದಿರುವ ಗಿಡಗಳಲ್ಲಿ ಕೀಟಗಳ ಬಾಧೆ ತಡೆಗಟ್ಟಲು ಉಪಯೋಗಿಸಲಾಗುತ್ತಿದೆ. ಗ್ಲೈಫೋಸೇಟ್ ಉಪಯೋಗಿಸುವುದು ಕಾನೂನು ಬಾಹಿರವಲ್ಲದಿದ್ದರೂ ಕಂಪೆನಿ ತನ್ನ ಉತ್ಪನ್ನದ ಪ್ಯಾಕೇಜಿಂಗ್ ನಲ್ಲಿ ಶೇ. 100 ನೈಸರ್ಗಿಕ ಎಂದು ಬರೆದಿರುವುದಕ್ಕೆ ತದ್ವಿರುದ್ಧವಾಗಿದೆಯೆಂದು ದೂರು ನೀಡಿರುವ ಗ್ರಾಹಕರು ಹೇಳಿದ್ದಾರೆ.
ತನ್ನ 2015 ವರ್ಷದ ವರದಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಗ್ಲೈಫೋಸೇಟ್ಮನುಷ್ಯರಿಗೆ ವಿಷಕಾರಿ ಎಂದು ಹೇಳಿದೆಯಲ್ಲದೆ ಅದು ಸ್ತನ ಕ್ಯಾನ್ಸರ್ ಸಹಿತ ಹಲವು ವಿಧದ ಕ್ಯಾನ್ಸರ್ ಗಳಿಗೆ ಕಾರಣವಾಗಬಹುದೆಂದು ಎಚ್ಚರಿಸಿದೆ. ಇದು ನಿಜವೇ ಆಗಿದ್ದಲ್ಲಿ ಖ್ವೇಕರ್ ಓಟ್ಸ್ಶೇ 100 ನೈಸರ್ಗಿಕ ಹಾಗೂ ಪರಿಸರ ಸ್ನೇಹಿ ಉತ್ಪನ್ನವೆಂದು ಹೇಳಲು ಅಸಾಧ್ಯವಾಗುತ್ತದೆ.
ಆದರೆ ಕಂಪೆನಿಯ ಪ್ರಕಾರ ತನ್ನ ಉತ್ಪನ್ನಗಳಲ್ಲಿರುವ ಗ್ಲೈಫೋಸೇಟ್ ನಿಗದಿತ ಪ್ರಮಾಣದಲ್ಲಿ ಇದ್ದುಈ ಪ್ರಮಾಣ ಎನ್ವಿರಾನ್ ಮೆಂಟಲ್ ಪ್ರೊಟೆಕ್ಷನ್ ಏಜನ್ಸಿಯಿಂದ ಸುರಕ್ಷಿತವೆಂದು ಪ್ರಮಾಣೀಕರಿಸಲ್ಪಟ್ಟಿದೆ ಎಂದು ಹೇಳಿಕೊಂಡಿದೆ.





