ವ್ಯಕ್ತಿ ನಾಪತ್ತೆ

ಪುತ್ತೂರು, ಮೇ 13: ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಮುಗೇರು ನಿವಾಸಿ ಕುಂಬ್ರದ ವರ್ತಕ ರಮೇಶ್ ರೈ (35) ಮೇ 11 ರಿಂದ ನಾಪತ್ತೆಯಾಗಿದ್ದಾರೆ.
ಇವರು ಕುಂಬ್ರದಲ್ಲಿ ಮೊಬೈಲ್ ರೀಚಾರ್ಜಿಂಗ್ ಅಂಗಡಿ ನಡೆಸುತ್ತಿದ್ದರು. ಮೇ 11 ರಂದು ರಾತ್ರಿ ಅಂಗಡಿಯಿಂದ ಮನೆಗೆ ಬಂದು ಪುರುಷರಕಟ್ಟೆಗೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳಿದವರು ನಾಪತ್ತೆಯಾಗಿದ್ದಾರೆ. ಇವರ ಬೈಕ್ ಕಬಕ ಪುತ್ತೂರು ರೈಲ್ವೆ ನಿಲ್ದಾಣದ ಬಳಿ ಪತ್ತೆಯಾಗಿದೆ.
ನಾಪತ್ತೆಯಾದವರ ಪತ್ನಿ ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





