ಮೂಲಭೂತ ಸೌಲಭ್ಯ ವಂಚಿತ ಮತದಾರರು ಬದಲಾವಣೆ ಬಯಸುತ್ತಿದ್ದಾರೆ: ಕೆ.ಸುರೇಂದ್ರನ್

ಮಂಜೇಶ್ವರ, ಮೇ 13: ಮಂಜೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ, ನೀರು, ವಿದ್ಯುತ್ ಮುಂತಾದ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವ ಮತದಾರರು ಇದೀಗ ಬದಲಾವಣೆಗೆ ಹಾತೊರೆಯುತ್ತಿದ್ದಾರೆ. ಸರದಿಯಲ್ಲಿ ಆಡಳಿತ ನಡೆಸಿದ ಎಡ-ಬಲ ರಂಗಗಳೆರಡೂ ಭ್ರಷ್ಟಾಚಾರದಲ್ಲಿ ಮುಳುಗಿಜನತೆಯ ಅವಿಶ್ವಾಸಕ್ಕೆ ಕಾರಣವಾಗಿದ್ದಾರೆಂದು ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅ್ಯರ್ಥಿ ಕೆ.ಸುರೇಂದ್ರನ್ ಅಭಿಪ್ರಾಯಪಟ್ಟಿದ್ದಾರೆ.
ಕುರುಡಪದವಿನಲ್ಲಿ ಗುರುವಾರ ನಡೆದ ಪೈವಳಿಕೆ ಪಂಚಾಯತ್ ಮಟ್ಟದ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿರುವ ಬಿಜೆಪಿಗೆ ಹೆಚ್ಚಿನ ಮತಗಳನ್ನು ನೀಡಿ ವಿಜಯಗೊಳಿಸಬೇಕೆಂದು ವಿನಂತಿಸಿದರು.
ನಿವೃತ್ತ ಶಿಕ್ಷಕ ಕೋಚಣ್ಣ ರೈ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ನಾಯಕರಾದ ನ್ಯಾ.ಬಿ.ಬಾಲಕೃಷ್ಣ ಶೆಟ್ಟಿ, ಕೋಳಾರು ಸತೀಶ್ಚಂದ್ರ ಭಂಡಾರಿ, ಡಿ.ಭಾಸ್ಕರ ರೈ ಉಪಸ್ಥಿತರಿದ್ದರು. ಚಿದಾನಂದ ಸ್ವಾಗತಿಸಿ,ಮಣಿಕಂಠ ರೈ ವಂದಿಸಿದರು.
ಬಳಿಕ ಪಂಚಾಯತ್ ವ್ಯಾಪ್ತಿಯ ಚಿಪ್ಪಾರು,ಲಾಲ್‌ಭಾಗ್, ಪೈವಳಿಕೆ ನಗರ, ಬಾಯಿಕಟ್ಟೆ, ಅಟ್ಟೆಗೋಳಿ, ಜೋಡುಕಲ್ಲು, ಕಯ್ಯೆರು, ಪೆರ್ಮುದೆ, ಕನಿಯಾಲ, ಸಜಂಕಿಲ, ಬಾಯಾರು ಸೊಸೈಟಿ, ಮುಳಿಗದ್ದೆಯಲ್ಲಿ ಪ್ರಚಾರ ಸಭೆ ನಡೆದು, ಬಾಯಾರುಪದವಿನಲ್ಲಿ ಸಂಪನ್ನಗೊಂಡಿತು.







