ಸಹ್ಯಾದ್ರಿ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಚಿತ್ತಾರ
ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ಏರೋ ಮಾಡೆಲಿಂಗ್ ಸ್ಪರ್ಧೆ

ಮಂಗಳೂರು, ಮೇ 13: ಅಡ್ಯಾರ್‌ನಲ್ಲಿರುವ ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಆಡಳಿತಾತ್ಮಕ ಕಾಲೇಜಿನ ಆವರಣದಲ್ಲಿ ಇಂದು ಆಯೊಜಿಸಲಾಗಿದ್ದ ರಾಷ್ಟ್ರಮಟ್ಟದ ಏರೋ ಮಾಡೆಲಿಂಗ್ ಸ್ಪರ್ಧೆ ‘ಏರೋಫಿಲಿಯಾ-2016’ ಆಯೋಜನೆಯಿಂದ ಸಹ್ಯಾದ್ರಿ ಆವರಣದ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಚಿತ್ತಾರ ಗಮನಸೆಳೆಯಿತು.
ಮೇ 14ರವರೆಗೆ ನಡೆಯುವ ಏರೊ ಮಾಡೆಲಿಂಗ್ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಇಂದು ಮಂಗಳೂರು ್ಲೈಯರ್ಸ್ ಕ್ಲಬ್ ಮತ್ತು ಬೆಂಗಳೂರಿನ ಏರ್‌ಟ್ರಿಕ್ಸ್ ಸಂಸ್ಥೆ ವತಿಯಿಂದ ಸುಮಾರು 9 ಏರ್‌ಕ್ರ್‌ಟಾ ಮತ್ತು 1 ಹೆಲಿಕ್ಟಾರ್ ಮಾದರಿಯನ್ನು ಪ್ರದರ್ಶಿಸಲಾಯಿತು. ಮಾದರಿ ಪ್ರದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೊಂಬಾಟ್ ಏರ್‌ಕ್ರ್‌ಟಾನ ಸಿಸ್ಟಮ್ಸ್ ಇಂಜಿನಿಯರ್ ಎ.ವಿ. ಅರವಿಂದ್, ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಏರೋ ಮಾಡೆಲಿಂಗ್ ಸ್ಪರ್ಧೆ ಏರ್ಪಡಿಸುವುದರಿಂದ ದೇಶದಲ್ಲಿ ಏರೋನ್ಯಾಟಿಕ್ಸ್ ಕ್ಷೇತ್ರದಲ್ಲಿ ಹೊಸ ಬೆಳವಣಿಗೆಗೆ ಪೂರಕವಾಗಲಿದೆ. ಏರೋನಾಟಿಕ್ಸ್‌ನಲ್ಲಿ ಯುವ ಜನತೆಗೆ ಆಸಕ್ತಿ ಮೂಡಿಸಿ ಹೊಸತನ ಸಾಧಿಸಲು ಪ್ರೇರಣೆಗೆ ಕಾರಣವಾಗಲಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಭಾರತ ಏರೋನಾಟಿಕ್ಸ್‌ನಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದರು.
ಎಡಿಎದ ಎಲ್‌ಸಿಎ-ತೇಜಸ್‌ನ ಅವಿಯೋನಿಕ್ಸ್‌ನ ಎಲೆಕ್ಟ್ರಾನಿಕ್ಸ್ ಇಂಜಿನಿಯರ್ ಚಿನ್ಮಯ, ಟೆಕ್ಸಾಸ್ ವಿಶ್ವವಿದ್ಯಾನಿಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಪವನ್ ಪ್ರಭಾಕರ್, ಕಾಲೇಜು ಪ್ರಾಂಶುಪಾಲ ಉಮೇಶ್ ಭೂಷಿ ಮೊದಲಾದವರು ಉಪಸ್ಥಿತರಿದ್ದರು. ಸ್ಪರ್ಧಿಗಳು ತಾವು ತಯಾರಿಸಿದ ವಿವಿಧ ಏರ್‌ಕ್ರ್‌ಟಾನ ಮಾದರಿಗಳನ್ನು ವಿದ್ಯುತ್‌ಚಾಲಿತ ವ್ಯವಸ್ಥೆಯಲ್ಲಿ ರಿಮೋಟ್ ಕಂಟ್ರೋಲ್ ಮೂಲಕ ಪ್ರದರ್ಶಿಸಿದರು.
ಮೇ 14ರಂದು ಅಪರಾಹ್ನ 3ರಿಂದ ಸಂಜೆ 5ರ ತನಕ ಮಂಗಳೂರು ಫ್ಲೈಯಿಂಗ್ ಕ್ಲಬ್ ವತಿಯಿಂದ ಓಪನ್ ಗ್ರೌಂಡ್ ಫ್ಲೈಯಿಂಗ್ ನಡೆಯಲಿದೆ.







