‘ರಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ತಯಾರಿ ನಡೆಸುತ್ತಿರುವೆ’

ಲಾಂಗ್‌ಜಂಪ್ ವಿಶ್ವ ದಾಖಲೆ ವೀರ ಮೈಕ್ ಪೊವೆಲ್
ಬೆಂಗಳೂರು, ಮೇ 13: ಕಳೆದ 25 ವರ್ಷಗಳಿಂದ ಲಾಂಗ್ ಜಂಪ್‌ನಲ್ಲಿ ತಾನು ನಿರ್ಮಿಸಿರುವ ವಿಶ್ವ ದಾಖಲೆಯನ್ನು ಕಾಯ್ದುಕೊಂಡಿರುವ ಅವೆುರಿಕದ ಅಥ್ಲೀಟ್ ದಂತಕತೆ ಮೈಕ್ ಪೊವೆಲ್ ಟಿಸಿಎಸ್ ವರ್ಲ್ಡ್ 10 ಕೆ ರಾಯಭಾರಿಯಾಗಿ ಉದ್ಯಾನ ನಗರಿ ಬೆಂಗಳೂರಿಗೆ ಗುರುವಾರ ಭೇಟಿ ನೀಡಿದ್ದು, 52ನೆ ಹರೆಯದಲ್ಲಿ ರಿಯೋ ಗೇಮ್ಸ್‌ನ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ಸಜ್ಜಾಗುತ್ತಿದ್ದಾರೆ.
25 ವರ್ಷಗಳ ಹಿಂದೆ ಟೋಕಿಯೋದಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಲಾಂಗ್‌ಜಂಪ್ ಸ್ಪರ್ಧೆಯಲ್ಲಿ 8.95 ಮೀ.ದೂರ ಜಿಗಿದು ವಿಶ್ವ ದಾಖಲೆಯನ್ನು ನಿರ್ಮಿಸಿರುವ ಪೊವೆಲ್ ಕ್ರೀಡೆಯ ಪ್ರಸಕ್ತ ಪರಿಸ್ಥಿತಿಯ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದು, ರಿಯೋ ಒಲಿಂಪಿಕ್ಸ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಪ್ರಯತ್ನ ನಡೆಸುತ್ತಿರುವ ಬಗ್ಗೆಯೂ ತಿಳಿಸಿದ್ದಾರೆ. ಪೊವೆಲ್‌ರೊಂದಿಗೆ ನಡೆಸಿದ ಮಾತುಕತೆಯ ಸಂಕ್ಷಿಪ್ತ ವಿವರ ಇಲ್ಲಿದೆ..
52ರ ಹರೆಯದಲ್ಲಿ ರಿಯೋ ಒಲಿಂಪಿಕ್ಸ್‌ನಲ್ಲಿ ಸ್ಥಾನ ಗಿಟ್ಟಿಸಲು ಪ್ರಯತ್ನಿಸುತ್ತಿದ್ದೀರಾ?
ಹೇಗೆ ಜಂಪ್ ಮಾಡಬೇಕೆಂಬ ಬಗ್ಗೆ ಯಾರೂ ಕೂಡ ಮರೆಯಲು ಸಾಧ್ಯವಿಲ್ಲ. 8.05 ಮೀ. ಒಲಿಂಪಿಕ್ಸ್ ಅರ್ಹತೆಯ ಮಾರ್ಕ್ ಆಗಿದೆ. 8.30 ಮೀ. ದೂರ ಜಿಗಿಯುವ ವಿಶ್ವಾಸ ನನಗಿದೆ. ಹೇಗೆ ಜಿಗಿಯಬೇಕೆಂದು ನನಗೆ ಚೆನ್ನಾಗಿ ಗೊತ್ತು. ನಾನೀಗ ಅಮೆರಿಕದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಟ್ರಯಲ್ಸ್ ಭಾಗವಹಿಸಲು ತಯಾರಿ ನಡೆಸುತ್ತಿರುವೆ. ನನ್ನ ಸಾಮರ್ಥ್ಯದ ಮೇಲೆ ಸಂಶಯಪಡುವವರಿಗೆ ನನ್ನ ಪ್ರದರ್ಶನ ನೋಡಿ ಎಂದು ಸಲಹೆ ನೀಡುವೆ. ಒಲಿಂಪಿಕ್ಸ್‌ಗೆ ತೆರಳುವುದಾಗಿ ಮಗಳಿಗೆ ಹೇಳಿದ್ದೇನೆ. ಆಕೆಯೇ ನನ್ನ ಸ್ಪೂರ್ತಿ.
ಡೋಪಿಂಗ್ ಕುರಿತು ನಿಮ್ಮ ಅಭಿಪ್ರಾಯ
ನನ್ನ ಪ್ರಕಾರ ಅಥ್ಲೀಟ್‌ಗಳನ್ನು ಚೆನ್ನಾಗಿ ನಡೆಸಿಕೊಳ್ಳುತ್ತಿಲ್ಲ. ಇತರ ಕ್ರೀಡೆಯಲ್ಲಿ ಈ ರೀತಿಯಿಲ್ಲ. ಹಣ, ಅಧಿಕಾರ ಇಲ್ಲವೇ ಪ್ರಭಾವ ಇರುವಲ್ಲಿ ಜನರು ಮೋಸ ಮಾಡಲು ಹೋಗುತ್ತಾರೆ. ಒಮ್ಮೆ ನೀವು ಡೋಪಿಂಗ್‌ನಲ್ಲಿ ಸಿಕ್ಕಿ ಬಿದ್ದರೆ ಜೀವನ ಅಂತ್ಯವಾಗುತ್ತದೆ. ವರ್ಷದಲ್ಲಿ 12,000 ಪರೀಕ್ಷೆ ನಡೆಸಿದಾಗ ತಪ್ಪುಗಳು ಕಂಡುಬರುತ್ತದೆ. ಅಂತಹ ಸಂದರ್ಭದಲ್ಲಿ ನಿಷೇಧ ಹೇರಬೇಕು. ಜೀವಾವಧಿ ನಿಷೇಧ ಸರಿಯಲ್ಲ. ರಶ್ಯ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಅರ್ಹವಾಗಿದೆಯೇ?
ಇಲ್ಲ. ಆ ದೇಶ ದೀರ್ಘಕಾಲದಿಂದ ಡೋಪಿಂಗ್ ಪರೀಕ್ಷೆಯಲ್ಲಿ ವಿಫಲವಾಗುತ್ತಿದೆ. ಅಥ್ಲೀಟ್‌ಗಳ ಬಗ್ಗೆ ನನಗೆ ಕನಿಕರವಿದೆ. ಆದರೆ, ಇದೊಂದು ವ್ಯವಸ್ಥೆ. ವ್ಯವಸ್ಥೆಯನ್ನು ಹಾಳು ಮಾಡಿ, ಸಂಸ್ಕೃತಿಯನ್ನು ಬದಲಿಸಲಾಗುತ್ತಿದೆ. ರಶ್ಯಕ್ಕೆ ಒಲಿಂಪಿಕ್ಸ್‌ನಲ್ಲಿ ಅವಕಾಶ ನೀಡದೇ ಇರುವುದು ದುರದೃಷ್ಟಕರ.
ನಿಮ್ಮ ಲಾಂಗ್‌ಜಂಪ್ ವಿಶ್ವದಾಖಲೆ 25 ವರ್ಷಗಳಿಂದ ಯಾರಿಗೂ ಮುರಿಯಲು ಸಾಧ್ಯವಾಗಿಲ್ಲವಲ್ಲ...
ನನ್ನ ದಾಖಲೆ 25 ವರ್ಷ ಬಿಡಿ 20 ನಿಮಿಷ ಉಳಿಯುತ್ತದೆ ಎಂದು ಭಾವಿಸಿರಲಿಲ್ಲ. ನನ್ನ ಆ ಸಾಧನೆಗೆ 25 ವರ್ಷಗಳೇ ಕಳೆದಿದೆ. ಕಾರ್ಲ್ ಲೂವಿಸ್ ನನ್ನ ವಿಶ್ವ ದಾಖಲೆ ಸನಿಹ ತಲುಪಿದ್ದರು. ಆದರೆ, ದಾಖಲೆ ಮುರಿಯಲು ಸಾಧ್ಯವಾಗಲಿಲ್ಲ. ಇದು ಕ್ರೀಡಾದೃಷ್ಟಿಯಿಂದ ಉತ್ತಮವಲ್ಲ. ದಾಖಲೆಗಳು ಇರುವುದೇ ಮುರಿಯುವುದಕ್ಕಾಗಿ. ಲಾಂಗ್‌ಜಂಪ್ ಅತ್ಯಂತ ಕಠಿಣ ಕ್ರೀಡೆ. ನಾವು ಓಟಗಾರರಷ್ಟೇ ವೇಗದಲ್ಲಿ ಓಡಿ ಎತ್ತರಕ್ಕೆ ಜಿಗಿದು ಸುರಕ್ಷಿತವಾಗಿ ನೆಲಕ್ಕೆ ಇಳಿಯಬೇಕು.
ನಿಮ್ಮ ದಾಖಲೆ ಮುರಿಯಲು ಸಾಧ್ಯವಾಗದೇ ಇರಲು ಕಾರಣ?
ಈಗಿನ ಅಥ್ಲೀಟ್‌ಗಳಿಗೆ ದಾಖಲೆ ಮುರಿಯಬೇಕೆಂಬ ಬಗ್ಗೆ ಸ್ಪಷ್ಟ ಗುರಿಯಿಲ್ಲ. ಅವರಿಗೆ ಏನು ಮಾಡಬೇಕೆಂಬುದು ಗೊತ್ತಿಲ್ಲ. ನಾನು ಅವರಿಗೆ ಏನು ಹೇಳಲು ಹೋಗಲಾರೆ. ನಾನು ಹಾಗೂ ಕಾರ್ಲ್ ಲೂವಿಸ್ ಈ ಬಗ್ಗೆ ಮಾತನಾಡುತ್ತಿದ್ದೆವು. ಎಲ್ಲರೂ ತಮ್ಮ ವೇಗವನ್ನು ಸರಿಯಾಗಿ ಬಳಸುವುದಿಲ್ಲ. ಎಲ್ಲರೂ ಬೋರ್ಡ್‌ನತ್ತ ಜಿಗಿಯುತ್ತಾರೆ. ನಾವು ಆಕಾಶದೆತ್ತರಕ್ಕೆ ಜಿಗಿಯಲು ಯತ್ನಿಸಬೇಕು.
ಈಗಿನ ಪೀಳಿಗೆಯ ಅಥ್ಲೀಟ್‌ಗಳ ಬಗ್ಗೆ ಏನು ಹೇಳುತ್ತೀರಿ
ಈಗಿನ ಪೀಳಿಗೆಯ ಅಥ್ಲೀಟ್‌ಗಳಿಗೆ ಪ್ರತಿಭೆಯಿದೆ. ಆದರೆ, ಪ್ರತಿಭೆಯನ್ನು ಹೇಗೆ ಬಳಸಿಕೊಳ್ಳಬೇಕೆಂದು ಗೊತ್ತಿಲ್ಲ. ಈಗಿನ ಯುವ ಆಟಗಾರರಲ್ಲಿ ವೃತ್ತಿಯ ಮೇಲೆ ಶ್ರದ್ಧಾಭಕ್ತಿಯಿಲ್ಲ.
ಅಂಜುಬಾಬ್ಬಿ ಜಾರ್ಜ್‌ಗೆ ತರಬೇತಿ ನೀಡಿದ ಕುರಿತು...
ಅದೊಂದು ತುಂಬಾ ಮಜವಾಗಿತ್ತು. ಆಕೆಗೆ ಕೋಚ್ ನೀಡಲು ನನಗೆ ತುಂಬಾ ಇಷ್ಟವಾಗುತ್ತದೆ. ಆಕೆ ಒಲಿಂಪಿಯನ್, ಆಕೆಯಲ್ಲಿ ಜಂಪ್ ಮಾಡುವ ತಾಕತ್ತಿದೆ. ಆಕೆಗೆ ಹೆಚ್ಚು ಕಲಿಸಲು ನನಗೆ ಸಮಯವಿರಲಿಲ್ಲ. ನಿಮ್ಮ ವೃತ್ತಿಜೀವನದ ಬಗ್ಗೆ....
ನನ್ನದು ಉತ್ತಮ ಹಾಗೂ ದೀರ್ಘ ವೃತ್ತಿಬದುಕು. ಮೂರು ಬಾರಿ ಒಲಿಂಪಿಕ್ಸ್ ಗೇಮ್ಸ್ ಸ್ಪರ್ಧಿಸಿದ್ದೆ. ನಾನು ಸ್ಪರ್ಧಿಸಿರುವ ರೀತಿ ಹೆಮ್ಮೆ ತಂದಿದೆ. ನನಗೆ ಕೋಚಿಂಗ್ ನೀಡುವುದೆಂದರೆ ಇಷ್ಟ







