ಸೊಮಾಲಿಯ ಎಲ್ಲಿದೆ?: ಪ್ರಧಾನಿಗೆ ಖಾದರ್ ಪ್ರಶ್ನೆ

ಕಾಸರಗೋಡು, ಮೇ 13: ಕೇರಳದಲ್ಲಿ ಸೊಮಾಲಿಯನ್ನರು ಎಲ್ಲಿದ್ದಾರೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಜನತೆಗೆ ತೋರಿಸಿ ಕೊಡಬೇಕು ಎಂದು ಕರ್ನಾಟಕ ಆರೋಗ್ಯ ಸಚಿವ ಯು.ಟಿ.ಖಾದರ್‌ಹೇಳಿದ್ದಾರೆ.
ಕಾಸರಗೋಡು ಪ್ರೆಸ್‌ಕ್ಲಬ್‌ನಲ್ಲಿಂದು ಸುದ್ದಿ ಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಕೇರಳದ ಜನರನ್ನು ಹೀಯಾಳಿಸಿದ್ದಾರೆ. ಕೇಂದ್ರ ಬಿಜೆಪಿ ಸರಕಾರ ಅಧಿಕಾರಕ್ಕೇರಿದ ಬಳಿಕ ಜಾರಿಗೊಳಿಸಿರುವ ಜನಪರ ಯೋಜನೆಯಾದರೂ ಯಾವುದು ಎಂದು ಪ್ರಶ್ನಿಸಿದ ಖಾದರ್, ಯುಪಿಎ ಸರಕಾರ ಜಾರಿಗೊಳಿಸಿದ್ದ ಶೈಕ್ಷಣಿಕ ಯೋಜನೆಗಳನ್ನು ಬುಡಮೇಲುಗೊಳಿಸಿದ್ದೇ ಅದರ ಸಾಧನೆ ಎಂದು ಛೇಡಿಸಿದರು.
ಕೇರಳದಲ್ಲಿ ಉಮ್ಮನ್ ಚಾಂಡಿ ಸರಕಾರದ ಅಭಿವೃದ್ಧಿ ಕಾರ್ಯಗಳು ಅನುಕರಣೀಯ. ಈ ಸರಕಾರ ಜಾರಿಗೆ ತಂದಿರುವ ಕಾರುಣ್ಯ ಯೋಜನೆ ಯನ್ನು ಕರ್ನಾಟಕದಲ್ಲೂ ಆರಂಭಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.
Next Story





