1,900 ಕಾಂಗರೂಗಳ ವಧೆ
ಮೆಲ್ಬರ್ನ್, ಮೇ 13: ಕಾಂಗರೂಗಳು ಸ್ಥಳೀಯ ಪರಿಸರದ ಮೇಲೆ ವಿನಾಶಕಾರಿ ಪರಿಣಾಮವನ್ನು ಉಂಟು ಮಾಡುವುದನ್ನು ತಡೆಯುವ ನಿಟ್ಟಿನಲ್ಲಿ ಅವುಗಳ ಸಂಖ್ಯೆಯನ್ನು ಕಡಿಮೆ ಮಾಡಲು 1,900ಕ್ಕೂ ಅಧಿಕ ಕಾಂಗರೂಗಳನ್ನು ಕೊಲ್ಲಲು ಆಸ್ಟ್ರೇಲಿಯ ನಿರ್ಧರಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಾಂಗರೂಗಳ ಸಂಖ್ಯೆಯನ್ನು ನಿಯಂತ್ರಿಸುವ ವಾರ್ಷಿಕ ಕಾರ್ಯಸೂಚಿಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ. ಆಸ್ಟ್ರೇಲಿಯನ್ ಕ್ಯಾಪಿಟಲ್ ಟೆರಿಟರಿ (ಎಸಿಟಿ)ಯಾದ್ಯಂತ ಕಾಂಗರೂಗಳ ವಧೆಯನ್ನು ಸೋಮವಾರದಿಂದ ನಡೆಸಲಾಗುವುದು.
Next Story





