ಹೈದರಾಬಾದ್‌ಗೆ ಬಂದಿಳಿದ ವಿಶ್ವದ ಅತಿ ದೊಡ್ಡ ಕಾರ್ಗೋ ವಿಮಾನ
ವಿಶ್ವದ ಅತಿ ದೊಡ್ಡ ಕಾರ್ಗೋ ವಿಮಾನ ಆಂಟೊನೊವ್ ಎಎನ್-225 ಮ್ರಿಯಾ ಅಥವಾ ದಿ ಡ್ರೀಮ್ ಭಾರತದಲ್ಲಿ ಪ್ರಥಮ ಬಾರಿಗೆ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ಸಾಮಾನ್ಯ ವಿಮಾನಗಳಿಗಿಂತ ಅಗಲವಾಗಿರುವ ಈ ವಿಮಾನವು ಆರು ಟರ್ಬೊ ಫ್ಯಾನ್ ಇಂಜಿನ್‌ಗಳನ್ನು ಹೊಂದಿದ್ದು ವಿಶ್ವದ ಅತಿ ಉದ್ದ ಹಾಗೂ ಭಾರವಾದ ವಿಮಾನವಾಗಿದೆಯಲ್ಲದೆ ಗರಿಷ್ಠ 650 ಟನ್ ಸರಕನ್ನು ಹೊರುವ ಸಾಮರ್ಥ್ಯ ಈ ಉಕ್ರೇನ್ ನಿರ್ಮಿತ ವಿಮಾನ ಹೊಂದಿದೆ. ಈ ವಿಮಾನದ ರೆಕ್ಕೆಗಳು ಕೂಡ ಇತರೆಲ್ಲಾ ವಿಮಾನಗಳಿಗಿಂತ ಅತಿ ದೊಡ್ಡದಾಗಿದೆ.
Next Story





