ಬಾಂಗ್ಲಾ ಬಿರುಗಾಳಿ: ಕನಿಷ್ಠ 30 ಸಾವು
ಢಾಕಾ, ಮೇ 13: ಬಾಂಗ್ಲಾದೇಶಾದ್ಯಂತ ಗುರುವಾರ ಬಿರುಗಾಳಿ ಬೀಸಿದ್ದು, ಕನಿಷ್ಠ 30 ಮಂದಿ ಮೃತಪಟ್ಟಿದ್ದಾರೆ. ಹೆಚ್ಚಿನ ಸಾವುಗಳು ಸಿಡಿಲು ಬಡಿದು ಸಂಭವಿಸಿವೆ ಎಂದು ಪೊಲೀಸರು ಹೇಳಿದ್ದಾರೆ.
ದೇಶದ ವಾಯುವ್ಯ ಭಾಗದಲ್ಲಿ ಬಿರುಗಾಳಿ ಹೆಚ್ಚಿನ ಅನಾಹುತ ಸೃಷ್ಟಿಸಿದೆ. ಪಬ್ನ, ರಾಜ್‌ಶಾಹಿ, ಸಿರಾಜ್‌ಗಂಜ್ ಮತ್ತು ಬ್ರಹ್ಮನ್‌ಬರಿಯ ಜಿಲ್ಲೆಗಳಲ್ಲಿ ಕನಿಷ್ಠ 19 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಪ್ರದೇಶದಲ್ಲಿ ಸೂರ್ಯಾಸ್ತದ ವೇಳೆಗೆ ಗುಡುಗು ಮಿಂಚುಗಳಿಂದ ಕೂಡಿದ ಭಾರೀ ಬಿರುಗಾಳಿ ಅಪ್ಪಳಿಸಿತು. ರೈತರು ತಮ್ಮ ದಿನದ ಕೆಲಸ ಮುಗಿಸಿ ಮನೆಗೆ ಮರಳುವ ಸಮಯದಲ್ಲಿ ಅವರು ಸಿಡಿಲಾಘಾತಕ್ಕೆ ಒಳಗಾದರು ಎಂದು ಮೂಲಗಳು ತಿಳಿಸಿವೆ.
Next Story





