570 ಕೋಟಿ ರೂ. ಹಣ ಸಾಗಾಟಕ್ಕೆ ಚುನಾವಣಾ ಆಯೋಗದಿಂದ ತಡೆ

ತಿರುಪ್ಪುರ್, ಮೇ 14: ಕೊನೆಯ ಹಂತದ ಚುನಾವಣೆ ನಡೆಯುತ್ತಿರುವ ತಮಿಳುನಾಡಿನಲ್ಲಿ ಮೂರು ಕಂಟೇನರ‍್ ಗಳಲ್ಲಿ ಸಾಗಿಸಲಾಗುತ್ತಿದ್ದ 570 ಕೋಟಿ ರೂ. ನಗದನ್ನು ಚುನಾವಣಾ ಆಯೋಗದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಈ ಹಣ ವಿಜಯವಾಡಾದ ಸ್ಟೇಟ್ ಬ್ಯಾಂಕ್ ಇಂಡಿಯಾ ಶಾಖೆಗೆ ಸಾಗಾಟ ಮಾಡಲಾಗುತ್ತಿತ್ತು ಎಂದು ಲಾರಿ ಕಂಟೇನರ‍್ ಚಾಲಕ ಹೇಳುತಿದ್ದರೂ, ಹಣದ ಬಗ್ಗೆ ಸ್ಪಷ್ಷ ದಾಖಲೆ ಇಲ್ಲದ ಕಾರಣದಿಂದಾಗಿ ಅಧಿಕಾರಿಗಳು ಕಂಟೇನರ್‌ನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ತಿರುಪ್ಪುರಾ ಜೆಲ್ಲೆಯಲ್ಲಿ ವಶಪಡಿಸಿಕೊಳ್ಳಲಾದ ಕಂಟೇನರ್‌ಗಳಲ್ಲಿ 570 ಕೋಟಿ ರೂ. ಹಣ ಇದೆ ಎಂದು ಚಾಲಕ ಮಾಹಿತಿ ನೀಡಿದ್ದರೂ,ಕಂಟೇನರ‍್ ಗಳನ್ನು ತೆರೆಯಲಾಗಿಲ್ಲ. ಹಣದ ಸ್ಪಷ್ಟ ದಾಖಲೆಪತ್ರಗಳನ್ನು ಒದಗಿಸಿದಲ್ಲಿ ಕಂಟೇನರ‍್ ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ರಾಜೇಶ್ ಲೊಖೋನಿ ತಿಳಿಸಿದ್ದಾರೆ.
Next Story





