ಸೌದಿಯಲ್ಲಿ ವಿದೇಶಿಯರಿಂದ ಬೇನಾಮಿ ಸಂಸ್ಥೆಗಳು!: ಮಾನವ ಸಂಪನ್ಮೂಲಾಭಿವೃದ್ಧಿ ಸಮಿತಿ

ರಿಯಾದ್,ಮೇ 14: ಸೌದಿಯಲ್ಲಿ ಬೇನಾಮಿ ಸಂಸ್ಥೆಗಳಲ್ಲಿ ಹೆಚ್ಚಿನ ಪಾಲು ವಿದೇಶಿಗಳದ್ದಾಗಿದೆ ಎಂದು ಸೌದಿ ಶೂರಾ ಕೌನ್ಸಿಲ್ ಹೇಳಿದೆ ಎಂದು ವರದಿಯಾಗಿದೆ.
ವಿದೇಶಿಗಳು ನಡೆಸುತ್ತಿರುವ ಇಂತಹ ಸಂಸ್ಥೆಗಳಿಂದಾಗಿ ದೇಶದ ಆರ್ಥಿಕ ಕ್ಷೇತ್ರಕ್ಕೆ ಹಾನಿಯಾಗುತ್ತಿದೆ ಎಂದು ಶೂರ ಕೌನ್ಸಿಲ್‌ನ ಮಾನವ ಸಂಪನ್ಮೂಲ ಸಮಿತಿ ಸದಸ್ಯರು ಅಭಿಪ್ರಾಯಿಸಿದ್ದಾರೆ. ಸ್ವದೇಶದ ಸರಕಾರಿ ಉದ್ಯೋಗಿಗಳಿಗೆ ಖಾಸಗಿ ಸಂಸ್ಥೆಗಳನ್ನು ನಡೆಸಲು ಅನುಮತಿ ನೀಡುವುದಕ್ಕೆ ಸಂಬಂಧಿಸಿ ಶೂರಾ ಕೌನ್ಸಿಲ್‌ನಲ್ಲಿ ಈ ಹಿಂದೆ ತೆಗೆದು ಕೊಂಡಿರುವ ತೀರ್ಮಾನದ ಕುರಿತು ಚರ್ಚೆಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಮಿತಿಯು ವಿದೇಶಿಗಳ ಬೇನಾಮಿ ಸಂಸ್ಥೆಗಳ ಹೆಚ್ಚಳ ಮತ್ತು ಅವು ಸೃಷ್ಟಿಸುತ್ತಿರುವ ಆರ್ಥಿಕ ನಷ್ಟಗಳು ಪರಾಮರ್ಶಿಸಲ್ಪಟ್ಟಿದೆ. ಸಿವಿಲ್ ಸರ್ವೀಸ್ ಕಾನೂನಿಗೆ ತಿದ್ದುಪಡಿ ತಂದು ನೇರವಾಗಿ ಸರಕಾರಿ ಉದ್ಯೋಗಿಗಳಿಗೆ ಖಾಸಗಿ ಸಂಸ್ಥೆಗಳನ್ನು ನಡೆಸಲು ಅನುಮತಿ ನೀಡಬೇಕೆಂದು ಶೂರಾ ಕೌನ್ಸಿಲ್ ಸದಸ್ಯ ಡಾ. ಅಹ್ಮದ್ ಅಸೈಲಇ ವಿಷಯ ಮಂಡಿಸಿದರು. ಪ್ರಜೆಗಳ ಆದಾಯ ಹೆಚ್ಚಳಕ್ಕೆ ಮತ್ತು ಜೀವನ ಮಟ್ಟ ಉತ್ತಮಗೊಳ್ಳಲು ಈ ತಿದ್ದುಪಡಿ ಪ್ರಯೋಜಕರವಾಗಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸೌದಿಯಲ್ಲಿ ಹೆಚ್ಚಿನ ಸರಕಾರಿ ಉದ್ಯೋಗಿ ಸ್ವದೇಶಿಗಳು ವಿದೇಶಿಗಳ ಹೆಸರಲ್ಲಿ ಖಾಸಗಿ ಉದ್ದಿಮೆಗಳನ್ನು ನಡೆಸುತ್ತಿದ್ದಾರೆ. ಮತ್ತು ಕೆಲವೇ ಕಡಿಮೆ ಸಂಖ್ಯೆಯಲ್ಲಿ ಸ್ವದೇಶಿಗಳ ಹೆಸರಿನಲ್ಲಿ ಸಂಸ್ಥೆಗಳಿವೆ ಎಂದು ಮಾನವ ಅಭಿವೃದ್ಧಿ ಸಮಿತಿ ಬಹಿರಂಗಪಡಿಸಿದೆ.
ಈ ಕಾನೂನಿನಲ್ಲಿ ತಿದ್ದುಪಡಿ ಸಂಬಂಧಿಸಿದ ವಿಷಯವನ್ನು ಮತ್ತೆ ಶೂರಾ ಕೌನ್ಸಿಲ್ ಚರ್ಚೆಗೆತ್ತಿ ಸದಸ್ಯರೊಳಗೆ ಮತದಾನ ನಡೆಸಲಿದೆ ಎಂದು ವರದಿಗಳು ತಿಳಿಸಿವೆ.





