ಇಂಡೋನೇಷಿಯಾದಲ್ಲಿ ಬಾಲಾಪರಾಧಿಗಳಿಗೆ ಮ್ಯಾಕ್ರೊ ಚಿಪ್!

ಜಕಾರ್ತ,ಮೇ 14: ಶಾಲಾ ಬಾಲಕಿಯನ್ನು ಅತ್ಯಾಚಾರಗೈದು ಕೊಂದ ಬಾಲಾಪರಾಧಿಗಳಿಗೆ ಇಂಡೋನೇಷಿಯ ಸರಕಾರ ಮೈಕ್ರೊ ಚಿಪ್‌ನ್ನು ಅವಳವಡಿಸಲಿದೆ. ಕಳೆದ ಎಪ್ರಿಲ್‌ನಲ್ಲಿ ಸುಮಾತ್ರದ ಪಶ್ಚಿಮದಲ್ಲಿರುವ ದ್ವೀಪದ ಶಾಲೆಯಿಂದ ಮನೆಗೆ ಹೋಗುತ್ತಿದ್ದ ಹದಿನಾಲ್ಕುವರ್ಷ ವಯಸ್ಸಿನ ಬಾಲಕಿಯನ್ನು ಮದ್ಯಪಾನ ಮಾಡಿದ್ದ ಯುವಕರೂ ಬಾಲಕರೂ ಇದ್ದ ಒಂದು ತಂಡ ಅತ್ಯಾಚಾರ ನಡೆಸಿತ್ತು. ಮೂರುದಿವಸಗಳ ಬಳಿಕ ಬಾಲಕಿಯ ಮೃತದೇಹ ಕೈಕಟ್ಟಿಹಾಕಿದ ಸ್ಥಿತಿಯಲ್ಲಿ ಕಾಡಿನಲ್ಲಿ ಪತ್ತೆಯಾಗಿತ್ತು.
ಆರೋಪಿಗಳಾಗಿ ಹೆಸರಿಸಿದವರಲ್ಲಿ ಹದಿನಾರುಹದಿನೇಳು ವರ್ಷ ಪ್ರಾಯದ ಬಾಲಕರೂ ಇದ್ದು ಈಗ ಜೈಲುಪಾಲಾಗಿದ್ದಾರೆ. ಸಾಮಾಜಿಕ ಮಾಧ್ಯಮಗಳು ಮಧ್ಯಪ್ರವೇಶಿಸಿದ ನಂತರಕೊನೆಗೂ ರಾಷ್ಟ್ರದ ಗಮನಕ್ಕೆ ಬಂದಿತ್ತು. ಆರೋಪಿಗಳ ವಿರುದ್ಧದ ಕಠಿಣಕ್ರಮಕೈಗೊಳ್ಳಲಾಗುವುದು ಎಂದು ಇಂಡೋನೇಷಿಯದ ಅಧ್ಯಕ್ಷ ಜೋಕೊವಿದೋದೊ ಹೇಳಿದ್ದಾರೆಂದು ವರದಿಯಾಗಿದೆ.
Next Story





