ಪತ್ರಕರ್ತ ರಾಜ್‌ದೇವ್ ರಂಜನ್ ಹತ್ಯಾ ಪ್ರಕರಣ: ಇಬ್ಬರು ಪೊಲೀಸ್ ವಶಕ್ಕೆ

ಬಿಹಾರ,ಮೇ 14: ರಾಜ್ಯದ ಸಿವಾನ್‌ನಲ್ಲಿ ಪತ್ರಕರ್ತ ರಾಜ್‌ದೇವ್ ರಂಜನ್‌ರ ಹತ್ಯೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಹಿಂದುಸ್ತಾನ್ ಪತ್ರಿಕೆಯ ರಾಜ್‌ದೇವ್ ರಂಜನ್‌ರನ್ನು ಶುಕ್ರವಾರ ಸಂಜೆ ಗುಂಡುಹಾರಿಸಿ ಕೊಂದು ಹಾಕಲಾಗಿತ್ತು. ಪೊಲೀಸರು ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಕಸ್ಟಡಿಗೆ ಪಡೆದು ಪ್ರಶ್ನಿಸುತ್ತಿದ್ದಾರೆ. ಸಿವಾನ್ ಪೊಲೀಸ್ ಅಧೀಕ್ಷಕ ಸೌರಬ್ ಕುಮಾರ್ ಶಾ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿ ಇಬ್ಬರು ಹತ್ಯಾರೋಪಿಗಳನ್ನು ಬಂಧಿಸಿರುವುದುನ್ನು ದೃಢ ಪಡಿಸಿದ್ದಾರೆ.
ತನಿಖೆಗೆ ಅಡ್ಡಿಯಾಗಬಹುದೆಂಬ ಕಾರಣವನ್ನು ಮುಂದಿಟ್ಟು ಬಂಧಿತರ ಹೆಸರು ಪರಿಚಯವನ್ನು ಹಾಗೂ ಬಂಧಿಸಲಾದ ಸ್ಥಳವನ್ನು ತಿಳಿಸಲು ಅವರು ನಿರಾಕರಿಸಿದ್ದಾರೆ.
ಶುಕ್ರವಾರ ರೈಲ್ವೆ ಸೇತುವೆ ಬಳಿ ರಂಜನ್‌ರಿಗೆ ಗುಂಡು ಹಾರಿಸಲಾಗಿತ್ತು. ಅವರು ಸ್ಥಳದಲ್ಲೇ ಮೃತರಾದರು ಎಂದು ಸಿವಾನನ ಪೊಲೀಸ್ ಅಧೀಕ್ಷಕರು ತಿಳಿಸಿದ್ದರು. ರಾಜ್‌ದೇವ್ ರಂಜನ್‌ರು ಹಿಂದೂಸ್ಥಾನ್ ಪತ್ರಿಕೆಯ ಬ್ಯೂರೋ ಚೀಫ್ ಆಗಿದ್ದರು. ಬಿಹಾರದ ಗಯಾದಲ್ಲಿ ವಾಹನ ಓವರ್‌ಟೇಕ್ ಮಾಡಿದ್ದಕ್ಕಾಗಿ ವಿದ್ಯಾರ್ಥಿಯೊಬ್ಬನನ್ನು ಗುಂಡು ಹಾರಿಸಿ ಕೊಲ್ಲಲಾಗಿತ್ತು. ಈ ಕೊಲೆ ಪ್ರಕರಣದ ಆರೋಪಿ ಜೆಡಿಯು ವಿಧಾನಪರಿಷತ್ ಸದಸ್ಯೆ ಮನೋರಮಾ ದೇವಿ ಪುತ್ರ ರಾಕಿಯಾದವ್‌ನನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.







