ಬಾಬರಿ ಮಸೀದಿ ಕುರಿತ ನನ್ನ ಪತ್ರಕ್ಕೆ ನರಸಿಂಹ ರಾವ್ ಪ್ರತಿಕ್ರಿಯಿಸಿರಲಿಲ್ಲ : ತರುಣ್ ಗೊಗೋಯಿ

ನವದೆಹಲಿ : ಬಾಬರಿ ಮಸೀದಿ ಪ್ರಕರಣವನ್ನು ಆಗಿನ ನರಸಿಂಹ ರಾವ್ ಸರಕಾರ ನಿರ್ವಹಿಸಿದ ರೀತಿಯನ್ನು ಟೀಕಿಸಿ ಅಂದು ಆಹಾರ ಸಚಿವರಾಗಿದ್ದ ತರುಣ್ ಗೊಗೋಯಿ ಪತ್ರ ಬರೆದಿದ್ದರೆ ರಾವ್ ಅದಕ್ಕೆ ಪ್ರತಿಕ್ರಿಯಿಸಲು ವಿಫಲರಾಗಿದ್ದರೆಂದುಈಗಅಸ್ಸಾಂ ಮುಖ್ಯಮಂತ್ರಿಯಾಗಿರುವ ಗೊಗೋಯಿ ಇಂದು ಬಿಡುಗಡೆಯಾಗಲಿರುವ ತಮ್ಮ ಕೃತಿ ‘ಟರ್ನ್ ಎರೌಂಡ್-ಲೀಡಿಂಗ್ ಅಸ್ಸಾಂ ಫ್ರಮ್ ದಿ ಫ್ರಂಟ್’ ನಲ್ಲಿ ನೆನಪಿಸಿಕೊಂಡಿದ್ದಾರೆ.
ಡಿಸೆಂಬರ್ 1992ರಲ್ಲಿ ನಡೆದ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಆಗಿನ ಪ್ರಧಾನಿ ರಾವ್ ಸರಿಯಾದ ಕ್ರಮ ಕೈಗೊಂಡಿರಲಿಲ್ಲವೆಂದು ಗೊಗೋಯಿ ತಮ್ಮ ಕೃತಿಯಲ್ಲಿ ಹೇಳಿಕೊಂಡಿದ್ದಾರೆ.
‘‘ನರಸಿಂಹ ರಾವ್ ಒಬ್ಬ ಆಧುನಿಕ ವ್ಯಕ್ತಿಯಾಗಿದ್ದರು ಹಾಗೂ ತಮ್ಮ ಆಡಳಿತಾವಧಿಯಲ್ಲಿ ಹಲವಾರು ಸುಧಾರಣೆಗಳನ್ನು ತಂದಿದ್ದರು. ತಮ್ಮ ಸಚಿವರ ಕಾರ್ಯನಿರ್ವಹಣೆಯಲ್ಲಿ ಅವರು ಹಸ್ತಕ್ಷೇಪ ನಡೆಸುತ್ತಿರಲಿಲ್ಲ. ಆಹಾರ ಸಚಿವನಾಗಿ ನಾನು ನನ್ನ ಸಚಿವಾಲಯದ ನಿರ್ಧಾರಗಳನ್ನು ನಾನೇ ತೆಗೆದುಕೊಳ್ಳುತ್ತಿದ್ದೆ,’’ಎಂದು 2001ರಿಂದ ಅಸ್ಸಾಂ ಮುಖ್ಯಮಂತ್ರಿಯಾಗಿರುವ ಗೊಗೋಯಿ ಹೇಳಿದ್ದಾರೆ.
‘‘ಅದೇ ಸಮಯ ಅವರಿಗೆ ತಮ್ಮ ಪಕ್ಷದ ಮೇಲೆ ಹಿಡಿತವಿರಲಿಲ್ಲ. ನಾನು ಕೇಂದ್ರ ಸಚಿವನಾಗಿದ್ದುಕೊಂಡೇ ಬಾಬರಿ ಮಸೀದಿ ಧ್ವಂಸ ವಿಚಾರವಾಗಿ ಅವರಿಗೆ ಬರೆದುಹಾಗಾಗಲು ಬಿಡಬಾರದಾಗಿತ್ತು ಎಂದಿದ್ದೆ. ಅವರು ಅಲ್ಪಸಂಖ್ಯಾತಸಮುದಾಯದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು,’’ಎಂದು ಗೊಗೋಯಿ ತಮ್ಮ ಕೃತಿಯಲ್ಲಿ ಬರೆದಿದ್ದಾರೆ.







