‘ಹಾಸ್ ಹಾಸ್ ಹಾಸ್ಕುಳೆ’, ‘ಚೊಕ್ಲೆಟಾಂ’ ಕೊಂಕಣಿ ಕೃತಿಗಳ ಬಿಡುಗಡೆ

ಮಂಗಳೂರು, ಮೇ 14: ಸಹಕಾರ್ ಪಬ್ಲಿಕೇಶನ್ ಆಶ್ರಯದಲ್ಲಿ ಇಂದು ಲೇಖಕ ಡೊಲ್ಲಾ ಅವರ ಹಾಸ್ ಹಾಸ್ ಹಾಸ್ಕುಳೆ ಮತ್ತು ಸಿಜೈಸ್ ತಾಕೋಡೆ ಅವರ ಚೊಕ್ಲೆಟಾಂ ಕೃತಿಗಳನ್ನು ಇಂದು ಬಿಡುಗಡೆಗೊಳಿಸಲಾಯಿತು.
ಡೊಲ್ಲಾ ಅವರ 150ನೆ ಪುಸ್ತಕವಾಗಿರುವ ಹಾಸ್ ಹಾಸ್ ಹಾಸ್ಕುಳೆಯನ್ನು ಅನಿವಾಸಿ ಉದ್ಯಮಿ ಜೇಮ್ಸ್ ಮೆಂಡೊನ್ಸಾ ಬಿಡುಗಡೆಗೊಳಿಸಿದರು. ಸಿಜೈಸ್ ತಾಕೋಡೆ ಅವರ ಚೊಕ್ಲೆಟಾಂ ಕೃತಿಯನ್ನು ದೈಜಿವರ್ಲ್ಡ್ ಉದ್ಯಮ ಸಮೂಹದ ಸ್ಥಾಪಕ ವಾಲ್ಟರ್ ನಂದಳಿಕೆ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ರಿಚರ್ಡ್ ಮೋರಸ್, ಲೇಖಕರಾದ ಡೊಲ್ಲಾ, ಸಿಜೈಸ್ ತಾಕೋಡೆ ಉಪಸ್ಥಿತರಿದ್ದರು. ಲೆಸ್ಲಿ ರೇಗೋ ಕಾರ್ಯಕ್ರಮ ನಿರೂಪಿಸಿದರು.
Next Story





