ಮುಸ್ಲಿಮರಲ್ಲಿ ವಿಚ್ಛೇದನಗಳ ಸಂಖ್ಯೆ ಹೆಚ್ಚಾಗುತ್ತಿವೆ: ಬಲ್ಕೀಸ್‌ಬಾನು

ತರೀಕೆರೆ, ಮೇ 14: ಮುಸ್ಲಿಮರಲ್ಲಿ ವಿಚ್ಛೇದನಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕಾರಿಯಾಗಿದೆ. ಜನತೆ ಸರಳ ವಿವಾಹಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದು ರಾಜ್ಯ ಅಲ್ಪಸಂಖ್ಯಾತ ಆಯೋ ಗದ ಅಧ್ಯಕ್ಷೆ ಬಲ್ಕೀಸ್‌ಬಾನು ಹೇಳಿದ್ದಾರೆ.
ಅವರು ತರೀಕೆರೆ ಪಟ್ಟಣದಲ್ಲಿ ಇತ್ತೆಹಾದ್ ಗ್ರೂಪ್ ಹಮ್ಮಿಕೊಂಡಿದ್ದ ಇಸ್ಲಾಮ್‌ನಲ್ಲಿ ಮಹಿಳೆಯರ ಹಕ್ಕುಗಳು ಕುರಿತು ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಮದುವೆಗಳು ಸಾಮಾಜಿಕ ಅಸಮಾನತೆಗೆ ಕಾರಣವಾಗಬಾರದು. ಸರಕಾರ ಅಶಕ್ತ ಯುವತಿಯರ ಮದುವೆಗಾಗಿ ಶಾದಿಭಾಗ್ಯ ಯೋಜನೆ ಜಾರಿಗೆ ತಂದಿದೆ. ಉಳ್ಳವರು ಇದರ ದುರುಪಯೋಗ ಮಾಡಬಾರದು. ವಿವಾಹ ಕಾರ್ಯಗಳು ನಡೆದ ಬಳಿಕ ದಂಪತಿಗಳಲ್ಲಿ ತೊಂದರೆ ಉಂಟಾದರೆ ಸಮುದಾಯದ ಹಿರಿಯರು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದರು.
ನಿವೃತ್ತ ವಿಜ್ಞಾನಿ ಅಬ್ದುಲ್ ಜಬ್ಬಾರ್ ಸಾ್ ಮಾತನಾಡಿ, ಇಸ್ಲಾಮ್‌ನಲ್ಲಿ ಮಹಿಳೆಯರಿಗೆ ಎಲ್ಲಾ ರೀತಿಯ ಹಕ್ಕುಗಳ ಸ್ವಾತಂತ್ರ್ಯವನ್ನು ನೀಡಿದೆ. ಪವಿತ್ರ ಕುರ್‌ಆನ್‌ನಲ್ಲಿ ತಾಯಿಯ ಮಹತ್ವವನ್ನು ಹೇಳುತ್ತದೆ. ಅಲ್ಲದೆ, ಗೌರವವನ್ನು ಕಲಿಸುತ್ತದೆ. ಪ್ರವಾದಿಗಳ ಆಗಮನದ ಮುಂಚೆ ಹೆಣ್ಣನ್ನು ಜೀವಂತ ಸಮಾಧಿ ಮಾಡುವ ಹೇಯ ಕೃತ್ಯ ನಡೆಯುತ್ತಿತ್ತು. ಈಗ ಭ್ರೂಣ ಹತ್ಯೆಯ ಹೆಸರಲ್ಲಿ ಹೆಣ್ಣಿನ ಕೊಲೆ ನಡೆಯುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಜಿಲ್ಲಾ ಗ್ರಾ ಕರ ವೇದಿಕೆ ಅಧ್ಯಕ್ಷ ಸೈಯದ್ ಅನ್ಸಾರ್‌ಕಲೀಂ, ದಾವಣಗೆರೆ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಮುಹಮ್ಮದ್ ಸಿರಾಜ್, ಚಿಕ್ಕಮಗಳೂರು ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಮಸೂದ್ ಅಹ್ಮದ್, ತಾಲೂಕು ಕಸಾಪ ಅಧ್ಯಕ್ಷ ದಾದಾಪೀರ್, ಶುಶ್ರೂಷಕಿ ಹಸೀನಾ ಖಾಲಿಕ್‌ರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುತ್ತಾಹಿದಾ ಮಾಜ್‌ನ ಶಿವಮೊಗ್ಗ ವಿಭಾಗದ ಕಾರ್ಯದರ್ಶಿ ಹಾಮಿದ್ ಉಮ್ರೀ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಉರ್ದು ಉಪನ್ಯಾಸಕ ಫಯಾಝುರ್ರಹ್ಮಾನ್, ಇತ್ತೇಹಾದ್ ಗ್ರೂಪ್ ಅಧ್ಯಕ್ಷ ಮುಹಮ್ಮದ್ ಯುಸುಫ್, ಮುಖಂಡರಾದ ಇರ್ಫಾನ್ ಅಹ್ಮದ್ ಬೇಗ್, ಅಬ್ದುಲ್ ಶುಕೂರ್, ಇದ್ರೀಸ್ ಅಝ್ಗ್ಗರ್ ಅಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.







