ಭಾರತೀಯ ಕಲಾವಿದೆಗೆ ವಿಶ್ವಸಂಸ್ಥೆ ಸ್ಪರ್ಧೆಯಲ್ಲಿ ಪ್ರಶಸ್ತಿ

ವಿಶ್ವಸಂಸ್ಥೆ, ಮೇ 14: ಪರಮಾಣು ನಿಶ್ಶಸ್ತ್ರೀಕರಣದ ಬಗ್ಗೆ ಜಾಗೃತಿ ಉಂಟುಮಾಡುವುದಕ್ಕೆ ಸಂಬಂಧಿಸಿ ವಿಶ್ವಸಂಸ್ಥೆ ಏರ್ಪಡಿಸಿದ ಪೋಸ್ಟರ್ ಸ್ಪರ್ಧೆಯಲ್ಲಿ ವಿಜೇತರಾದ ಮೂವರಲ್ಲಿ 22 ವರ್ಷದ ಭಾರತೀಯ ಕಲಾವಿದೆಯೋರ್ವರೂ ಸೇರಿದ್ದಾರೆ. ಶಾಂತಿ ಪಾರಿವಾಳವೊಂದು ಪರಮಾಣು ಅಸ್ತ್ರವೊಂದನ್ನು ಛೇದಿಸುವ ಅವರ ಚಿತ್ರ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಬಾನ್ ಕಿ ಮೂನ್‌ರ ಮೆಚ್ಚುಗೆಗೆ ಪಾತ್ರವಾಗಿದೆ.
ವಿಶ್ವಸಂಸ್ಥೆಯ ನಿಶ್ಶಸ್ತ್ರೀಕರಣ ವ್ಯವಹಾರಗಳ ಕಚೇರಿ (ಒಡಿಎ) ಏರ್ಪಡಿಸಿದ ಸ್ಪರ್ಧೆಯಲ್ಲಿ ನ್ಯೂಯಾರ್ಕ್‌ನಲ್ಲಿ ನೆಲೆಸಿರುವ ವಿನ್ಯಾಸಗಾರ್ತಿ ಅಂಜಲಿ ಚಂದ್ರಶೇಖರ್ ತೃತೀಯ ಬಹುಮಾನ ಪಡೆದಿದ್ದಾರೆ. ಚೆನ್ನೈಯ ಬಾಲಕಿಯೊಬ್ಬರು ರಚಿಸಿದ ಚಿತ್ರ ಗೌರವ ಪ್ರಶಸ್ತಿಯನ್ನು ಪಡೆದಿದೆ.
ಮೇ 3ರಂದು ಇಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಂಜಲಿ ಬಾನ್ ಕಿ ಮೂನ್‌ರಿಂದ ಪ್ರಶಸ್ತಿ ಪಡೆದರು. ಸ್ಪರ್ಧೆಯಲ್ಲಿ 123 ದೇಶಗಳಿಂದ 4,100ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದಾರೆ. ಮೂವರು ವಿಜೇತರ ಹೊರತಾಗಿ ಒಂಬತ್ತು ಮಂದಿಗೆ ಗೌರವ ಪ್ರಶಸ್ತಿಗಳನ್ನು ನೀಡಲಾಗಿದೆ.

Anjali Chandrashekar’s poster for UN Poster for Peace contest. (Picture courtesy: hindustantimes)

Ciro Palomino Huamani’s poster ‘Spinning Peace’ -- which won the first prize in the UN Poster for Peace contest. (Picture courtesy: hindustantimes)

Michelle Li’s poster won the second prize in the contest. (Picture courtesy: hindustantimes)

Nine posters received an honourable mention by the UN. (Picture courtesy: hindustantimes)







