ಉಳ್ಳಾಲ: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಉಳ್ಳಾಲ, ಮೇ 14: ಪೆರ್ಮನ್ನೂರು ಗ್ರಾಮದ ಆಡಂಕುದ್ರು ಸೈಂಟ್ ಸೆಬಾಸ್ಟಿಯನ್ ಶಾಲೆ ಬಳಿಯ ಗದ್ದೆಯಲ್ಲಿ ಸುಮಾರು 42 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಪತ್ತೆಯಾಗಿದೆ.
ಸಾಧಾರಣ ಶರೀರ ಹೊಂದಿರುವ ಗೋಧಿ ಮೈ ಬಣ್ಣದ ಗ್ರೇ ಬಣ್ಣದ ಪ್ಯಾಂಟ್, ನೀಲಿ, ಗ್ರೇ ಮತ್ತು ಬಿಳಿ ಬಣ್ಣದ ದಪ್ಪಗೆರೆಯ ಟೀ ಶರ್ಟ್ ಧರಿಸಿದ್ದು, ಆಕಸ್ಮಿಕವಾಗಿ ಅಥವಾ ಯಾವುದೋ ಕಾಯಿಲೆಯಿಂದ ಮೃತಪಟ್ಟಿರುವ ಸಾಧ್ಯತೆ ಇದೆ.
ಸಂಬಂಧಿತರು ಉಳ್ಳಾಲ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಉಳ್ಳಾಲ ಪೊಲೀಸ್ ಠಾಣಾ ಪ್ರಕಟನೆ ತಿಳಿಸಿದೆ.
Next Story





