ಮಜ್ಲಿಸ್ ಎಜುಪಾರ್ಕ್ ಮುಡಿಪು ಇದರ ಶಿಲಾನ್ಯಾಸ ಹಾಗೂ ಸುನ್ನೀ ಮಹಾ ಸಮ್ಮೇಳನದ ಅಂಗವಾಗಿ ಶನಿವಾರ ಸಾಂಬಾರ್‌ತೋಟ ಮಸೀದಿಯ ವಠಾರದಿಂದ ಸಮ್ಮೇಳನ ನಡೆಯುವ ಮುಡಿಪು ಮೈದಾನದವರೆಗೆ ಶ್ವೇತ ವಸ್ತ್ರದಾರಿ ಮಕ್ಕಳಿಂದ ಆಕರ್ಷಕ ದಫ್ ಹಾಗೂ ಸ್ಕೌಟ್ ತಂಡದೊಂದಿಗೆ ಆಕರ್ಷಕ ಬೃಹತ್ ರ್ಯಾಲಿಯು ಸೈಯದ್ ಆದೂರ್ ತಂಙಳ್‌ರ ನೇತೃತ್ವದಲ್ಲಿ ನಡೆಯಿತು.