Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಚುಟುಕು ಸುದ್ದಿಗಳು

ಚುಟುಕು ಸುದ್ದಿಗಳು

ವಾರ್ತಾಭಾರತಿವಾರ್ತಾಭಾರತಿ14 May 2016 11:50 PM IST
share

ನಿಂತಿದ್ದ ರಿಕ್ಷಾಕ್ಕೆ ಎಂ80 ಢಿಕ್ಕಿ: ಸವಾರ ಮೃತ್ಯು
ಬೈಂದೂರು, ಮೇ 14: ಶಿರೂರು ದುರ್ಗಾ ಹಾರ್ಡ್‌ವೇರ್ ಎದುರು ಮೇ14ರಂದು ಮಧ್ಯಾಹ್ನ ವೇಳೆ ನಿಲ್ಲಿಸಿದ್ದ ರಿಕ್ಷಾಕ್ಕೆ ಎಂ80 ದ್ವಿಚಕ್ರವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಓರ್ವ ಸವಾರ ಮೃತಪಟ್ಟು, ಇನ್ನೋರ್ವ ತೀವ್ರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಎಂ80ಯ ಹಿಂಬದಿ ಸವಾರ ಭಟ್ಕಳದ ಯಾಸೀನ್(45) ಎಂದು ಗುರುತಿಸಲಾಗಿದೆ. ಸವಾರ ನಾವುಂದ ನಿವಾಸಿ ಸಾದಿಕ್ ಎಂಬವರು ಗಂಭೀರವಾಗಿ ಗಾಯಗೊಂಡು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
 ಶಿರೂರಿನ ಐಸಾಕ್ ಎಂಬವರು ರಸ್ತೆ ಬದಿ ರಿಕ್ಷಾ ನಿಲ್ಲಿಸಿ ರಿಕ್ಷಾದ ಬಿಡಿ ಭಾಗವನ್ನು ತೆಗೆದುಕೊಳ್ಳಲು ಶಿರೂರು ದುರ್ಗಾ ಹಾರ್ಡ್‌ವೇರ್ ಅಂಗಡಿಗೆ ಹೋಗಿದ್ದರು. ಆ ವೇಳೆ ತೂದಳ್ಳಿ ಕ್ರಾಸ್ ಕಡೆಯಿಂದ ಅತಿವೇಗವಾಗಿ ಚಲಾಯಿಸಿಕೊಂಡುಬಂದ ಎಂ80 ದ್ವಿಚಕ್ರ ವಾಹನ ರಸ್ತೆ ಬದಿ ನಿಲ್ಲಿಸಿದ್ದ ರಿಕ್ಷಾಕ್ಕೆ ಹಿಂದಿನಿಂದ ಢಿಕ್ಕಿ ಹೊಡೆಯಿತು. ಇದರಿಂದ ಎಂ80ಯಲ್ಲಿದ್ದ ಯಾಸೀನ್ ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಕುಂದಾಪುರ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಇವರು ಮೃತಪಟ್ಟರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ: ಗಾಯಾಳು ಮೃತ್ಯು
ಕುಂದಾಪುರ, ಮೇ14: ಹೊಂಬಾಡಿ ಮಂಡಾಡಿ ಗ್ರಾಮದ ಹಾಯಿಗುಳಿ ಚಿಕ್ಕು ದೇವಸ್ಥಾನದ ಬಳಿ 2012ರ ಡಿ.30ರಂದು ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕೋಮಾವಸ್ಥೆಯಲ್ಲಿದ್ದ ಕೋಟೇಶ್ವರ ನಿವಾಸಿ ವೇಣುಗೋಪಾಲ (46) ಎಂಬವರು ಮೇ 14ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಸ್ವಗೃಹದಲ್ಲಿ ಮೃತಪಟ್ಟರು. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಟ್ಕಾ: ಓರ್ವ ಬಂಧನ
ಕುಂದಾಪುರ, ಮೇ 14: ಹೆಮ್ಮಾಡಿ ಬಸ್ ನಿಲ್ದಾಣದ ಬಳಿ ಮೇ 13ರಂದು ಸಂಜೆ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಕಟ್‌ಬೆಲ್ತೂರು ದೊಡ್ಡಹಿತ್ಲು ನಿವಾಸಿ ಮುತ್ತು ಮೊಗವೀರ(49) ಎಂಬಾತನನ್ನು ಕುಂದಾಪುರ ಪೊಲೀಸರು ಬಂಧಿಸಿ ನಗದು ವಶಪಡಿಸಿಕೊಂಡಿದ್ದಾರೆ. ಇದರಿಂದ ಸಂಗ್ರಹವಾದ ಹಣವನ್ನು ಸುರೇಶ ಕೋಣಿ ಎಂಬವರಿಗೆ ನೀಡುತ್ತಿರುವುದಾಗಿ ಬಂಧಿತ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಾರತೀಯ ಸೇನೆ ಸೇರ್ಪಡೆಗಾಗಿ ಅರ್ಜಿ ಆಹ್ವಾನ
  ಮಂಗಳೂರು, ಮೇ 14: ದಾವಣಗೆರೆ ಜಿಲ್ಲಾ ಸ್ಟೇಡಿಯಂನಲ್ಲಿ ಜೂನ್ 4ರಿಂದ 8ರವರೆಗೆ ಭಾರತೀಯ ಸೇನೆ ಸೇರ್ಪಡೆಗಾಗಿ ರ್ಯಾಲಿಯನ್ನು ಏರ್ಪಡಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಆಸಕ್ತ ಪುರುಷ ಅಭ್ಯರ್ಥಿಗಳಿಗೆ ಸೈನಿಕ ಲಿಪಿಕ, ಉಗ್ರಾಣ ಪಾಲಕ ತಾಂತ್ರಿಕ, ನರ್ಸಿಂಗ್ ಅಸಿಸ್ಟೆಂಟ್ ಸೋಲ್ಜರ್, ಟೆಕ್ನಿಕಲ್ ಮತ್ತು ಸೋಲ್ಜರ್ ಜಿ.ಡಿ. ಹುದ್ದೆಗಳಿಗೆ ಭರ್ತಿ ನಡೆಯಲಿದೆ.
 ಮಾಹಿತಿಗಾಗಿ ದೂ.ಸಂ.: 0824 2458376, ಆನ್‌ಲೈನ್ ರಿಜಿಸ್ಟ್ರೇಶನ್‌ಗಾಗಿ ಡಿಡಿಡಿ.್ಜಟಜ್ಞಿಜ್ಞಿಜಿಚ್ಞಚ್ಟಞ.್ಞಜ್ಚಿ.ಜ್ಞಿ ವೆಬ್‌ಸೈಟ್‌ನ್ನು ಮೇ 20 ರೊಳಗೆ ಸಂಪರ್ಕಿಸಬಹುದು ಎಂದು ಪ್ರಕಟನೆೆಯಲ್ಲಿ ತಿಳಿಸಿದೆ.

ಕ್ಷೇತ್ರ ಬಿಟ್ಟು ಹೊರ ಹೋಗಲು ಸೂಚನೆ
ಕಾಸರಗೋಡು, ಮೇ 14: ಬಹಿರಂಗ ಪ್ರಚಾರ ಕೊನೆಗೊಂಡ ಹಿನ್ನೆಲೆಯಲ್ಲಿ ಹೊರ ರಾಜ್ಯಗಳ ಮುಖಂಡರು ಹಾಗೂ ಕಾರ್ಯಕರ್ತರು ಜಿಲ್ಲೆ ಬಿಟ್ಟುತೆರಳು ವಂತೆ ಚುನಾವಣಾಧಿಕಾರಿಆದೇಶ ಹೊರಡಿಸಿದ್ದಾರೆ.ಬಹಿರಂಗಪ್ರಚಾರ ನಡೆಸಿದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಇಂದು ಮತಗಟ್ಟೆ ಸಾಮಗ್ರಿ ವಿತರೆ
 ಕಾಸರಗೋಡು, ಮೇ 14: ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಮತಗಟ್ಟೆಗಳಿಗಿರುವ ಸಾಮಗ್ರಿ ಮೇ 15ರಂದು ವಿತರಿಸಲಾಗುವುದು. ಮಂಜೇಶ್ವರ, ಕಾಸರಗೋಡು, ಉದುಮ ವಿಧಾನಸಭಾ ಕ್ಷೇತ್ರದ ಸಾಮಗ್ರಿಗಳು ಕಾಸರಗೋಡು ಸರಕಾರಿ ಕಾಲೇಜು, ಕಾಞಂಗಾಡ್, ತ್ರಿಕ್ಕರಿಪುರ ವಿಧಾನಸಭಾ ಕ್ಷೇತ್ರದ ಸಾಮಗ್ರಿಗಳು ಪಡನ್ನಕಾಡ್ ನೆಹರೂ ಕಾಲೇಜಿನಲ್ಲಿ ವಿತರಿಸಲಾಗುವುದು.
  ಆಯಾ ಕೇಂದ್ರಗಳಲ್ಲಿ ಪ್ರತಿ ಕ್ಷೇತ್ರಕ್ಕೆ 20 ಕೌಂಟರ್‌ಗಳನ್ನು ತೆರೆಯಲಾಗಿದ್ದು, ಬೆಳಗ್ಗೆ ಹತ್ತರಿಂದ ಸಾಮಗ್ರಿಗಳನ್ನು ವಿತರಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

ಬ್ರಹ್ಮಾವರ: ಅಕ್ರಮ ಮರಳುಗಾರಿಕೆ ಅಡ್ಡೆಗಳಿಗೆ ದಾಳಿ
ಬ್ರಹ್ಮಾವರ, ಮೇ 14: ಉಡುಪಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ನಂಜೇಗೌಡ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಮೇ 12ರಂದು ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧೆಡೆ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಪ್ರದೇಶಕ್ಕೆ ದಾಳಿ ನಡೆಸಿ ಸೊತ್ತುಗಳನ್ನು ವಶಪಡಿಸಿಕೊಂಡಿದೆ.
ಚೇರ್ಕಾಡಿ ಗ್ರಾಮದ ಮಡಿಸಾಲು ಹೊಳೆಯಲ್ಲಿ ಅನಧಿಕೃತವಾಗಿ ಮರಳುಗಾರಿಕೆ ನಡೆಸಿ ದಾಸ್ತಾನು ಇಟ್ಟಿರುವ ಪ್ರದೇಶಕ್ಕೆ ದಾಳಿ ನಡೆಸಿದ ತಂಡ, ಆ ಜಾಗದಲ್ಲಿ ದಾಸ್ತಾನು ಇರಿಸಿದ್ದ ಸುಮಾರು 336 ಘನ ಮೀಟರ್ ಮರಳು ಮಿಶ್ರಿತ ಗೊಜ್ಜು, ಸುಮಾರು 72 ಘನ ಮೀ. ಗೊಜ್ಜು, 24 ಘನ ಮೀ. ಸಾಮಾನ್ಯ ಮರಳನ್ನು ವಶಪಡಿಸಿಕೊಂಡಿದೆ. ಇದನ್ನು ಜಮೀನಿನ ಮಾಲಕ ವಿನ್ಸೆಂಟ್ ಪ್ರಕಾಶ್ ಡಿಅಲ್ಮೇಡಾ ನಡೆಸುತ್ತಿರುವುದಾಗಿ ತಿಳಿದುಬಂದಿದೆ.
ಹಲುವಳ್ಳಿ ಗ್ರಾಮದ ಸ್ವರ್ಣ ನದಿ ಬಳಿಯ ಜಾಗದಲ್ಲಿ ಅನಧಿಕೃತವಾಗಿ ನಡೆಯುತ್ತಿದ್ದ ಮರಳುಗಾರಿಕೆಗೆ ದಾಳಿ ನಡೆಸಿದ ತಂಡ ದಾಸ್ತಾನು ಇರಿಸಿದ್ದ ಸುಮಾರು 72 ಘನ ಮೀಟರ್ ಗೊಜ್ಜು , 1621 ಘನ ಮೀ. ಮರಳು ಮಿಶ್ರಿತ ಗೊಜ್ಜು, 378 ಘನ ಮೀ. ಮರಳನ್ನು ವಶಪಡಿಸಿಕೊಂಡಿದ್ದಾರೆ. ಈ ಮರಳುಗಾರಿಕೆಯನ್ನು ಜಮೀನಿನ ಮಾಲಕ ಜಾನ್ ಪಾಲ್ ರೂಪರ್ಟ್ ಡಿಸಿಲ್ವ ನಡೆಸುತ್ತಿರುವುದಾಗಿ ತಿಳಿದುಬಂದಿದೆ. ಪೆಜಮಂಗೂರು ಗ್ರಾಮದ ಬೆನಗಲ್ ಸಾಲ್ ಹೊಳೆಗೆ ಹೊಂದಿಕೊಂಡಿರುವ ಸರಕಾರಿ ಜಾಗದಲ್ಲಿ ರಘುವೀರ ಕಿಣಿ ಎಂಬವರು ನಡೆಸುತ್ತಿದ್ದ ಅನಧಿಕೃತ ಮರಳುಗಾರಿಕೆಗೆ ದಾಳಿ ಮಾಡಿದ ತಂಡ ಸುಮಾರು 4 ಮೆಟ್ರಿಕ್ ಟನ್‌ನಷ್ಟು ಮರಳನ್ನು ವಶಪಡಿಸಿಕೊಂಡಿದೆ. ಕಾರ್ಯಾಚರಣೆಯಲ್ಲಿ ಗ್ರಾಮಲೆಕ್ಕಿಗರು, ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್, ಪೊಲೀಸರು ಮತ್ತಿತರರಿದ್ದರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವಕ ನಾಪತ್ತೆ
ಕಾರ್ಕಳ, ಮೇ 14: ನಿಟ್ಟೆಯ ಆದಂ ಮುಹಮ್ಮದ್‌ರ ಪುತ್ರ ಮುಹಮ್ಮದ್ ಅಫ್ರೀಝ್(18) ಎಂಬಾತ ಮೇ 7 ರಂದು ಬೆಳಗ್ಗೆ ಮನೆಯಿಂದ ಕಾರ್ಕಳದ ಗ್ಯಾಲಕ್ಸಿ ಸಭಾಂ ಗಣದಲ್ಲಿನ ಮದುವೆಗೆ ಹೋಗಿ ಬರುವುದಾಗಿ ಹೇಳಿ ಹೋದ ವರು, ಈವರೆಗೆ ವಾಪಸು ಬಾರದೆ ನಾಪತ್ತೆಯಾಗಿದ್ದಾರೆ.

ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
  ಉಳ್ಳಾಲ, ಮೇ 14: ಪೆರ್ಮನ್ನೂರು ಗ್ರಾಮದ ಆಡಂಕುದ್ರು ಸೈಂಟ್ ಸೆಬಾಸ್ಟಿಯನ್ ಶಾಲೆ ಬಳಿಯ ಗದ್ದೆಯಲ್ಲಿ 42 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಪತ್ತೆಯಾಗಿದೆ. ಸಾಧಾರಣ ಶರೀರ ಹೊಂದಿರುವ ಗೋದಿ ಮೈಬಣ್ಣದ ಗ್ರೇಬಣ್ಣದ ಪ್ಯಾಂಟ್, ನೀಲಿ, ಗ್ರೇ ಮತ್ತು ಬಿಳಿ ಬಣ್ಣದ ದಪ್ಪಗೆರೆಯ ಟೀ ಶರ್ಟ್ ಧರಿಸಿದ್ದು, ಆಕಸ್ಮಿಕವಾಗಿ ಅಥವಾ ಯಾವುದೋ ಕಾಯಿಲೆಯಿಂದ ಬಳಲಿ ಮೃತಪಟ್ಟಿರುವ ಸಾಧ್ಯತೆ ಇದೆ. ಸಂಬಂ ಧಿತರು ಉಳ್ಳಾಲ ಪೊಲೀಸ್ ಠಾಣೆ ಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.

ಕೋಟ ಎಸ್ಸೈ ವರ್ಗಾವಣೆ ಯತ್ನಕ್ಕೆ ವಿರೋಧ
ಉಡುಪಿ, ಮೇ 14: ಕೋಟ ಪೊಲೀಸ್ ಠಾಣೆಯ ಎಸ್ಸೈ ಕಬ್ಬಾಳ್‌ರಾಜ್ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿ ಅವರ ವರ್ಗಾವಣೆಗೆ ಕೆಲ ಸ್ಥಾಪಿತ ಹಿತಾಸಕ್ತಿಗಳು ಪ್ರಯತ್ನ ನಡೆಸುತ್ತಿರುವುದಾಗಿ ಕೋಟ ಪರಿಸರದ ವಿವಿಧ ಸಂಘಟನೆಗಳು ಆರೋಪಿಸಿವೆ.
ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಮಟ್ಕಾ ಜುಗಾರಿ, ಭ್ರಷ್ಟಾಚಾರ ಸಹಿತ ಅಕ್ರಮ ಚಟುವಟಿಕೆಗಳನ್ನು ಮಟ್ಟ ಹಾಕುವಲ್ಲಿ ಕಬ್ಬಾಳ್‌ರಾಜ್ ಪ್ರಮುಖ ಪಾತ್ರ ವಹಿಸಿದ್ದರು. ವೈಯಕ್ತಿಕ ಹಿತಾಸಕ್ತಿಯಿಂದ ಸುಳ್ಳು ಆರೋಪ ಮಾಡಿ ಅವರ ವಿರುದ್ಧ ಜಾತಿ ಸಮಾಜವೊಂದನ್ನು ಎತ್ತಿಕಟ್ಟಿ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ ಎಂದು ಕೋಟ ಜಿಪಂ ಸದಸ್ಯ ರಾಘವೇಂದ್ರ ಕಾಂಚನ್ ಸುದ್ದಿಗೋಷ್ಟಿಯಲ್ಲಿಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ತೆಕ್ಕಟ್ಟೆ ಫ್ರೆಂಡ್ಸ್ ಸಂಚಾಲಕ ಪ್ರಕಾಶ್ ಶೆಟ್ಟಿ, ಶಂಕರ್ ದೇವಾಡಿಗ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯ ಭೋಜ ಪೂಜಾರಿ, ವಸಂತ ಗಿಳಿಯಾರು ಉಪಸ್ಥಿತರಿದ್ದರು.


ಕೋಟತಟ್ಟು ಜಮಾಅತ್: 
ಕಳೆದ ಒಂದು ವರ್ಷದಿಂದ ಕೋಟ ಪರಿಸರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಕೋಟ ಎಸ್ಸೈ ಕಬ್ಬಾಳ್‌ರಾಜ್‌ರನ್ನು ವರ್ಗಾವಣೆ ಮಾಡಲು ಕೆಲ ಸ್ಥಾಪಿತ ಹಿತಾಸಕ್ತಿಗಳು ಹುನ್ನಾರ ನಡೆಸುತ್ತಿವೆೆ ಎಂದು ಕೋಟತಟ್ಟು ರಿಫಾಯಿಯ್ಯ ಮಸೀದಿಯ ಗೌರವಾಧ್ಯಕ್ಷ ಕೋಟ ಇಬ್ರಾಹೀಂ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಸೀದಿಯ ಅಧ್ಯಕ್ಷ ಮೂಸಾ ಬ್ಯಾರಿ, ಕೋಶಾಧಿಕಾರಿ ದಾವೂದ್ ಬಿ.ಕೆ., ಕಾರ್ಯದರ್ಶಿ ಅಬ್ದುರ್ರಹ್ಮಾನ್, ಎಸ್ಸೆಸ್ಸೆಫ್ ಅಧ್ಯಕ್ಷ ಇಕ್ಬಾಲ್ ಕೋಟ ಉಪಸ್ಥಿತರಿದ್ದರು.

ವ್ಯಕ್ತಿ ಆತ್ಮಹತ್ಯೆ
 ಕುಂದಾಪುರ, ಮೇ 14: ವೈಯಕ್ತಿಕ ಕಾರಣದಿಂದ ಮನನೊಂದ ಕನ್ಯಾನ ಗ್ರಾಮದ ಕಳೆಬೈಲು ನಿವಾಸಿ ಶಿವರಾಮ ಶೆಟ್ಟಿ (60) ಎಂಬವರು ಮೇ 13 ರಂದು ರಾತ್ರಿ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿರುವುದಾಗಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X