ಪತ್ರಕರ್ತರ ರಕ್ಷಣೆಗೆ ವಿಶೇಷ ಕಾಯ್ದೆ: ಪಿಸಿಐ ಆಗ್ರಹ

ಹೊಸದಿಲ್ಲಿ, ಮೇ 14: ಕಳೆದೆರಡು ದಿನಗಳಲ್ಲಿ ಬಿಹಾರ ಹಾಗೂ ಜಾರ್ಖಂಡ್‌ಗಳಲ್ಲಿ ಇಬ್ಬರು ಪತ್ರಕರ್ತರ ಹತ್ಯೆಯನ್ನು ಪ್ರಬಲವಾಗಿ ಖಂಡಿಸಿರುವ ಭಾರತೀಯ ಪತ್ರಿಕಾ ಮಂಡಳಿ(ಪಿಸಿಐ), ಪತ್ರಕರ್ತರ ಸುರಕ್ಷೆಯನ್ನು ಖಚಿತಪಡಿಸಲು ವಿಶೇಷ ಕಾನೂನೊಂದನ್ನು ಜಾರಿಗೊಳಿಸಬೇಕು ಹಾಗೂ ಅವರ ವಿರುದ್ಧ ದಾಳಿ ಪ್ರಕರಣಗಳ ವಿಚಾರಣೆಯನ್ನು ತ್ವರಿತ ನ್ಯಾಯಾಲಯಗಳಲ್ಲಿ ನಡೆಸಬೇಕೆಂದು ಆಗ್ರಹಿಸಿದೆ.
ಇಲ್ಲಿ ಬಿಡುಗಡೆಗೊಳಿಸಲಾದ ಹೇಳಿಕೆಯೊಂದರಲ್ಲಿ ಪಿಸಿಐ ಅಧ್ಯಕ್ಷ, ನ್ಯಾಯಮೂರ್ತಿ(ನಿವೃತ್ತ) ಚಂದ್ರವೌಳಿಕುಮಾರ್ ಪ್ರಸಾದ್, ಹತ್ಯೆಗಳನ್ನು ‘ಪ್ರಬಲವಾಗಿ ಖಂಡಿಸಿದ್ದಾರೆ’ ಹಾಗೂ ಇಂತಹ ಶೇ.96ರಷ್ಟು ಪ್ರಕರಣಗಳಲ್ಲಿ ವಿಷಯವನ್ನು ತಾರ್ಕಿಕ ಅಂತ್ಯದ ವರೆಗೆ ಕೊಂಡೊಯ್ಯಲಾಗುವುದಿಲ್ಲವೆಂದು ಕಿಡಿಕಾರಿದ್ದಾರೆ.
ಕಳೆದ 4 ತಿಂಗಳಲ್ಲಿ ದೇಶದಲ್ಲಿ ನಾಲ್ವರು ಪತ್ರಕರ್ತರ ಹತ್ಯೆ ನಡೆದಿರುವುದು ಹಾಗೂ ಇನ್ನೊಬ್ಬ ಪತ್ರಕರ್ತ ಕರ್ತವ್ಯದಲ್ಲಿರುವಾಗಲೇ ಘೋರ ಅಪಘಾತಕ್ಕೆ ಬಲಿಯಾಗಿರುವುದು ಭಾರೀ ಕಳವಳದ ಸಂಗತಿಯಾಗಿದೆಯೆಂದು ಅವರು ಹೇಳಿದ್ದಾರೆ.
Next Story





