ಕಿರುಕುಳ ನೀಡಿದ ತಂದೆಯನ್ನು ಕೊಂದು ಹಾಕಿದ ಇಬ್ಬರು ಸಹೋದರಿಯರು!

ಮೀರತ್ ಮೇ 15: ನಿರಂತರ ಲೈಂಗಿಕ ಕಿರುಕುಳ ನೀಡುತ್ತಿದ್ದ ತಂದೆಯನ್ನು ಇಬ್ಬರು ಅಪ್ರಾಪ್ತ ವಯಸ್ಸಿನ ಸಹೋದರಿಯರು ಕೊಂದು ಹಾಕಿರುವ ಘಟನೆ ವರದಿಯಾಗಿದೆ. ಮದ್ಯಪಾನಿ ತಂದೆಯ ಕಿರುಕುಳ ಸಹಿಸಲಾಗದೆ ಸುತ್ತಿಗೆಯಿಂದ ಹೊಡೆದು ಕೊಂದಿದ್ದೇವೆ ಎಂದು ಬಾಲಕಿಯರಿಬ್ಬರೂ ವಿವರಿಸುತ್ತಿರುವ ದೃಶ್ಯಗಳು ಪ್ರಸಾರವಾಗುತ್ತಿದೆ. ಮೀರತ್‌ನ ಲಾಲಾ ಲಜ್‌ಪತ್‌ರಾಯ್ ಮೆಮೋರಿಯಲ್ ಮೆಡಿಕಲ್ ಕಾಲೇಜು ಸಮೀಪದ ರಾಜ್‌ನಗರಿನಲ್ಲಿ ಘಟನೆ ಸಂಭವಿಸಿದೆ. ಆದರೆ, ಬಾಲಕಿಯರು ತಮ್ಮ ತಂದೆ ಕರಣ್ ಸಿಂಗ್(45) ಎಂಬಾತನನ್ನು ಕೊಂದಿದ್ದಾರೆ ಎಂದು ಪ್ರಸಾರವಾಗುತ್ತಿರುವ ದೃಶ್ಯಗಳು ನಕಲಿ ಎಂದು ಪೊಲೀಸರು ಹೇಳುತ್ತಿದ್ದಾರೆ.
ಮದ್ಯಪಾನಿಯಾದ ಕರಣ್ ಸಿಂಗ್‌ನ ತಲೆ ಮನೆಯ ಗೋಡೆಗೆ ಬಡಿದು ಒಡೆದಿದೆ. ಆದ್ದರಿಂದ ಘಟನಾ ಸ್ಥಳದಲ್ಲಿ ಆತ ಮೃತನಾದ ಎಂದು ಪೊಲೀಸರು ವಿವರಿಸುತ್ತಿದ್ದಾರೆ. ಬಾಲಕಿಯರ ಹೆಸರಿನಲ್ಲಿ ಪ್ರಸಾರವಾಗುತ್ತಿರುವ ವೀಡಿಯೊದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವ ಕರಣ್ ಸಿಂಗ್‌ನ ಬಳಿಯಲ್ಲಿ ಅಪರಾಧ ಕೃತ್ಯಕ್ಕೆ ಬಳಸಿದ ಸುತ್ತಿಗೆಯೂ ಕಾಣುತ್ತಿದೆ. ದೈಹಿಕವಾಗಿ ಕಿರುಕುಳ ನೀಡುತ್ತಿದ್ದ ತಂದೆಯನ್ನು ಸುತ್ತಿಗೆಯಿಂದ ಹಲವು ಬಾರಿ ಹೊಡೆದ ನಂತರ ಸತ್ತ ಎಂದು ಬಾಲಕಿಯರಿಬ್ಬರೂ ಹೇಳುತ್ತಿದ್ದಾರೆ. ಬಾಲಕಿಯರು ಶಾಲಿನಿಂದ ಮುಖಮುಚ್ಚಿಕೊಂಡಿದ್ದಾರೆ.
ಘಟನೆಯ ನಂತರ ಕರಣ್ ಸಿಂಗ್‌ರ ಪತ್ನಿ ಐದುವರ್ಷದ ಕಿರುಪುತ್ರನನ್ನು ಕರೆದುಕೊಂಡು ಮನೆ ತೊರೆದಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕರಣ್‌ಸಿಂಗ್ ಮದ್ಯಾಪಾನಿಯಾಗಿದ್ದ ಮತ್ತು ಮನೆಯಲ್ಲಿ ಯಾವಾಗಲೂ ಗಲಾಟೆ ನಡೆಯುತ್ತಿತ್ತು ಎಂದು ಇವರು ಹೇಳುತ್ತಾರೆ. ಅದೇ ವೇಳೆ ಬಾಲಕಿಯರು ವೀಡಿಯೊದಲ್ಲಿ ಹೇಳುವುದು ತಿಳಿದಿಲ್ಲ ಅನಿರೀಕ್ಷಿತ ಸಾವು ಎಂಬುದಾಗಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಸುಪರಿಟೆಂಡೆಂಟ್ ಓಂಪ್ರಕಾಶ್ ಹೇಳಿದ್ದಾರೆ ಎಂದು ವರದಿಯಾಗಿದೆ.







