ಪನಾಮದಲ್ಲಿ ಇಮ್ರಾನ್ ಖಾನ್‌ಗೂ ಕಂಪೆನಿಯಿತ್ತು!

ಇಸ್ಲಾಮಾಬಾದ್ ಮೇ 15: ಪಾಕಿಸ್ತಾನದ ವಿಶ್ವಪ್ರಸಿದ್ಧ ಮಾಜಿ ಕ್ರಿಕೆಟ್ ಆಟಗಾರ, ತೆಹ್ರೀಕೆ ಇನ್ಸಾಫ್ ಪಕ್ಷದ ಅಧ್ಯಕ್ಷ ಇಮ್ರಾನ್ ಖಾನ್ ಪನಾಮದಲ್ಲಿ ಕಂಪೆನಿಯನ್ನು ರೂಪೀಕರಿಸಿದ್ದೆ ಎಂದು ಒಪ್ಪಿಕೊಂಡಿದ್ದಾರೆ. ಲಂಡನ್‌ನಲ್ಲಿ ತನಗೊಂದು ಫ್ಲಾಟ್ ಖರೀದಿಸಬೇಕಿತ್ತು. ಆ ಸಮಯದಲ್ಲಿ ಬ್ರಿಟಿಷ್ ಸರಕಾರದ ತೆರಿಗೆಯಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಕಂಪೆನಿ ಆರಂಭಿಸಿದೆ ಎಂದು ಖಾನ್ ಸಮ್ಮತಿಸಿದ್ದಾರೆಂದು ವರದಿಯಾಗಿದೆ.
ಖಾನ್‌ಗೆ ಅಂತಹ ಕಂಪೆನಿಯೇ ಇಲ್ಲ ಎಂದು ತೆಹ್ರಿಕ್ ಪಕ್ಷದ ಅಧಿಕೃತ ಹೇಳಿಕೆ ಬಂದ ಬೆನ್ನಿಗೆ ತಾನು ಕಂಪೆನಿಯನ್ನು ಹೊಂದಿದ್ದೆ ಎಂದು ಖಾನ್ ಸ್ವಯಂ ಸಮ್ಮತಿಸಿದ್ದಾರೆ. ಈ ಮೊದಲು ಪನಾಮ ಪೇಪರ್ ಲೀಕ್ಸ್‌ನಲ್ಲಿ ಇಮ್ರಾನ್ ಖಾನ್‌ರ ನಾಲ್ಕು ಮಕ್ಕಳಲ್ಲಿ ಮೂವರ ಹೆಸರಿತ್ತು.
ಅದೇ ವೇಳೆ ಹೊರಗೆ ಬಂದ ದಾಖಲೆಯಲ್ಲಿರುವ ಅಣುವಿಜ್ಞಾನಿ ಆರೋಪವನ್ನು ನಿರಾಕರಿಸಿದ್ದಾರೆ. ಅಣುವಿಜ್ಞಾನಿಅಬ್ದುಲ್ ಖದೀರ್ ಖಾನ್ ಮತ್ತು ಸಹೋದರ, ಪತ್ನಿ ಇಬ್ಬರು ಮಕ್ಕಳ ಹೆಸರುಗಳಿದ್ದವು. ತಾನು ಆ ಕಂಪೆನಿಯ ಹೆಸರನ್ನೇ ಕೇಳಿಲ್ಲ ಎಂದು ಖದೀರ್ ಖಾನ್ ಹೇಳಿರುವುದಾಗಿ ವರದಿಯಾಗಿದೆ.





