ಮೇ 16ರಿಂದ ಬೌದ್ಧ ಮಹಾಸಭಾ ವತಿಯಿಂದ ಶಿಬಿರ
ಮಂಗಳೂರು,ಮೇ 15: ದ.ಕ. ಜಿಲ್ಲಾ ಬೌದ್ಧ ಮಹಾಸಭಾ ಮಂಗಳೂರು ಇದರ ವತಿಯಿಂದ 4 ದಿನದ ವಿದ್ಯಾರ್ಥಿಗಳ ಶಿಬಿರವು ಮೇ 16 ರಿಂದ ಮೇ 19 ರವರೆಗೆ ಬಜ್ಪೆಯ ಸಿದ್ದಾರ್ಥನಗರದ ಸಾಮ್ರಾಟ್ ಅಶೋಕ ಚಕ್ರವರ್ತಿ ಸಭಾಭವನದಲ್ಲಿ ನಡೆಯಲಿದೆ.
ಶಿಬಿರವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಕೃಷ್ಣಪ್ಪ ಸ್ಥಾಪಿತ)ಯ ರಾಜ್ಯ ಸಂಘಟನಾ ಸಂಚಾಲಕ ಎಂ.ದೇವದಾಸ್ ಉದ್ಘಾಟಿಸಲಿದ್ದಾರೆ.
ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತಂದು ವ್ಯಕ್ತಿತ್ವ ವಿಕಸನ ಮತ್ತು ಸೃಜನ ಶೀಲತೆಯನ್ನು ಬೆಳೆಸುವ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ತರಬೇತಿ ಶಿಬಿರವನ್ನು ವ್ಯವಸ್ಥೆಗೊಳಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
Next Story





