ಪುತ್ತೂರು: ರಾಜ್ಯ ನಿವೃತ್ತ ನೌಕರರ ಸಂಘದ ವಾರ್ಷಿಕ ಮಹಾಸಭೆ

ಪುತ್ತೂರು, ಮೇ 15: ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ವಾರ್ಷಿಕ ಮಹಾಸಭೆಯು ರವಿವಾರ ಪುತ್ತೂರಿನಲ್ಲಿರುವ ಎನ್‌ಜಿಒ ಹಾಲ್‌ನಲ್ಲಿ ನಡೆಯಿತು.
ಪುತ್ತೂರಿನ ದರ್ಬೆಯ ‘ಮಕ್ಕಳ ಮಂಟಪ’ ಶಿಕ್ಷಣ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಸುಕುಮಾರ ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅತಿಥಿಯಾಗಿದ್ದ ಸುಬ್ರಾಯ ಚೊಕ್ಕಾಡಿ ಮಾತನಾಡಿದರು. ಸಂಘದ ಅಧ್ಯಕ್ಷ ರಾಮಯ್ಯ ನಾಕ್ ಅಧ್ಯಕ್ಷತೆ ವಹಿಸಿದ್ದರು.
ನಿಧನರಾದ ಸಂಘದ ಸದಸ್ಯರಿಗೆ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಚಂದ್ರಶೇಖರ ಮತ್ತು ಸೂರಪ್ಪಗೌಡರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಕಾರ್ಯದರ್ಶಿ ಬಿ.ಐತ್ತಪ್ಪನಾಯ್ಕಾ ಪ್ರಾಸ್ತಾವಿಕ ಮಾತುಗಳೊಂದಿಗೆ ವರದಿ ವಾಚಿಸಿದರು. ಕೋಶಾಧಿಕಾರಿ ಯು.ಶಿವಶಂಕರ ಭಟ್ ಲೆಕ್ಕ ಪತ್ರ ಮಂಡಿಸಿದರು. ಜೊತೆ ಕಾರ್ಯದರ್ಶಿ ಶರತ್‌ಕುಮಾರ್ ರಾವ್ ಠರಾವು ಮಂಡಿಸಿದರು.
ಉಪಾಧ್ಯಕ್ಷ ಹಾಜಿ ಇಬ್ರಾಹೀಂ ಆತೂರು ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಜಗನ್ನಾಥ ರೈ ವಂದಿಸಿದರು.
ಸದಸ್ಯರಾದ ಶಂಕರಿ ಭಟ್ ಮತ್ತು ದೇವದಾಸ್ ಗೌಡ ನಿರೂಪಿಸಿದರು.
Next Story







