6 ವರ್ಷದ ಮಗಳನ್ನು ಅತ್ಯಾಚಾರ ಮಾಡಿ ಎಂದು ಜಾಹೀರಾತು ನೀಡಿದ ತಾಯಿ!
ಎಲ್ಲಿಗೆ ಬಂದು ತಲುಪಿದೆ ಈ ಜಗತ್ತು?

ಅಮೆರಿಕ,ಮೇ 15: ಹಣ ಪಾವತಿಸಿ, ತನ್ನ ಆರು ವರ್ಷದ ಪುತ್ರಿಯನ್ನು ಅತ್ಯಾಚಾರ ಮಾಡುವಂತೆ ಅಂತರ್ಜಾಲ ತಾಣವೊಂದರಲ್ಲಿ ಜಾಹೀರಾತು ಪ್ರಕಟಿಸಿದ ತಾಯಿಯೊಬ್ಬಳಿಗೆ, ಅಮೆರಿಕದ ನ್ಯಾಯಾಲಯವೊಂದು 26 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
35 ವರ್ಷ ವಯಸ್ಸಿನ ಈ ಮಹಿಳೆ ಹಾಗೂ 57 ವರ್ಷದ ಆಕೆಯ ಪತಿ, ‘ಟ್ರಾವ್‌ಲೆಡ್ ಕ್ರೆಗ್‌ಸ್ಲಿಸ್ಟ್’ಎಂಬ ಜನಪ್ರಿಯ ಸಂಕ್ಷಿಪ್ತ ಜಾಹೀರಾತುಗಳ ವೆಬ್‌ಸೈಟ್‌ನಲ್ಲಿ, ವಾಶಿಂಗ್ಟನ್‌ನಲ್ಲಿರುವ ಮೆರೀಸ್‌ವಿಲ್ಲೆಯಲ್ಲಿರುವ ತನ್ನ ಮನೆಗೆ ಬಂದು ಪುತ್ರಿಯ ಮೇಲೆ ಲೈಂಗಿಕ ಅತ್ಯಾಚಾರವೆಸಗಬಹುದೆಂಬ ಜಾಹೀರಾತನ್ನು ಪ್ರಕಟಿಸಿದ್ದಳು.
2014ರಲ್ಲಿ ಈ ದಂಪತಿಯನ್ನು ಬಂಧಿಸಲಾಗಿದ್ದು, ಆ ಬಳಿಕ ಬಾಲಕಿ ಹಾಗೂ ಆಕೆಯ ಸೋದರನನ್ನು ಉಚಪಾಲನಾ ಕೇಂದ್ರದಲ್ಲಿ ಇರಿಸಲಾಗಿದೆ.
ಈ ದಂಪತಿಯ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸ್ ಅಧಿಕಾರಿಗಳು, ಬಾಲಕಿಯ ಮೇಲೆ ಅಪರಿಚಿತನೊಬ್ಬ ಲೈಂಗಿಕ ದೌರ್ಜನ್ಯವೆಸಗುತ್ತಿರುವಾಗ, ತಾಯಿ ವೀಕ್ಷಿಸುತ್ತಿರುವ ವಿಡಿಯೋವನ್ನು ವಶಪಡಿಸಿಕೊಂಡಿದ್ದರು. ಬಾಲಕಿಯನ್ನು ಲೈಂಗಿಕವಾಗಿ ಬಿಂಬಿಸುವ ಛಾಯಾಚಿತ್ರಗಳು ಕೂಡಾ ಅವರಿಗೆ ದೊರೆತಿದ್ದವು.
ಕಳೆದ ಜೂನ್‌ನಲ್ಲಿ ಆಕೆಯ ಪತಿಯನ್ನು ಮಗುವಿನ ಮೇಲೆ ಅತ್ಯಾಚಾರ ಹಾಗೂ ಕಿರುಕುಳ ನೀಡಿದ ಮತ್ತು ಲೈಂಗಿಕ ದೃಶ್ಯಗಳ ಚಿತ್ರೀಕರಣ ನಡೆಸಿದ ಅಪರಾಧಕ್ಕಾಗಿ 27 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.







