ಆಂಧ್ರದ ಗುಂಟೂರಿನಲ್ಲಿ ಅಪಘಾತ: ಮಂಗಳೂರಿನ ಇಬ್ಬರು ಮೃತ್ಯು

ಮಂಗಳೂರು, ಮೇ 15: ಆಂಧ್ರಪ್ರದೇಶದ ಗುಂಟೂರಿನಲ್ಲಿ ಶುಕ್ರವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಂಗಳೂರಿನ ಇಬ್ಬರು ಸೇರಿದಂತೆ ನಾಲ್ಕು ಮಂದಿ ಮೃತಪಟ್ಟಿದ್ದಾರೆ.
ಮೂಲತ ಪಶ್ಚಿಮ ಬಂಗಾಲದ ಕೊಲ್ಕತ್ತಾದವರಾದ ಮುಕ್ತಿ ಬೆಹ್ರಾ (40) ಎಂಬವರು ಮಂಗಳೂರಿನಲ್ಲಿ ಕಳೆದ 20 ವರ್ಷಗಳಿಂದ ವಾಸವಿದ್ದರು. ಅವರು ತಮ್ಮ ಪರಿಚಯಸ್ಥರೊಂದಿಗೆ ಕೋಲ್ಕತ್ತಾಗೆ ಕಾರಿನಲ್ಲಿ ತೆರಳಿ ಅಲ್ಲಿಂದ ಮರಳಿ ಮಂಗಳೂರಿಗೆ ಬರುತ್ತಿದ್ದಾಗ, ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನಡೆಂಡ್ಲಾಮಂಡಲ್ ಎಂಬಲ್ಲಿ ನಿಲ್ಲಿಸಿದ್ದ ಟ್ರಕ್‌ಗೆ ಕಾರು ಢಿಕ್ಕಿ ಹೊಡೆದಿದೆ.
ಈ ಸಂದರ್ಭ ಮುಕ್ತಿ ಬೆಹ್ರಾ ಹಾಗೂ ಅವರ ಪರಿಚಯಸ್ಥರ ಪುತ್ರಿ ಗ್ರೇಸ್ ಸುವಚಿತ (17) ಎಂಬವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟ ಗ್ರೇಸ್ ಸುವಚಿತ ಅವರ ತಾಯಿ ಸುಮನಾ ತೀವ್ರವಾಗಿ ಗಾಯಗೊಂಡಿದ್ದು, ಗುಂಟೂರಿನ ಸರಕಾರಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Next Story





