ಕಿಂಗ್ಸ್ ಇಲೆವೆನ್ ವಿರುದ್ಧ ಸನ್‌ರೈಸರ್ಸ್‌ಗೆ ಜಯ : ವಾರ್ನರ್ ತಂಡ ಪ್ಲೇ ಆಫ್‌ಗೆ ಲಗ್ಗೆ

ಮೊಹಾಲಿ,ಮೇ 15: ಇಲ್ಲಿ ನಡೆದ ಐಪಿಎಲ್‌ನ 46ನೆ ಪಂದ್ಯದಲ್ಲಿ ಕಿಂಗ್ಸ್ ಇಂದು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ತಂಡ 7 ವಿಕೆಟ್‌ಗಳ ಭರ್ಜರಿ ಜಯ ಗಳಿಸಿ ಪ್ಲೇ ಆಫ್‌ನಲ್ಲಿ ಅವಕಾಶ ದೃಢಪಡಿಸಿದೆ.
ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 180 ರನ್‌ಗಳ ಸವಾಲನ್ನು ಪಡೆದ ಹೈದರಾಬಾದ್ ತಂಡ ಇನ್ನೂ 2 ಎಸೆತಗಳು ಬಾಕಿ ಇರುವಾಗಲೇ 3 ವಿಕೆಟ್ ನಷ್ಟದಲ್ಲಿ 180 ರನ್ ಗಳಿಸಿ ಗೆಲುವಿನ ದಡ ಸೇರಿತು.
ನಾಯಕ ಡೇವಿಡ್ ವಾರ್ನರ್ 52 ರನ್, ಶಿಖರ್ ‘ವನ್ 25 ರನ್, ದೀಪಕ್ ಹೂಡಾ 34 ರನ್, ಯುವರಾಜ್ ಸಿಂಗ್ ಔಟಾಗದೆ 42 ರನ್ ಮತ್ತು ಕಟ್ಟಿಂಗ್ 21 ರನ್ ಗಳಿಸಿ ತಂಡದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 179 ರನ್ ಗಳಿಸಿತ್ತು. ಆರಂಭಿಕ ದಾಂಡಿಗ ಹಾಶಿಮ್ ಅಮ್ಲ 96 ರನ್(56ಎ, 14ಬೌ, 2ಸಿ) ಗಳಿಸಿದ್ದರು.
Next Story





