ಗಾಂಜಾ ಸೇವನೆ: ಓರ್ವನ ಬಂಧನ
ಮಂಗಳೂರು, ಮೇ 15: ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದ ಮೆಲೆ ಕಾವೂರು ಠಾಣಾ ಪೊಲೀಸರು ಮೂಡುಶೆಡ್ಡೆಯ ನವಾಜ್ (23) ಎಂಬಾತನನು ್ನ ಬಂಧಿಸಿದ್ದಾರೆ.
ನವಾಜ್ ಮೂಡುಶೆಡ್ಡೆ ಬಸ್‌ಸ್ಟಾಂಡ್ ಹಿಂಭಾಗದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದಾಗ ಪೊಲೀಸರು ಬಂಧಿಸಿದ್ದು ಆತನನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ಸಾಬೀತಾಗಿದೆ. ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





