ಉಡುಪಿ: 11 ಕಲಾವಿದರಿಗೆ ‘ರಾಮವಿಠಲ ಪ್ರಶಸ್ತಿ’ ಪ್ರದಾನ

ಉಡುಪಿ, ಮೇ 15: ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಪೇಜಾವರ ಮಠದ ವತಿಯಿಂದ 11ಮಂದಿ ಕಲಾವಿದರಿಗೆ ರಾಮ ವಿಠಲ ಪ್ರಶಸ್ತಿಯನ್ನು ರವಿವಾರ ರಾಜಾಂಗಣದಲ್ಲಿ ಪ್ರದಾನ ಮಾಡಲಾಯಿತು.
ಸೀತಾರಾಮ ಆಚಾರ್ಯ, ಕೆ.ಪಿ.ರಾವ್, ಡಾ.ಪಾದೆಕಲ್ಲು ವಿಷ್ಣು ಭಟ್, ಪ್ರತಿಭಾ ಎಲ್.ಸಾಮಗ, ಕೆ.ರಾಘವೇಂದ್ರ ಭಟ್, ಪುಂಡಲಿಕಾಕ್ಷ ಉಪಾಧ್ಯ, ನಾರಾಯಣ ಶಬರಾಯ, ಬಂಟ್ವಾಳ ಜಯರಾಮ ಆಚಾರ್ಯ, ರಮೇಶ್ ಭಂಡಾರಿ, ದೇವದಾಸ್ ಕಾಪಿಕಾಡ್, ಉಪಾಧ್ಯಾಯ ಮೂಡುಬೆಳ್ಳೆ ಅವರಿಗೆ ರಾಮ ವಿಠಲ ಪ್ರಶಸ್ತಿ ಹಾಗೂ ಸೂರಾಲು ಪರಮೇಶ್ವರ ಭಟ್ ಅವರಿಗೆ ಶ್ರೀಕೃಷ್ಣಾನುಗ್ರಹ ಪ್ರಶಸ್ತಿಯನ್ನು ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಪ್ರದಾನ ಮಾಡಿದರು.
ಪೇಜಾವರ ಕಿರಿಯ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಮುರಳಿ ಕಡೆಕಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
Next Story





