ಮಳೆಗಾಗಿ ಬಪ್ಪನಾಡು ದೇವಾಲಯದಲ್ಲಿ ಸೀಯಾಳಾಭಿಷೇಕ

ಮುಲ್ಕಿ, ಮೇ 15: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಳೆಗಾಗಿ ಪ್ರಾರ್ಥಿಸಿ ಬಪ್ಪನಾಡು 9 ಮಾಗಣೆಯ ಗ್ರಾಮಸ್ಥರಿಂದ ರವಿವಾರ ಸೀಯಾಳಾಭಿಷೇಕ ನಡೆಯಿತು. ಕ್ಷೇತ್ರದ ಅರ್ಚಕ ನರಸಿಂಹ ಭಟ್ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಹಿರಿಯ ಅರ್ಚಕ ಕೃಷ್ಣದಾಸ್ ಭಟ್ ಸೀಯಾಳಾಭೀಷೇಕ ಹಾಗೂ ಪೂಜೆ ನೆರವೇರಿಸಿದರು. ಮುಲ್ಕಿಯ ಪ್ರಥಮ ಪ್ರಜೆ ಮೀನಾಕ್ಷಿ ಎಂ. ಬಂಗೇರಾ, ಶಿವಶಂಕರ ವರ್ಮ, ಹಾಗೂ 9ಮಾಗಣೆ ಭಕ್ತಾದಿಗಳು ಉಪಸ್ಥಿತರಿದ್ದರು.
Next Story





