ಮುಲ್ಕಿ: ಜಿಎಸ್‌ಬಿ ಸಭಾ ವತಿಯಿಂದ ರಕ್ತದಾನ ಶಿಬಿರ

ಮುಲ್ಕಿ, ಮೇ 15: ಜಿಎಸ್‌ಬಿ ಸಭಾ ಮುಲ್ಕಿ ಮತ್ತು ವೆನ್‌ಲಾಕ್ ಆಸ್ಪತ್ರೆ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರವು ಶ್ರೀಧರ ಪದ್ಮನಾಭ ಕಾಮತ್ ಸ್ಮಾರಕ ಸಭಾಗೃಹದಲ್ಲಿ ರವಿವಾರ ನಡೆಯಿತು.
ಈ ಸಂದರ್ಭ ಜಿಲ್ಲಾ ರಕ್ತ ನಿಧಿ ಕೇಂದ್ರದ ಹಿರಿಯ ಸರ್ಜನ್ ಡಾ. ಶರತ್ ಕುಮಾರ್ ರಾವ್ ಜೆ., ತಾಂತ್ರಿಕ ನಿರ್ವಾಹಕ ಆ್ಯಂಟನಿ ಡಿಸೋಜಾ, ಜಿಎಸ್‌ಬಿ ಸಭಾದ ಅಧ್ಯಕ್ಷ ಸತ್ಯೇಂದ್ರ ಶೆಣೈ, ಉಪಾಧ್ಯಕ್ಷ ಜಿ.ಜಿ.ಕಾಮತ್, ಮುಲ್ಕಿ ವೆಂಕಟರಮಣ ದೇವಸ್ಥಾನದ ಟ್ರಸ್ಟಿ ನಾರಾಯಣ ಶೆಣೈ ಮತ್ತಿತರರು ಉಪಸ್ಥಿತರಿದ್ದರು.
Next Story





