Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮೋದಿಯ ಕಾಲೇಜು ಪದವಿ ಪ್ರಮುಖವಲ್ಲ; ಆದರೆ...

ಮೋದಿಯ ಕಾಲೇಜು ಪದವಿ ಪ್ರಮುಖವಲ್ಲ; ಆದರೆ ಓರ್ವ ಪ್ರಧಾನಿ ಸುಳ್ಳು ಯಾಕೆ ಹೇಳಬೇಕು?

ಮಣಿಶಂಕರ್ ಅಯ್ಯರ್ಮಣಿಶಂಕರ್ ಅಯ್ಯರ್15 May 2016 10:31 PM IST
share
ಮೋದಿಯ ಕಾಲೇಜು ಪದವಿ ಪ್ರಮುಖವಲ್ಲ; ಆದರೆ ಓರ್ವ ಪ್ರಧಾನಿ ಸುಳ್ಳು ಯಾಕೆ ಹೇಳಬೇಕು?

ರಾಜೀವ್ ಗಾಂಧಿಯವರು ಧಿರೇನ್ ಭಗತ್‌ಗೆ ನೀಡಿದ್ದ ಸಂದರ್ಶನವೊಂದರಲ್ಲಿ ನಾನೂ ಕುಳಿತಿದ್ದೆ, ಅದರಲ್ಲಿ ಭಗತ್, ರಾಜೀವ್ ಬಳಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ನೀವು ಯಾವ ರೀತಿಯ ಪದವಿ ಪಡೆದಿದ್ದೀರಿ ಎಂದು ಪ್ರಶ್ನಿಸಿದ್ದರು. ಅದಕ್ಕೆ ರಾಜೀವ್ ಥಟ್ಟನೆ, ನೇಗಿಲು ಹೊಡೆಯುತ್ತಿದ್ದೆ ಎಂದು ಉತ್ತರಿಸಿದರು. ಒಂದು ಕ್ಷಣ ಅವಕ್ಕಾದ ಭಗತ್, ಕ್ಷಮಿಸಿ ಅರ್ಥವಾಗಲಿಲ್ಲ ಎಂದಾಗ ಪ್ರಧಾನ ಮಂತ್ರಿ ರಾಜೀವ್ ಗಾಂಧಿ, ಅನುತ್ತೀರ್ಣನಾಗಿದ್ದೆ ಎಂದು ಸ್ಪಷ್ಟನೆ ನೀಡಿದರು. ಪ್ರಧಾನ ಮಂತ್ರಿಯಾಗಲು ಪದವಿಯ ಅಗತ್ಯವಿಲ್ಲ, ಆದರೆ ಅತ್ಯಂತ ಮುಖ್ಯವಾದುದೇನೆಂದರೆ ಸತ್ಯವಂತರಾಗಿರುವುದು, ನೇರ ಮತ್ತು ಸ್ಪಷ್ಟವಾಗಿರುವುದು. ರಾ ಗಾಂಧಿಯವರು ಕೂಡಾ ಶಾಂತಿ ನಿಕೇತನ್‌ನಿಂದ ಪದವಿ ಪಡೆದಿದ್ದರು ಆದರೆ ಆಕ್ಸ್‌ಫರ್ಡ್‌ನಲ್ಲಿಅನುತ್ತೀರ್ಣಗೊಂಡಿದ್ದರು. ಜವಾಹರ್ ಲಾಲ್ ನೆಹರೂ ಅವರಿಗೂ ಎರಡನೆ ದರ್ಜೆಯಲ್ಲಿ ಉತ್ತೀರ್ಣರಾಗುವುದಕ್ಕಿಂತ ಹೆಚ್ಚೇನೂ ಮಾಡಲು ಆಗಲಿಲ್ಲ. ಲಾಲ್ ಬಹದೂರ್ ಅವರ ಹೆಸರ ಜೊತೆಗಿದ್ದ ‘ಶಾಸ್ತ್ರಿ’ ಅವರ ಪದವಿಯಾಗಿತ್ತು ಉಪನಾಮವಲ್ಲ. ಪಿವಿ ನರಸಿಂಹ ರಾವ್ ಅವರು ಬಹಳ ಸುಶಿಕ್ಷಿತ ಮನುಷ್ಯರಾಗಿದ್ದರು, ಆದರೆ ವೀರ್ ಸಾಂಘ್ವಿ ಹೇಳುವಂತೆ, ಅವರು ಹದಿನೆಂಟು ಭಾಷೆಗಳನ್ನು ಬಲ್ಲವರಾಗಿದ್ದರು. 

ಆದರೆ ಒಂದರಲ್ಲೂ ನಿರ್ಧಾರ ತೆಗೆದುಕೊಳ್ಳಲು ಆಗುತ್ತಿರಲಿಲ್ಲ!. ಇನ್ನು ದೇವೇಗೌಡ ಮತ್ತು ಚಂದ್ರಶೇಖರ್ ಅವರ ವಿದ್ಯಾಭ್ಯಾಸದ ಬಗ್ಗೆ ಕಡಿಮೆ ಮಾತಾಡಿದಷ್ಟು ಒಳ್ಳೆಯದು. ಮೊರಾರ್ಜಿ ದೇಸಾಯಿ ಬಗ್ಗೆ ಹೇಳುವುದಾದರೆ ಅವರ ಪದವಿಗಿಂತ ಅವರ ಚಿಕಿತ್ಸೆಗಳು ಹೆಚ್ಚು ಪ್ರಸಿದ್ಧವಾಗಿದ್ದವು. ಇಂದರ್ ಗುಜ್ರಾಲ್ ಲಾಹೋರ್‌ನಲ್ಲಿ ಓರ್ವ ಪ್ರತಿಭಾವಂತ ವಿದ್ಯಾರ್ಥಿ ಎಂದು ಕರೆಸಿಕೊಂಡಿದ್ದರು. ಡಾ. ಮನ್‌ಮೋಹನ್ ಸಿಂಗ್ ಅವರು ನಮ್ಮ ಹಲವು ಪ್ರಧಾನ ಮಂತ್ರಿಗಳ ಉನ್ನತ ವಿದ್ಯಾಭ್ಯಾಸದ ಬಗೆಗಿನ ಹೇಳಿಕೆಗಳನ್ನು ಒಬ್ಬರೇ ಹೊಂದಿದವರಾಗಿದ್ದಾರೆ. ಇಲ್ಲಿ ಸ್ಪಷ್ಟಪಡಿಸುವ ಅಂಶವೆಂದರೆ ಪ್ರಧಾನ ಮಂತ್ರಿ ಎಂದರೆ ಐಎಎಸ್ ಅಧಿಕಾರಿಯಲ್ಲ. ಆತ ಆ ಹುದ್ದೆಗೆ ಅರ್ಹನಾಗಲು ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣನಾಗುವ ಅಗತ್ಯವಿಲ್ಲ. ನಮ್ಮ ಗಡಿಯಿಂದ ಆಚೆ ನೋಡಿದರೂ ಇದೇ ಅನ್ವಯವಾಗುತ್ತದೆ. ಶೇಖ್ ಹಸೀನಾ ತುಂಬಾ ಓದಿದವರಲ್ಲ. ಆಂಗ್ ಸನ್ ಸೂಕಿ ಉನ್ನತ ಶಿಕ್ಷಣ ಪಡೆದವರು. ರಾಣಿ ವಿಕ್ರಮಸಿಂಗೆಯವರೂ ಪದವೀಧರರಾಗಿದ್ದಾರೆ. ನವಾಝ್ ಶರೀಫ್ ಬಳಿ ಒಂದೂ ಇಲ್ಲ. ವಿನ್ಸೆಂಟ್ ಚರ್ಚಿಲ್ ಆಗಲಿ ಅಥವಾ ಡಿ ಗಾಲೆ ವಿಶ್ವವಿದ್ಯಾನಿಲಯದ ಮೆಟ್ಟಿಲು ಹತ್ತಿದವರಲ್ಲ. ಹೊಚಿ ಮಿನ್ ಅಥವಾ ಮೋ ಕೂಡಾ ಹೋಗಿಲ್ಲ. ಜಾರ್ಜ್ ಡಬ್ಲ್ಯೂ ಬುಷ್ ಶೈಕ್ಷಣಿಕವಾಗಿ ದೊಡ್ಡ ವೈಫಲ್ಯವಾಗಿದ್ದರು. ಕೆನೆಡಿ ಮತ್ತು ಕ್ಲಿಂಟನ್ ಅವರು ಉತ್ತಮ ಶೈಕ್ಷಣಿಕ ಹಿನ್ನೆಲೆ ಹೊಂದಿದ್ದರು. ನಿಕ್ಸನ್ ಅಥವಾ ರೇಗನ್ ಅಷ್ಟಾಗಿ ವಿದ್ಯಾವಂತರಾಗಿರಲಿಲ್ಲ. ಡೊನಾಲ್ಡ್ ಟ್ರಂಪ್ ಬಗ್ಗೆ ಹೇಳುವುದಕ್ಕಿಂತ ಸುಮ್ಮನೆ ಇರುವುದೇ ಒಳ್ಳೆಯದು.

ಹೀಗೆ ಹೇಳುತ್ತಲೇ ಹೋಗಬಹುದು. ತಿಳಿದುಕೊಳ್ಳಬೇಕಾದ ವಿಷಯವೆಂದರೆ, ಓರ್ವ ಪ್ರಧಾನಿ ತನ್ನ ವಿದ್ಯಾಭ್ಯಾಸದಲ್ಲಿ ಯಾವ ರೀತಿಯ ನಿರ್ವಹಣೆ ತೋರಿದ್ದಾನೆ ಎಂಬುದಕ್ಕೂ ಆತ ದೇಶದ ಪ್ರಧಾನಿಯಾಗಿ ಯಾವ ರೀತಿಯ ನಿರ್ವಹಣೆ ತೋರುತ್ತಾನೆ ಎನ್ನುವುದಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ನರೇಂದ್ರ ದಾಮೋದರ್ ದಾಸ್ ಮೋದಿ ಒಂದು ಸರಳ ಪ್ರಶ್ನೆಗೆ ಉತ್ತರವನ್ನು ನೀಡುವಷ್ಟು ನೆನಪು ಹೊಂದಿರುತ್ತಾರೆ: ಎಲ್ಲಿ ಮತ್ತು ಯಾವಾಗ, ಯಾವ ವಿಷಯದಲ್ಲಿ ನೀವು ಪದವಿಯನ್ನು ಪಡೆದುಕೊಂಡಿದ್ದೀರಿ? ಅಥವಾ ನೀವು ವಿಶ್ವವಿದ್ಯಾನಿಲಯಕ್ಕೆ ಹೋಗಿಯೇ ಇಲ್ಲವೇ? ಅಂದರೆ, ದೇಶದ ಮುಖ್ಯಸ್ಥನಾಗಬೇಕೆಂಬ ನಿಮ್ಮ ಮಹತ್ವಾಕಾಂಕ್ಷೆಗೆ ಅಗತ್ಯವಿಲ್ಲವೆಂದು ವಿಶ್ವವಿದ್ಯಾನಿಲಯವನ್ನು ತ್ಯಜಿಸಿದಿರಾ? ಶೈಕ್ಷಣಿಕ ವಿವರಣೆ ಸಾಕು ಅಥವಾ ನೇರವಾಗಿ, ನಾನು ವಿಶ್ವವಿದ್ಯಾನಿಲಯಕ್ಕೆ ಹೋಗಿಲ್ಲ ಎಂದರೂ ಸಾಕಾಗುತ್ತದೆ. ಅದರ ಬದಲಾಗಿ ಅವರು ಒಮ್ಮೆ ತಟಸ್ಥವಾಗುತ್ತಾರೆ, ಒಮ್ಮೆ ಗಲಿಬಿಲಿಗೊಳ್ಳುತ್ತಾರೆ, ಒಮ್ಮೆ ಅಸಂಬದ್ಧವಾಗಿ ವರ್ತಿಸುತ್ತಾರೆ, ಒಮ್ಮೆ ಬಾಯಿ ಮುಚ್ಚಲು ಹೇಳುತ್ತಾರೆ ಮತ್ತೊಮ್ಮೆ ಜೋರಾಗಿ ಬೊಬ್ಬೆ ಹೊಡೆಯುತ್ತಾರೆ ಅಥವಾ ತಮ್ಮ ಪ್ರಚಾರಕರಿಗೆ ಮಾಧ್ಯಮದ ವೀಕ್ಷಕರ ಮುಂದೆ ತಾನು ದೇಶ ಆರಿಸಿದ ಜನಪ್ರಿಯ ನಾಯಕ ಎಂದು ತಿಳಿಸಲು ಹೇಳುತ್ತಾರೆ. ಆದರೆ ಯಾರೂ ಆ ಪ್ರಶ್ನೆಯನ್ನು ಕೇಳಿಲ್ಲ. ಯಾರೂ ಕೂಡಾ ಅವರು ಕಾನೂನುಬದ್ಧವಾಗಿ ಆಯ್ಕೆಯಾಗಿದ್ದಾರೆಯೇ ಎಂದೂ ಕೇಳಿಲ್ಲ. ಉಳಿಯುವ ಪ್ರಶ್ನೆಯೆಂದರೆ ಅವರು ಯಾವಾಗ ತಮ್ಮ ಪರೀಕ್ಷೆಯನ್ನು ಬರೆದರು, ಎಲ್ಲಿ ಮತ್ತು ಯಾವ ಪದವಿ ಅವರಿಗೆ ಸಿಕ್ಕಿತು? ಅತ್ತಿತ್ತ ಹೊರಳಾಡುವ ಬದಲು ಉತ್ತರಿಸಬಹುದಲ್ವೇ?ಕೆೆಲವೊಂದು ಸಾಕ್ಷಿಯನ್ನು ಸೇರಿಸಲಾಗಿದೆ. ದಿಲ್ಲಿ ವಿಶ್ವವಿದ್ಯಾನಿಲಯದಿಂದ 1978ರಲ್ಲಿ ಮೂರನೆ ದರ್ಜೆಯಲ್ಲಿ ಅವರು ಉತ್ತೀರ್ಣರಾಗಿರುವ ದಾಖಲೆಯನ್ನು ಪ್ರದರ್ಶಿಸಲಾಗುತ್ತಿದೆ. ಮತ್ತು ಎರಡನೆಯದಾಗಿ ಅವರು 1983ರಲ್ಲಿ ಗುಜರಾತ್ ವಿಶ್ವವಿದ್ಯಾನಿಲಯಯದಿಂದ ಎಂಎಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುವ ದಾಖಲೆಗಳನ್ನು ತೋರಿಸಲಾಗುತ್ತಿದೆ.

ಅದು ಈ ಕತೆಯ ಕೊನೆಯಾಗಬೇಕಿತ್ತು, ಆದರೆ ಹಾಗಾಗಿಲ್ಲ. ದಿಲ್ಲಿ ವಿಶ್ವವಿದ್ಯಾನಿಲಯದ ದಾಖಲೆಗಳು ಖಂಡಿತವಾಗಿಯೂ ನರೇಂದ್ರ ಮಹಾವೀರ್ ಮೋದಿ ಎಂಬವರು 1978ರಲ್ಲಿ ಶ್ರೀರಾಮ ಕಾಲೇಜಿನಿಂದ ತೇರ್ಗಡೆ ಹೊಂದಿರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಆದರೆ ಅದೇ ದಾಖಲೆ ಆ ವರ್ಷ ಯಾವುದೇ ನರೇಂದ್ರ ದಾಮೋದರ್ ದಾಸ್ ಎಂಬ ವ್ಯಕ್ತಿ ಪದವಿ ಪಡೆದಿರುವ ಬಗ್ಗೆ ಉಲ್ಲೇಖ ಹೊಂದಿಲ್ಲ. ಆ ಇನ್ನೊಂದು ಮೋದಿ ತನ್ನ ಹೆತ್ತವರು ತನಗೆ ಆಂಥಾ ಪ್ರಖ್ಯಾತ ಹೆಸರನ್ನು ನೀಡಿರುವ ಕಾರಣಕ್ಕೆ ಹೆಮ್ಮೆ ಹೊಂದಿದ್ದು ಟಿವಿ ಕ್ಯಾಮರಾಗಳ ಮುಂದೆ ನಿಂತು ತಮ್ಮ ಹಳೆದಿನಗಳನ್ನು ನೆನಪಿಸುತ್ತಾರೆ. ಹಾಗಾದರೆ ಮಣಿಶಂಕರ್ ಅಯ್ಯರ್ ಬದಲು ನನ್ನ ಹೆಸರು ರವಿಶಂಕರ್ ಅಯ್ಯರ್ ಆಗಿದ್ದರೆ ನಾನೂ ಅಷ್ಟು ಹೆಮ್ಮೆ ಪಡುತ್ತಿದ್ದೆನೇ. ಆದರೆ ಆಗಲೂ ಕೂಡಾ ನಾನು ಕಾಲ್ ಡ್ರಾಪ್ ಮಂತ್ರಿ ಆಗುತ್ತಿರಲಿಲ್ಲ. ದಿಲ್ಲಿ ವಿಶ್ವವಿದ್ಯಾನಿಲಯದ ಸಂಬಂಧಿತ ದಾಖಲೆಗಳನ್ನು ಪರಿಗಣಿಸದೆ, ಪ್ರಧಾನ ಮಂತ್ರಿಗಳ ಕಚೇರಿ ಅರ್ಜಿಗಳು ಸರಿಯಾದ ಕ್ರಮದಲ್ಲಿ ಇರಲಿಲ್ಲ ಎಂಬ ಕಾರಣ ನೀಡಿ ಆರ್‌ಟಿಐ ಅರ್ಜಿಯನ್ನು ಪುರಸ್ಕರಿಸಿದ ಮಾಹಿತಿ ಮುಖ್ಯಾಧಿಕಾರಿ ಮೇಲೆ ಉರಿದು ಬೀಳುತ್ತಿರುವುದಾದರೂ ಯಾಕೆ? ಒಂದು ವೇಳೆ ಆ ರಿಜಿಸ್ಟಾರ್‌ನಲ್ಲಿ ನರೇಂದ್ರ ದಾಮೋದರ್ ದಾಸ್ ಮೋದಿ ಹೆಸರು ಇಲ್ಲದೇ ಹೋದರೆ. ನಾನು ಕೂಡಾ ದಿಲ್ಲಿ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದವನಾಗಿದ್ದೇನೆ. ಪ್ರಧಾನಿ ಮೋದಿಯವರ ಹೇಳಿಕೆ ಸರಿಯಾಗಿದ್ದರೆ ಅವರು ತಮ್ಮ ಬಿಎ ಪದವಿಯನ್ನು ಬಹಳ ಆರಾಮವಾಗಿ ತಮ್ಮ 28ನೆ ವಯಸ್ಸಿನಲ್ಲಿ ಪಡೆದುಕೊಂಡರು. ಅಥವಾ ಬಹುಶ 29ಕ್ಕೆ ಯಾಕೆಂದರೆ ಅವರ ಶಾಲಾ ದೃಢೀಕರಣ ಪತ್ರದಲ್ಲಿ ಅವರ ಜನನ ವರ್ಷ 1949 ಎಂದು ದಾಖಲಾಗಿದ್ದರೆ ಅವರು ದೇವರ ಹೆಸರಲ್ಲಿ ಪ್ರಮಾಣ ಮಾಡಿದ ಚುನಾವಣಾ ಅಫಿದಾವಿತ್‌ನಲ್ಲಿ ಅವರ ಒಂದು ವರ್ಷ ನಂತರ ಜನಿಸಿದ್ದಾರೆ ಎಂದು ದಾಖಲಾಗಿದೆ. (ಆದರೆ ಅದು ಹಾಗಿರಲಿ-ಡಾ. ಮನ್‌ಮೋಹನ್ ಸಿಂಗ್ ಅವರ ಜನ್ಮ ದಿನಾಂಕವನ್ನು ಅವರೇ ಹೇಳುವಂತೆ ಯಾವುದೇ ದೃಢೀಕರಣವಿಲ್ಲದೆ ಆರಿಸಲಾಗಿತ್ತು, ಯಾಕೆಂದರೆ ಆ ದಿನ ಅವರನ್ನು ಶಾಲೆಗೆ ಸೇರಿಸಲಾಗಿತ್ತು. ಆದರೆ ಅವರು ಆ ದಿನಾಂಕವನ್ನು ದೃಢವಾಗಿ ಪಾಲಿಸಿದ್ದರು.

1932ರಲ್ಲೆಲ್ಲಾ ಗ್ರಾಮೀಣ ಕುಟುಂಬಗಳು ದಿನಾಂಕಗಳ ಬಗ್ಗೆ ಹೆಚ್ಚು ಗಮನ ನೀಡುತ್ತಿರಲಿಲ್ಲ ಎಂದು ಹೇಳುತ್ತಾ ಅವರು ನಗುತ್ತಿದ್ದರು).ನನ್ನ ಬಳಿ ಪ್ರಧಾನಿ ನರೇಂದ್ರ ಮೋದಿ ತಾನು ದಿಲ್ಲಿ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರುವುದಾಗಿ ಸುಳ್ಳು ಹೇಳಿದ್ದಾರೆ ಮತ್ತು ಪತ್ರಿಕೆಯಲ್ಲಿ ಪ್ರಕಟವಾದ ಅವರ ಪದವಿ ಕೂಡಾ ನಕಲಿ ಎಂದು ಆಮ್ ಆದ್ಮಿ ಪಕ್ಷ ಹೇಳಿಕೆ ನೀಡಿದೆ. ನಾನು ಇಲ್ಲಿ ನನ್ನ ಪದವಿಯ ಬಗ್ಗೆ ಸ್ವಲ್ಪ ಉಲ್ಲೇಖ ಯಾಕೆ ಮಾಡಿದೆ ಎಂದರೆ ನಾನು ತಮಿಳುನಾಡಿನಲ್ಲಿ ರಾಜಕೀಯಕ್ಕೆ ಧುಮುಕಿದ ಸಮಯದಲ್ಲಿ ಕುಂಭಕೋಣಂನಲ್ಲಿ ಮೊದಲ ಬಾರಿಗೆ ಭಾಷಣ ಮಾಡುತ್ತಿದ್ದಾಗ ದ್ರಾವಿಡರ್ ಕಾಳಗಂ ಪಕ್ಷದ ಸಾಂಪ್ರದಾಯಿಕ ಕಪ್ಪು ಬಟ್ಟೆ ಧರಿಸಿದ್ದ ಕನ್ನಡಕ ಹಾಕಿಕೊಂಡಿದ್ದ ಯುವತಿಯೊಬ್ಬಳು, ನಿನ್ನ ಹೆಸರಿನಲ್ಲಿ ‘ಅಯ್ಯರ್’ ಎಂಬ ಉಪನಾಮವಿರುವಾಗ ನೀನು ಓರ್ವ ಜಾತ್ಯತೀತ ಎಂದು ಯಾವ ಧೈರ್ಯದಲ್ಲಿ ಹೇಳುತ್ತಿ ಎಂದು ಪ್ರಶ್ನೆ ಹಾಕಿದಳು. ಆಗ ನಾನು ತಕ್ಷಣವಾಗಿ ಉತ್ತರ ನೀಡಬೇಕಿತ್ತು. ನಾನು ಮೊದಲ ಬಾರಿ ಪತ್ರಿಕೆಯಲ್ಲಿ ನನ್ನ ಹೆಸರು ನೋಡಿದ್ದು ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ನಾನು ಬಿಎಯಲ್ಲಿ ಪ್ರಥಮ ಸ್ಥಾನ ಪಡೆದಾಗ ಮತ್ತು ನನ್ನ ಹೆಸರಲ್ಲಿ ಅಯ್ಯರ್ ಎಂಬ ಉಪನಾಮ ಇರದೇ ಹೋಗಿದ್ದರೆ ಆ ಹೆಮ್ಮೆ ಮತ್ತು ಗೌರವ ತಮಿಳುನಾಡಿಗೆ ಸಿಗದೆ ಉತ್ತರ ಪ್ರದೇಶ ಅಥವಾ ಬಿಹಾರಕ್ಕೆ ಹೋಗುತ್ತಿತ್ತು ಎಂದು ಉತ್ತರಿಸಿದೆ. ಜನಸಮೂಹ ನನ್ನ ಮಾತಿಗೆ ಚಪ್ಪಾಳೆ ಬಾರಿಸಿದರು.

ಆದರೆ ಅದೇ ವೇಳೆ ಆ ಮಹಿಳೆ ಪಟ್ಟುಬಿಡದೆ ನಾನು ಪ್ರಥಮ ಸ್ಥಾನ ಪಡೆದಿದ್ದೇನೆ ಎಂಬುದನ್ನು ಸಾಬೀತುಪಡಿಸಲು ಹೇಳಿದ್ದರೆ ನಾನು ಆ ಶೈಕ್ಷಣಿಕ ಅರ್ಹತೆ ಹೊಂದಿದ್ದೇನೆ ಎಂಬುದನ್ನು ಸಾಬೀತುಪಡಿಸಲು ಅಗತ್ಯವಿರುವ ಪ್ರತಿಯೊಂದು ಸಣ್ಣ ಸಾಕ್ಷಿಯನ್ನೂ ಒದಗಿಸಲು ಶಕ್ತನಾಗಿದ್ದೆ. ಮತ್ತೆ ಮೋದಿಗ್ಯಾಕೆ ಅದು ಸಾಧ್ಯವಾಗುತ್ತಿಲ್ಲ? ಇದು ಬಹಳ ಮುಖ್ಯ ಯಾಕೆಂದರೆ ಅಹ್ಮದಾಬಾದ್‌ನಲ್ಲಿರುವ ಗುಜರಾತ್ ವಿಶ್ವವಿದ್ಯಾನಿಲಯವೂ ಸೇರಿದಂತೆ ಯಾವುದೇ ವಿಶ್ವವಿದ್ಯಾನಿಲಯ ಕೂಡಾ ಯಾವ ವಿದ್ಯಾರ್ಥಿಗೂ ಆತ ತನ್ನ ಮಾನ್ಯತೆ ಹೊಂದಿರುವ ಬಿಎ ಪದವಿಯನ್ನು ತೋರಿಸದೆ ಎಂಎ ತರಗತಿಗೆ ಸೇರಿಸಿಕೊಳ್ಳುವುದಿಲ್ಲ. ಬಹಳ ಮುಖ್ಯವಾಗಿ ಗುಜರಾತ್ ವಿಶ್ವವಿದ್ಯಾನಿಲಯದ ಉಪಕುಲಪತಿ ಮೋದಿ ಆ ವಿಶ್ವವಿದ್ಯಾನಿಲಯದಿಂದ 1983ರಲ್ಲಿ ಪಡೆದ ಎಂಎ ಪದವಿ ಮತ್ತು ಮೋದಿ ಹಾಜರಾಗಿದ್ದರು ಎಂದು ಹೇಳುತ್ತಿರುವ ಎಂಎ ಭಾಗ-2ರ ಪರೀಕ್ಷೆಗಳಲ್ಲಿ (ರಾಜ್ಯಶಾಸ್ತ್ರ-64, ಯೂರೋಪ್ ಮತ್ತು ಸಾಮಾಜಿಕ ರಾಜಕೀಯ ಚಿಂತನೆ-62, ಆಧುನಿಕ ಭಾರತ/ರಾಜಕೀಯ ವಿಶ್ಲೇಷಣೆ-69 ಮತ್ತು ರಾಜಕೀಯ ಮನಃಶಾಸ್ತ್ರ-67) ಅವರು ಪಡೆದ ಅಂಕಗಳನ್ನು ಪ್ರದರ್ಶಿಸಿದ್ದು ಸರಿ ಎಂಬುದಕ್ಕೆ ಸ್ವಲ್ಪವಾದರೂ ವಿಶ್ವಾಸಾರ್ಹತೆ ಮತ್ತು ದೃಢೀಕರಣದ ಅಗತ್ಯವಿದೆ. ಆದರೆ ತುಂಬಾ ಒಳ್ಳೆಯ ಅಂಕಗಳು, ಒಟ್ಟಿಗೆ ಸೇರಿಸಿದರೆ ಪ್ರಥಮ ದರ್ಜೆಯಲ್ಲಿ ಪಾಸಾದ .ರೆ ಪ್ರೊ. ಜಯಂತಿ ಪಟೇಲ್ ಎಂಬವರು, ನಾನು ಗುಜರಾತ್ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದಲ್ಲಿ 1969ರಿಂದ 1993ರ ವರೆಗೆ 24 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಅವರ ಕಾಲು ಶತಮಾನದ ಈ ಅವಧಿಯಲ್ಲೇ ಮೋದಿ ತಮ್ಮ ಎಂಎ ಭಾಗ-1 ಮತ್ತು ಭಾಗ-2ನ್ನು ಕಲಿತಿದ್ದಾರೆ. ಫೇಸ್‌ಬುಕ್ ಪುಟದಲ್ಲಿ ಜಯಂತಿ ಪಟೇಲ್ ಅವರ ಬರಹ ನೋಡುವಾಗ ಮೋದಿ, ಅವರ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದರು ಎಂಬುದು ತಿಳಿದುಬರುತ್ತದೆ. ಆದರೆ ಸಾಮಾನ್ಯ ವರ್ಗದ ವಿದ್ಯಾರ್ಥಿಯಾಗಿರುವ ಮೋದಿ ತರಗತಿಯಲ್ಲಿ ಎಷ್ಟು ಅನಿಯಮಿತವಾಗಿದ್ದರು ಎಂದರೆ ನನ್ನ ತರಗತಿಯಲ್ಲಿ ಅವರ ಹಾಜರಿ ಪರೀಕ್ಷೆಗೆ ಪ್ರವೇಶ ಪಡೆಯುವಷ್ಟು ಇರಲಿಲ್ಲ ಹಾಗಾಗಿ ನಾನು ಅದಕ್ಕೆ ಸಮ್ಮತಿ ನೀಡಲಿಲ್ಲ.

  ನಮ್ಮ ಶಾಲೆಯ ಭಾಷೆಯಲ್ಲಿ ಹೇಳುವುದಾದರೆ ನಾವು ಮೋದಿಯನ್ನು ‘ಜಾಮರ್’ (ತರಗತಿಗೆ ಚಕ್ಕರ್ ಹೊಡೆಯುವಾತ) ಎಂದು ಕರೆಯುತ್ತಿದ್ದೆವು. ಆದರೆ ಬಹುಶಃ ಮೋದಿ ರಸ್ತೆಗಳಲ್ಲಿ ಸುತ್ತಾಡುತ್ತಿರಲಿಲ್ಲ ಬದಲಿಗೆ ಪ್ರಾಮಾಣಿಕವಾಗಿ ತಮ್ಮ ಮನೆಯಲ್ಲಿ ಓದುತ್ತಿದ್ದರು. ಅಷ್ಟಕ್ಕೂ ಮೋದಿ, ಈಗಿನ ಉಪಕುಲಪತಿ ಹೇಳುವಂತೆ, ಮುಂದೆ ಸಾಗಿ ಓರ್ವ ಜಾಮರ್‌ನಿಂದ ಪ್ರಥಮ ದರ್ಜೆಯಲ್ಲಿ, ಅದರಲ್ಲೂ ತಾನು ಕಲಿತ ಎಲ್ಲಾ ನಾಲ್ಕು ವಿಷಯಗಳಲ್ಲಿ ಪ್ರಥಮ ಅಂಕದೊಂದಿಗೆ ಉತ್ತೀರ್ಣನಾದ ವಿದ್ಯಾರ್ಥಿಯಾದರು. ಆದರೆ 24 ವರ್ಷಗಳ ಕಾಲ ರಾಜ್ಯಶಾಸ್ತ್ರ ವಿಭಾಗದಲ್ಲಿ ಸೇವೆ ಸಲ್ಲಿಸಿರುವ ಜಯಂತಿ ಪಟೇಲ್ ಮೋದಿ ಮತ್ತು ಉಪಕುಲಪತಿಯವರ ಮುಖಕ್ಕೆ ಹೊಡೆದಂತೆ, ಇಲ್ಲಿ ಪತ್ರಿಕೆಗಳ ಹೆಸರಿನಲ್ಲಿ ಏನೋ ಎಡವಟ್ಟಾದಂತೆ ಕಾಣುತ್ತದೆ, ನನಗೆ ನೆನಪಿರುವಂತೆ ವಿಭಾಗ-2ರಲ್ಲಿ ಆಂತರಿಕ ಮತ್ತು ಹೊರಗಡೆಯ ವಿದ್ಯಾರ್ಥಿಗಳಿಗೆ ಆ ರೀತಿಯ ಪತ್ರಿಕೆಗಳನ್ನು ನೀಡುತ್ತಿರಲಿಲ್ಲ ಎಂದು ಹೇಳುತ್ತಾರೆ. ಹಾಗಾದರೆ ಇದರಿಂದ ತಿಳಿದುಬರುವುದೇನೆಂದರೆ ಮೋದಿ ಅಸ್ತಿತ್ವದಲ್ಲೇ ಇಲ್ಲದ ಎಂಎ ಪದವಿಯನ್ನು ಅಸ್ತಿತ್ವದಲ್ಲೇ ಇಲ್ಲದ ಪತ್ರಿಕೆಯನ್ನು ಬರೆದು ಪಡೆದುಕೊಂಡಿದ್ದಾರೆ. 1983ರಲ್ಲೋ ಅಥವಾ 2016ರಲ್ಲೋ ಎಂಬುದು ತನಿಖೆಯಷ್ಟೇ ಬಯಲು ಮಾಡಬೇಕು. 

share
ಮಣಿಶಂಕರ್ ಅಯ್ಯರ್
ಮಣಿಶಂಕರ್ ಅಯ್ಯರ್
Next Story
X