ಐಪಿಕೆಎಫ್‌ನ ಐವರು ಭಾರತೀಯರಿಗೆ ವಿಶ್ವಸಂಸ್ಥೆಯ ಶೌರ್ಯ ಪ್ರಶಸ್ತಿ

ವಿಶ್ವಸಂಸ್ಥೆ,ಮೇ 15: ಕಳೆದ ವರ್ಷ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಹುತಾತ್ಮರಾದ ನಾಲ್ವರು ಭಾರತೀಯ ಯೋಧರು ಹಾಗೂ ಓರ್ವ ನಾಗರಿಕನಿಗೆ, ವಿಶ್ವಸಂಸ್ಥೆಯು ಶನಿವಾರ ಮರಣೋತ್ತರ ಶೌರ್ಯ ಪ್ರಶಸ್ತಿಯನ್ನು ಘೋಷಿಸಿದೆ.
ಹೆಡ್‌ಕಾನ್ಸ್‌ಟೇಬಲ್ ಶುಭಕರಣ್ ಯಾದವ್, ರೈಫಲ್‌ಮ್ಯಾನ್ ಮನೀಶ್ ಮಲಿಕ್, ಹವಲ್ದಾರ್ ಅಮಲ್ ದೇಖಾ, ನಾಯ್ಕಾ ರಾಕೇಶ್ ಕುಮಾರ್ ಹಾಗೂ ಗಗನ್ ಪಂಜಾಬಿ, ವಿಶ್ವಸಂಸ್ಥೆಯ ಮರಣೋತ್ತರ ಶೌರ್ಯ ಪ್ರಶಸ್ತಿಗೆ ಭಾಜನರಾದ ಹುತಾತ್ಮರಾಗಿದ್ದಾರೆ.
ಕಳೆದ ವರ್ಷ ಅಂತರ್ಯುದ್ಧ ಪೀಡಿತ ಆಫ್ರಿಕದ ಕಾಂಗೊ ಪ್ರಜಾತಾಂತ್ರಿಕ ಗಣರಾಜ್ಯದಲ್ಲಿ ವಿಶ್ವಸಂಸ್ಥೆಯ ಸಂಘಟನಾ ಸ್ಥಿರತೆ ದಳದಲ್ಲಿ ಸೇವೆ ಸಲ್ಲಿಸುತಿದ್ದ ಯಾದವ್ ಹಾಗೂ ಮಲಿಕ್ ಕಳೆದ ಆಗಸ್ಟ್‌ನಲ್ಲಿ ಮೃತಪಟ್ಟಿದ್ದರು.
Next Story





