ತೊಗಾಡಿಯಾ ಸೋದರ ಸಂಬಂಧಿಯ ಹತ್ಯೆ: ಮೂವರ ಬಂಧನ
ಅಹ್ಮದಾಬಾದ್, ಮೇ 15: ವಿಶ್ವ ಹಿಂದೂ ಪರಿಷತ್‌ನ ನಾಯಕ ಪ್ರವೀಣ್ ತೊಗಾಡಿಯಾರ ಸೋದರ ಸಂಬಂಧಿ ಭರತ್ ಹಾಗೂ ಇತರ ಇಬ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಗುಜರಾತ್ ಪೊಲೀಸರು ರವಿವಾರ ಮೂವರನ್ನು ಬಂಧಿಸಿದ್ದಾರೆ.
ಭರತ್ ಸಹಿತ ಮೂವರನ್ನು ಅಜ್ಞಾತ ದುಷ್ಕರ್ಮಿಗಳು ಶನಿವಾರ ಸೂರತ್‌ನಲ್ಲಿ ಇರಿದು ಕೊಂದಿದ್ದರು.
ಭರತ್, ಕಾಂಗ್ರೆಸ್ ಅಭ್ಯರ್ಥಿ ಹಾಗೂ ಸೂರತ್ ಮಹಾನಗರ ಪಾಲಿಕೆಯ ವಿಪಕ್ಷ ನಾಯಕ ಪ್ರಫುಲ್ ತೊಗಾಡಿಯಾರ ಸೋದರನಾಗಿದ್ದರು. ಬಾಬು ಹೀರಾನಿ ಹಾಗೂ ಅಶೋಕ್ ಪಟೇಲ್ ಎಂಬವರು ಇರಿತದಿಂದ ಸಾವನ್ನಪ್ಪಿದ ಇತರ ಇಬ್ಬರಾಗಿದ್ದಾರೆ. ಮಹೇಶ್ ರಡಾಡಿಯಾ ಎಂಬವರು ದಾಳಿಯಲ್ಲಿ ಗಂಭೀರ ಗಾಯಗೊಂಡಿದ್ದಾರೆ.
ಘಟನೆಯ ಬಳಿಕ ಸೂರತ್‌ನ ಎಲ್ಲ ಆಗಮನ ಮತ್ತು ನಿರ್ಗಮನ ಮಾರ್ಗಗಳನ್ನು ಮುಚ್ಚಲಾಗಿದೆ.
Next Story





