ನಾಳೆ ಹಲವೆಡೆ ವಿದ್ಯುತ್ ನಿಲುಗಡೆ
ಉಡುಪಿ, ಮೇ 15: ಕುಂದಾಪುರದ 110/33/11 ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ಮೇ 17ರಂದು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಅಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಈ ಉಪಕೇಂದ್ರದಿಂದ ಹೊರಡುವ 11 ಕೆವಿ ನಾಡಾ, ಅಂಪಾರು, ಬಳ್ಕೂರು ಹಾಗೂ ಕುಂಭಾಶಿ ಫೀಡರ್‌ಗಳ ವ್ಯಾಪ್ತಿಗೊಳಪಡುವ ತಲ್ಲೂರು, ಹೆಮ್ಮಾಡಿ, ಕಟ್‌ಬೆಲ್ತೂರು, ಕೆಂಚನೂರು, ದೇವಲ್ಕುಂದ, ಕಾವ್ರಾಡಿ, ಹನ್ನಾಡಿ, ಅಂಪಾರು, ಕಾಳಾವರ, ಬಸ್ರೂರು, ಕೋಣಿ, ಕಂದಾವರ, ಬಳ್ಳೂರು, ಆನಗಳ್ಳಿ, ಕುಂಭಾಶಿ ಮತ್ತು ಕೊಟೇಶ್ವರ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟನೆ ತಿಳಿಸಿದೆ.
ಕುಂಜಿಬೆಟ್ಟು: 33/11 ಕೆವಿ ಕುಂಜಿಬೆಟ್ಟು ಎಂ.ಯು.ಎಸ್.ಎಸ್. ನಲ್ಲಿ ಹಾಗೂ ಇದರ ಎಲ್ಲ ಫೀಡರ್‌ಗಳಲ್ಲಿ ಮೇ 17ರಂದು ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 9:30ರಿಂದ ಸಂಜೆ 5:30ರವರೆಗೆ ಈ ಉಪಸ್ಥಾವರದಿಂದ ಹೊರಡುವ 11 ಕೆವಿ ಫೀಡರ್ ವ್ಯಾಪ್ತಿಗೊಳಪಡುವ ಉಡುಪಿ ನಗರ ಪ್ರದೇಶಗಳಾದ ಕುಂಜಿಬೆಟ್ಟು, ಚಿಟ್ಟಾಡಿ, ಕೃಷ್ಣಮಠ ಪರಿಸರ, ಒಳಕಾಡು, ಕೊಳಂಬೆ, ಮಿಷನ್ ಕಾಂಪೌಂಡ್, ಶಾಂತಿನಗರ, ಕಿನ್ನಿಮೂಲ್ಕಿ, ಕೋರ್ಟ್‌ರಸ್ತೆ, ಕೆ.ಎಂ.ಮಾರ್ಗ, ಮಾರುತಿ ವೀಥಿಕ, ಬೈಲೂರು, ಉದ್ಯಾವರ, ಪಿತ್ರೋಡಿ, ಕಡೆಕಾರ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಉಂಟಾಗಲಿದೆ ಎಂದು ಪ್ರಕಟನೆ ತಿಳಿಸಿದೆ.
ಹಿರಿಯಡ್ಕ: ಹಿರಿಯಡ್ಕದ 110/33/11 ಕೆವಿ ಉಪವಿದ್ಯುತ್ ಸ್ಥಾವರದಲ್ಲಿ ಮೇ 17ರಂದು ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಅಂದು ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಈ ಉಪಸ್ಥಾವರದಿಂದ ಹೊರಡುವ 11 ಕೆವಿ ಫೀಡರ್ ವ್ಯಾಪ್ತಿಯ ಹಿರಿಯಡ್ಕ, ಓಂತಿಬೆಟ್ಟು, ಅತ್ರಾಡಿ, ಪರ್ಕಳ, ಗುಡ್ಡೆಯಂಗಡಿ, ಕಣಂಜಾರು, ಹಿರೆಬೆಟ್ಟು, ಮಾಣೈ, ಪಂಚನಬೆಟ್ಟು, ಹರಿಕಂಡಿಗೆ, ಶಿರೂರು, ಸಾಂತ್ಯಾರು, ಬೈರಂಪಳ್ಳಿ, ದೂಪದಕಟ್ಟೆ, ಹಡಂಬಾಳು, 41ನೆ ಶಿರೂರು, ಕುಕ್ಕೆಹಳ್ಳಿ, ಕುಕ್ಕಿಕಟ್ಟೆ, ಪಾವಂಜೆ, ಗೋಳಿಕಟ್ಟೆ, ಮುಗೇರಿ, ಬುಕ್ಕಿಗುಡ್ಡೆ, ಪೆರ್ಡೂರು, ವಾಂಟ್ಯಾಳ, ಮುತ್ತುರ್ಮ, ಬಜೆ ನೀರು ಪೂರೈಕೆ ಸ್ಥಾವರ ವ್ಯಾಪ್ತಿ, ದೇವರ್ ಪವರ್ ಲಿ. ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ವೆುಸ್ಕಾಂ ಪ್ರಕಟನೆ ತಿಳಿಸಿದೆ.







