ಅಝರ್ ಸಿನೆಮಾದಲ್ಲಿ ತನ್ನನ್ನು ಲಂಪಟನಂತೆ ತೋರಿಸಲಾಗಿದೆ ಎಂದು ಸಿಡಿಮಿಡಿಗೊಂಡ ರವಿಶಾಸ್ತ್ರಿ!
ಮುಂಬೈ,ಮೇ 16: ಮುಹಮ್ಮದ್ ಅಝರುದ್ದೀನ್ರ ಕುರಿತು ತಯಾರಾದ ಅಝರ್ ಚಿತ್ರದಲ್ಲಿ ರವಿಶಾಸ್ತ್ರಿಯನ್ನು ಸ್ತ್ರೀ ಲಂಪಟ ವ್ಯಕ್ತಿಯಂತೆ ತೋರಿಸಿದ್ದಕ್ಕಾಗಿ ರವಿಶಾಸ್ತ್ರಿ ಸಿಡಿಮಿಡಿಗೊಂಡಿದ್ದಾರೆಂದು ವರದಿಯಾಗಿದೆ. ಚಿತ್ರದಲ್ಲಿ ಗೌತಮ್ ಗುಲಾಟಿ ರವಿಶಾಸ್ತ್ರಿಯ ಪಾತ್ರವನ್ನು ಮಾಡಿದ್ದಾರೆ. ಅವರು ಪತ್ನಿಗೆ ವಂಚಿಸುವಂತೆ ತೋರಿಸಲಾಗಿದೆ. ಅಝರ್ ಸಿನೆಮಾದಲ್ಲಿ ಇಮ್ರಾನ್ ಹಾಶ್ಮಿ ಅಝರ್ ಪಾತ್ರವನ್ನು ನಿರ್ವಹಿಸಿದ್ದಾರೆ.
ಅಝರ್ ಸಿನೆಮಾದ ಕುರಿತು ಕೇವಲ ರವಿಶಾಸ್ತ್ರಿ ಮಾತ್ರ ಅಲ್ಲ ಅಝರ್ರ ಮಾಜಿ ಪತ್ನಿ ಸಂಗೀತ ಬಿಜಿಲಾನಿ, ಮನೋಜ್ ಪ್ರಭಾಕರ್, ನವಜೋತ್ ಸಿದ್ದು ಮತ್ತು ಕಪಿಲ್ದೇವ್ರು ಕೂಡಾ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಇವರೆಲ್ಲರೂ ರಿಲೀಸ್ ಆಗುವ ಮುಂಚೆ ಸಿನೆಮಾ ನೋಡುವ ಇಚ್ಛೆಯನ್ನು ಪ್ರಕಟಿಸಿದ್ದಾರೆ. ಸಿನೆಮಾದ ಒಂದು ದೃಶ್ಯದಲ್ಲಿ ಶಾಸ್ತ್ರಿಯ ಪಾತ್ರ ನಿರ್ವಹಿಸುವ ಗುಲಾಟಿ ಹೊಟೇಲ್ನಲ್ಲಿ ಮಹಿಳೆಯರ ಜೊತೆ ಇದ್ದಾರೆ. ಆಗ ಹೊಟೇಲ್ನಲ್ಲಿ ಅವರ ಪತ್ನಿ ಅವರನ್ನು ಹುಡುಕುತ್ತಿರುತ್ತಾರೆ.
ಸಂಗೀತಾ ಬಿಜಿಲಾನಿ ಅಝರ್ ನಿರ್ಮಾಪಕರನ್ನು ಕೋರ್ಟ್ಗೆ ಎಳೆಯಬಹುದಾಗಿದೆ.ವರದಿಯಾಗಿರುವ ಪ್ರಕಾರ ಸಂಗೀತಾಬಿಜಿಲಾನಿಯ ಭೀತಿ ನಿರ್ಮಾಪಕರನ್ನು ಕಾಡುತ್ತಿದೆ. ಸಿನೆಮಾದಲ್ಲಿ ಅವರನ್ನು ಮನೆಒಡೆಯುವ ಮಹಿಳೆಯಂತೆ ತೋರಿಸಲಾಗಿದೆ. ಕೆಲವು ದಿವಸಗಳ ಹಿಂದೆ ಸಂಗೀತಾ ಬಿಜಿಲಾನಿ ಮುಹಮ್ಮದ್ ಅಝರುದ್ಧೀನ್ರಲ್ಲಿ ಈಕುರಿತು ಫೋನ್ ಮಾಡಿ ಮಾತಾಡಿದ್ದಾರೆಂದು ವರದಿಯಾಗಿದ್ದವು. ಅವರಿಬ್ಬರ ನಡುವೆ ತಲಾಕ್ ಆದ ಮೇಲೆ ಮಾತುಕತೆ ನಿಂತು ಹೋಗಿತ್ತು. ಸಂಗೀತಾ ಐದು ವರ್ಷಗಳ ನಂತರ ಅಝರ್ಗೆ ಈ ಕುರಿತು ಫೋನ್ ಮಾಡಿ ವಿಚಾರಿಸಿದ್ದರೆಂದು ವರದಿಗಳು ತಿಳಿಸಿವೆ.