ಎಸೆಸೆಲ್ಸಿ: ಆಲಂಗಾರು ಸೈಂಟ್ ಥೋಮಸ್ ಆಂಗ್ಲಮಾಧ್ಯಮ ಶಾಲೆಗೆ ಸತತ 8ನೆ ಬಾರಿ 100 ಶೇ. ಫಲಿತಾಂಶ
.jpg)
ಮೂಡುಬಿದಿರೆ, ಮೇ 16: ಎಸೆಸೆಲ್ಸಿ ಪರೀಕ್ಷೆಯಲ್ಲಿ ಮೂಡುಬಿದಿರೆಯ ಆಲಂಗಾರು ಸೈಂಟ್ ಥೋಮಸ್ ಆಂಗ್ಲಮಾಧ್ಯಮ ಪ್ರೌಢಶಾಲೆಯು ಶೇ. 100 ಫಲಿತಾಂಶವನ್ನು ದಾಖಲಿಸುವ ಮೂಲಕ ಸತತ 8ನೆ ಬಾರಿ 100 ಫಲಿತಾಂಶವನ್ನು ಕಾಯ್ದುಕೊಂಡಿದೆ.
24 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 44 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ಓರ್ವ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
ಅನುಷ್ಕಾ ಪಿರೇರಾ ಮತ್ತು ಲೆಸ್ಟರ್ ಡಿಸೋಜ 596 ಅಂಕಗಳನ್ನು ಪಡೆದುಕೊಂಡಿದ್ದಾರೆ. ಗಣಿತದಲ್ಲಿ ಲೆಸ್ಟರ್ ಹಾಗೂ ಹಿಂದಿಯಲ್ಲಿ ಗ್ಲಾನಿಶ್ ಮಾರ್ಟಿಸ್ ಹಿಂದಿಯಲ್ಲಿ 100 ಅಂಕಗಳನ್ನು ಪಡೆದಿದ್ದಾರೆ.
Next Story





