ಎಸೆಸೆಲ್ಸಿ: ರೋಟರಿ ಶಾಲೆಗೆ ಸತತ 12 ವರ್ಷ ಶೇ.100 ಫಲಿತಾಂಶ
_2.jpg)
ಮೂಡುಬಿದಿರೆ, ಮೇ 16: ಇಲ್ಲಿನ ರೋಟರಿ ಶಾಲೆಯು 2015-16ನೆ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದಿದೆ. ಈ ಮೂಲಕ ಸತತ 12 ವರ್ಷಗಳಲ್ಲಿ ಶೇ.100 ಫಲಿತಾಂಶ ಪಡೆದ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮೂಡುಬಿದಿರೆ ರೋಟರಿ ಶಾಲೆಯಿಂದ 163 ಮಂದಿ ವಿದ್ಯಾರ್ಥಿಗಳು ಹಾಜರಾಗಿದ್ದ ಪರೀಕ್ಷೆಯಲ್ಲಿ 73 ವಿದ್ಯಾರ್ಥಿ ವಿಶಿಷ್ಟ ಶ್ರೇಣಿಯಲ್ಲಿ, 72 ವಿದ್ಯಾರ್ಥಿಗಳು ಪ್ರಥಮ, 13 ವಿದ್ಯಾರ್ಥಿಗಳು ದ್ವಿತೀಯ, 5 ಮಂದಿ ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಎಂ.ಜ್ಯೇಷ್ಠ ಕಾಮತ್ 617( ಶೇ.98.72) ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಸಿ.ಎಚ್. ನಮೀರ ಫಾತಿಮ 616 (ಶೇ.98.56) ಅಂಕಗಳೊಂದಿಗೆ ದ್ವಿತೀಯ, ಬಿ.ಮಂಜುಲೇಶ್ ಮಲ್ಲಯ್ಯ 615(ಶೇ.98.40) ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ.
ಶಾಲೆಯ 14 ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕಗಳೊಂದಿಗೆ ಸಾಧನೆ ಮೆರೆದಿದ್ದಾರೆ. ವೈಷ್ಣವಿ ನಾಯಕ್ ಹಾಗೂ ಪೆರ್ಲಿನ್ ಟೆಲ್ಲಿಸ್-614, ಸ್ಟೀವ್ ಅಸ್ಟೋನ್ ಡಿ. ಅಲ್ಮೆಡಾ-613, ಅಶ್ವಿನಿ ಶೆಣೈ-612, ನೇಹಾ ಕಿಣಿ-610, ಶ್ರೀಕೃಷ್ಣ-606, ಪಿ.ನಿವೇದಿತಾ ಹಾಗೂ ಸಾತ್ವಿಕ್ ಜೈನ್-605, ವೈಷ್ಣವಿ ಕಾಮತ್-603, ವೈಬಾ ಶೆಟ್ಟಿ-602, ಮಾಶಿತಾ-601 ಅಂಕಗಳನ್ನು ಪಡೆದುಕೊಂಡಿದ್ದಾರೆ.







