ಮಂಜೇಶ್ವರ: ವ್ಯಕ್ತಿಗೆ ತಂಡದಿಂದ ಹಲ್ಲೆ
ಮಂಜೇಶ್ವರ, ಮೇ 16: ಕೊಡ್ಲಮೊಗರು ವಾಣಿ ವಿಜಯ ಹೈಸ್ಕೂಲಿನಲ್ಲಿ ಮತದಾನಗೈದು ಮರಳುತ್ತಿದ್ದ ಎಸ್‌ವೈಎಸ್ ಮುಖಂಡನ ಮೇಲೆ ಹಲ್ಲೆಗೈದ ಘಟನೆ ನಡೆದಿದೆ.
ಎಸ್‌ವೈಎಸ್ ವಿಭಾಗೀಯ ಉಪಾಧ್ಯಕ್ಷ ಅಬ್ದುಲ್ಲತೀಫ್ ಸದಿಯಾ(45)ಎಂಬವರು ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೋಮವಾರ ಅಪರಾಹ್ನ ಮತದಾನಗೈದು ಮರಳುತ್ತಿದ್ದ ಲತೀಫ್ ಸದಿಯಾರ ಮೇಲೆ ಮುಸ್ಲಿಂಲೀಗ್ ಕಾರ್ಯಕರ್ತರ ತಂಡವೊಂದು ತಲೆಗೆ ಕಲ್ಲುಗಳಿಂದ ಜಜ್ಜಿ ಹಲ್ಲೆ ನಡೆಸಿದೆಯೆಂದು ದೂರಲಾಗಿದೆ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





