ಒಳಿತಿನಿಂದ ಕೆಡುಕನ್ನು ಗೆಲ್ಲುವವನು ಮನುಷ್ಯನಾಗಲು ಸಾಧ್ಯ:ಅಬೂಬಕರ್ ಚೆರ್ಕುಙ ತಂಙಳ್
ಉಳ್ಳಾಲ, ಮೇ 16: ಜಗತ್ತಿನಲ್ಲಿ ಒಳ್ಳೆಯ ಮತ್ತು ಕೆಟ್ಟ ಜನರೂ ಇದ್ದು, ಕೆಡುಕನ್ನು ಒಳಿತಿಂದ ಗೆಲ್ಲವವ ಮಾತ್ರ ಮನುಷ್ಯನಾಗಲು ಸಾಧ್ಯವಿದೆ ಎಂದು ಉಳ್ಳಾಲ ಸೈಯದ್ ಮದನಿ ಅರಬಿಕ್ ಕಾಲೇಜಿನ ಉಪನ್ಯಾಸಕ ಹಾಜಿ ಅಬೂಬಕರ್ ಚೆರ್ಕುಙ ತಂಙಳ್ ಅಭಿಪ್ರಾಯಪಟ್ಟಿದ್ದಾರೆ.
ಉಳ್ಳಾಲ ಕೋಟೆಪುರ ಜುಮಾ ಮಸ್ಜಿದ್(403)ಮತ್ತು ಹಯಾತುಲ್ ಇಸ್ಲಾಂ ಮದ್ರಸದ ಕೂಡುವಿಕೆಯಲ್ಲಿ 56ನೆ ಕುತುಬಿಯತ್ ರಾತೀಬಿನ ಅಂಗವಾಗಿ 6 ದಿನಗಳ ಕಾಲ ನಡೆಯಲಿರುವ ಮತಪ್ರಭಾಷಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನಲ್ಲಿ ಒಳ್ಳೆಯದು,ಕೆಟ್ಟದನ್ನು ದಯಪಾಲಿಸಿದ ಅಲ್ಲಾಹನು ಒಡಕುಗಳನ್ನು ನಿಯಂತ್ರಿಸುವ ಶಕ್ತಿಯನ್ನು ಹೊಂದಿದ್ದು, ಮತಪ್ರಭಾಷಣಗಳು ಒಗ್ಗಟ್ಟು ಏಕತೆಗೆ ವೇದಿಕೆಯಾಗಲಿ ಎಂದು ನುಡಿದರು.
ಉಳ್ಳಾಲ ದರ್ಗಾ ಸಮಿತಿ 'ಅಧ್ಯಕ್ಷ' ಹಾಜಿ ಅಬ್ದುರ್ರಶೀದ್ ಮಾತನಾಡಿ ಮತಪ್ರಭಾಷಣವು ಧರ್ಮಗಳ ನಡುವೆ ಸಮನ್ವಯತೆಯನ್ನು ಬೆಳೆಸಲಿ ಎಂದು ಹೇಳಿದರು. ಈ ಸಂದರ್ಭ ಹಾಜಿ ಅಬ್ದುರ್ರಶೀದ್‌ರನ್ನು ಸನ್ಮಾನಿಸಲಾಯಿತು.
ಕೋಟೆಪುರ ಜುಮಾ ಮಸ್ಜಿದ್ ಅಧ್ಯಕ್ಷ ಬಾವಾ ಇಸ್ಮಾಯಿಲ್,ಉಪಾಧ್ಯಕ್ಷರಾದ ಅನ್ವರ್ ಹುಸೇನ್,ಉಳ್ಳಾಲ ದರ್ಗಾ ಸಮಿತಿ ಸದಸ್ಯರಾದ ಮೋನು ಇಸ್ಮಾಯಿಲ್, ಹಾಜಿ ಯು.ಕೆ ಮುಹಿಯುದ್ಧೀನ್, ಅಬೂಬಕರ್ ಅಹ್ಮದ್,ಯು.ಕೆ ಹಂಝ, ಅಬ್ದುರ್ರಹ್ಮಾನ್, ಹಮ್ಮಬ್ಬ ಉಚ್ಚಾಕ, ಹಾಜಿ ಯು.ಕೆ ಅಬ್ಬಾಸ್ ಹಳೆಮನೆ, ಹಾಜಿ ಯು.ಕೆ ಹಮ್ಮಬ್ಬ, ಯು.ಕೆ ಹಸೈನಾರ್ ಯು.ಎಚ್, ನಗರಸಭಾ ಸದಸ್ಯ ಹನೀಫ್, ಹಾಜಿ ಯು.ಕೆ. ಮುಹಮ್ಮದ್, ಮುಹಮ್ಮದ್ ಶರೀಫ್, ಹಾಜಿ.ಅಬ್ದುಲ್ಲತೀಫ್, ಹಾಜಿ ಅಹ್ಮದ್ ಬಾವ, ಹಾಜಿ ಐ.ಎಂ. ಇಬ್ರಾಹೀಂ ಇದ್ದರು.
ಸೈಯದ್ ಮದನಿ ಅರಬಿಕ್ ಕಾಲೇಜಿನ ಉಪನ್ಯಾಸಕ ಹಾಜಿ ಯು.ಎಂ. ಅಹ್ಮದ್ ಬಾವ ಮುಸ್ಲಿಯಾರ್, ಹಾಜಿ ಅಬ್ದುರ್ರಶೀದ್ ಮದನಿ ಮತ್ತು ಕೇಂದ್ರ ಜುಮಾ ಮಸೀದಿಯ ಖತೀಬ ಹಾಜಿ ಯು.ಎಂ ಅಬ್ದುರ್ರವೂಫ್ ಮುಸ್ಲಿಯಾರ್ ಮುಖ್ಯ ಪ್ರಭಾಷಣಕಾರರಾಗಿದ್ದರು.









