ಸುರಕ್ಷೆ, ಸ್ವಾತಂತ್ರದ ಭರವಸೆ ನೀಡಿದರೆ ಭಾರತಕ್ಕೆ ಮರಳುವೆ: ಮಲ್ಯ

ಮುಂಬೈ, ಮೇ 16: ಪ್ರಧಾನ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ತಾನು ನೀಡಿರುವ ಹೊಸ ಸಾಲ ಮರುಪಾವತಿ ಕೊಡುಗೆಯ ಬದ್ಧತೆ ಯನ್ನು ಗೌರವಿಸುವ ಎಲ್ಲ ಇಚ್ಛೆ ತನಗಿದೆ. ಈ ವಿಷಯದಲ್ಲಿ ಶೀಘ್ರ ಪ್ರಗತಿ ಸಾಧಿಸುವ ಆಶಾವಾದವನ್ನು ತಾನು ಹೊಂದಿದ್ದೇನೆಂದು ಸಾಲ ಮರುಪಾವತಿಗಾಗಿ ಬ್ಯಾಂಕ್‌ಗಳಿಂದ ಒತ್ತಡ ಎದುರಿಸುತ್ತಿರುವ ವಿಜಯ ಮಲ್ಯ ಹೇಳಿದ್ದಾರೆ.
ವೀಡಿಯೊ ಕಾನ್ಫರೆನ್ಸ್ ಮೂಲಕ ಅಧ್ಯಕ್ಷತೆ ವಹಿಸಿದ್ದ ಯುನೈಟೆಡ್ ಬ್ರಿವರೀಸ್ ಲಿಮಿಟೆಡ್‌ನ (ಯುಬಿಎಲ್) ಆಡಳಿತ ಮಂಡಳಿಯ ಸಭೆಯಲ್ಲಿ ಮಲ್ಯ ಸ್ಪಷ್ಟಪಡಿಸಿದ್ದಾರೆಂದು ಸಭೆಯಲ್ಲಿ ಭಾಗವಹಿಸಿದ್ದ ಕಂಪೆನಿಯ ನಿರ್ದೇಶಕರು ತಿಳಿಸಿದ್ದಾರೆ.
ಮಲ್ಯ ಕಳೆದೆರಡು ತಿಂಗಳುಗಳಿಂದ ನೆಲೆ ಸಿರುವ ಬ್ರಿಟನ್‌ನಿಂದ ಅವರನ್ನು ಗಡಿಪಾರು ಮಾಡುವಂತೆ ಜಾರಿ ನಿರ್ದೇಶನಾಲಯ ಕೋರಿ ದ್ದರೂ, ಅವರಿಗೆ ಯುಬಿಎಲ್ ಆಡಳಿತ ಮಂಡಳಿ ಹಾಗೂ ವ್ಯೆಹಾತ್ಮಕ ಭಾಗಿದಾರ ಹೈನ್‌ಕೆನ್‌ರ ಬೆಂಬಲವಿದೆಯೆಂದು ಇ.ಟಿ.ಯೊಂದಿಗೆ ಮಾತನಾ ಡಿದ ನಿರ್ದೇಶಕರು ಹೇಳಿದ್ದಾರೆ.
ಕಂಪೆನಿಯ ಆಡಳಿತ ಮಂಡಳಿಯ ಸಭೆ ಶುಕ್ರವಾರ ಮುಂಬೈಯಲ್ಲಿ ನಡೆದಿದ್ದು, ಮಲ್ಯ ಲಂಡನ್‌ನಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ಸಭೆಯ ಅಧ್ಯಕ್ಷತೆ ವಹಿಸಿದ್ದರು.
‘‘ನಾವು ವಿವಿಧ ವಿಷಯಗಳ ಕುರಿತು ಕಳವಳ ವ್ಯಕ್ತಪಡಿಸಿದೆವು. ನಾವು ಶೀಘ್ರವೇ ಸಾಲ ವಾಪಸಾತಿಯ ಕುರಿತಾಗಿ ಬ್ಯಾಂಕ್‌ಗಳೊಂದಿಗೆ ಗಂಭೀರ ಸಂಧಾನ ನಡೆಸುತ್ತಿದ್ದೇನೆಂದು ಮಲ್ಯ ತಮಗೆ ಭರವಸೆ ನೀಡಿದರು. ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವುದಕ್ಕಾಗಿ ಭಾರತಕ್ಕೆ ಬರಲು ತಾನು ಬಯಸುತ್ತಿದ್ದೇನೆ. ಆದರೆ, ತನಗೆ ಸುರಕ್ಷೆ ಹಾಗೂ ಸ್ವಾತಂತ್ರದ ಭರವಸೆ ನೀಡಬೇಕೆಂದು ಅವರು ಹೇಳಿದ್ದಾರೆಂದು ಆಡಳಿತ ಮಂಡಳಿಯ ಸ್ವತಂತ್ರ ಸದಸ್ಯೆ ಕಿರಣ್ ಮಝಂದಾರ್-ಶಾ ತಿಳಿಸಿದ್ದಾರೆ. ಕಂಪೆನಿಯ ಸಾಧನೆ ಅತ್ಯುತ್ತಮವಾಗಿದೆ. ಮಲ್ಯರ ಕಾರಣದಿಂದಾಗಿ ಕಾರ್ಪೊರೇಟ್ ಆಡಳಿತದ ಸಮಸ್ಯೆ ಉಂಟಾಗಿಲ್ಲ’’ ಎಂದು ಅವರು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯೆಗೆ ಮಲ್ಯ ಲಭ್ಯರಾಗಿಲ್ಲ. ಹೈನ್‌ಕೆನ್ ಮಲ್ಯರಿಗೆ ಬೆಂಬಲವಾಗಿ ನಿಂತಿದ್ದಾರೆ. ಅವರು ಯಾವುದೇ ನಿರಾಧಾರ ಆರೋಪವನ್ನು ನಂಬುತ್ತಿಲ್ಲವೆಂದು ಈ ವಿಷಯವನ್ನು ತಿಳಿದಿರುವ ಕಾರ್ಯವಾಹಿಗಳು ಹೇಳಿದ್ದಾರೆ.







