ಚರಂಡಿಗೆ ಬಿದ್ದ ಗುಜರಾತ್ ಸಂಸದೆ; ಮೂಳೆ ಮುರಿತ, ತಲೆಗೆ ಗಾಯ

ಜಾಮ್ನಗರ್, ಮೇ 16 : ತನ್ನ ಕ್ಷೇತ್ರದಲ್ಲಿ ನಡೆಯುತ್ತಿರುವ ಕೆಡಹುವ ಕಾರ್ಯಾಚರಣೆಯನ್ನು ನೋಡಲು ಹೋದ ಬಿಜೆಪಿ ಸಂಸದೆ ಪೂನಂ ಬೆನ್ ಹಿಮತ್ ಭಾಯಿ ಅವರು ಚರಂಡಿಗೆ ಬಿದ್ದು ಗಾಯಗೊಂಡಿರುವ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಇತರ ಕೆಲವರೊಂದಿಗೆ ಚರಂಡಿಯ ಮುಚ್ಚಳದ ಮೇಲೆ ಸಂಸದೆ ನಿಂತು ಮಾತನಾಡುತ್ತಿದ್ದರು.
ಇದ್ದಕ್ಕಿದ್ದಂತೆ ಆ ಮುಚ್ಚಳ ಕುಸಿದು 10 ಅಡಿ ಆಳದ ಚರಂಡಿಗೆ ಸಂಸದೆ ಹಾಗೂ ಇನ್ನೂ ಇಬ್ಬರು ಮಹಿಳೆಯರು ಬಿದ್ದು ಬಿಟ್ಟಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯವಾಗಿಲ್ಲ. ತಲೆಗೆ ಮತ್ತು ಕಾಲಿಗೆ ಗಂಭೀರ ಗಾಯಗೊಂಡಿರುವ ಸಂಸದೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರ ಇಬ್ಬರು ಮಹಿಳೆಯರೂ ಗಾಯಗೊಂಡಿದ್ದಾರೆ .
Next Story





