ಉ.ಪ್ರ: 10ನೆ ತರಗತಿಯಲ್ಲಿ ಫೇಲಾದ ಬಾಲಕನ ಆತ್ಮಹತ್ಯೆ
ಬಡೌನೌ, ಮೇ 16: ಉತ್ತರಪ್ರದೇಶ ಬೋರ್ಡ್ ಪರೀಕ್ಷೆಯಲ್ಲಿ ಅನುತ್ತೀರ್ಣನಾದ 16ರ ಹರೆಯದ 10ನೆ ತರಗತಿಯ ವಿದ್ಯಾರ್ಥಿಯೊಬ್ಬ ಉೈತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ತನ್ನ ಮೊಬೈಲ್ನಲ್ಲಿ ಫಲಿತಾಂಶ ತಿಳಿದ ಬಳಿಕ ಜಿತೇಂದ್ರ ಎಂಬ ಈ ವಿದ್ಯಾರ್ಥಿ ಖುಶಾಲ್ಪುರ ಗ್ರಾಮದಲ್ಲಿ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡನೆಂದು ಅವರು ಹೇಳಿದ್ದಾರೆ.
ನಾವು ಜಿತೇಂದ್ರನನ್ನು ಸಮಾಧಾನಪಡಿಸಿದ್ದೆವು. ಆದರೆ, ಆತ ಸ್ನೇಹಿತರನ್ನು ಕಂಡುಬರುವೆನೆಂದು ಹೇಳಿ ಮನೆಯಿಂದ ಹೊರ ಹೋಗಿದ್ದನೆಂದು ಆತನ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.
Next Story