ಮೃತ ಅಮ್ಮನ ಉದರದಿಂದ ಜೀವಂತ ಶಿಶುವನ್ನು ಹೊರತೆಗೆದ ಅಮೆರಿಕದ ವೈದ್ಯರು!

ಕೇಪ್‌ಗಿರಾರ್ಡ್ಯೂ, ಮೇ17: ಕಾರುಅಪಘಾತದಲ್ಲಿ ಮೃತಳಾದ ತುಂಬು ಗರ್ಭಿಣಿಯ ಮಹಿಳೆಯ ಹೊಟ್ಟೆಯಿಂದ ಶಿಶುವನ್ನು ಜೀವಂತವಾಗಿ ಹೊರತೆಗೆದು ಅಮೆರಿಕದ ವೈದ್ಯರು ವೈದ್ಯಲೋಕವನ್ನೇ ಅಚ್ಚರಿಯಲ್ಲಿ ಮುಳುಗಿಸಿದ್ದಾರೆ.
ಕೇಪ್‌ಗಿರಾರ್ಡ್ಯೂ ನ ಮನೆಯಿಂದ ಮಿಸ್ಸೂರಿಯ ಆಸ್ಪತ್ರೆಗೆ ತುಂಬು ಗರ್ಭಿಣಿಯಾದ ಹಿಲರಿಯನ್ನು ಸಾಗಿಸುತ್ತಿದ್ದಾಗ ಅವಳಿದ್ದ ಕಾರು ಟ್ರಕ್ಕೊಂದಕ್ಕೆ ಢಿಕ್ಕಿಹೊಡೆದಿತ್ತು. ಗಂಭೀರವಾಗಿ ಗಾಯಗೊಂಡ ಹಿಲರಿಗೆ ಅಲ್ಲಿಗೆ ಬಂದ ಪೊಲೀಸ್ ಅಧಿಕಾರಿಗಳು ಕೃತಕ ಉಸಿರಾಟ ವ್ಯವಸ್ಥೆ ಏರ್ಪಡಿಸಿದರು. ಆದರೆ ಹಿಲರಿ ಆಸ್ಪತ್ರೆಗೆ ಹೋಗುವ ದಾರಿಯಲ್ಲೇ ಕೊನೆಯುಸಿರೆಳೆದಿದ್ದರು. ಕೂಡಲೇ ಸಕ್ರಿಯರಾದ ಆಸ್ಪತ್ರೆಯ ವೈದ್ಯರು ಶಸ್ತ್ರಕ್ರಿಯೆ ನಡೆಸಿ ಮಗುವನ್ನು ಜೀವಂತವಾಗಿ ಹೊರತೆಗೆದಿದ್ದಾರೆ. ಅಮ್ಮ ಇಲ್ಲದೆ ಆಹೆಣ್ಣು ಮಗು ಹೊರಗೆ ಬಂತು. ನರ್ಸ್‌ನ ಕೈಯಲ್ಲಿ ಕಣ್ಣು ತೆರೆಯಿತು. ಕೂಡಲೇ ಮಗುವನ್ನು ವೆಂಟಿಲೇಟರ್‌ಗೆ ಸ್ಥಾನಾಂತರಿಸಲಾಯಿತು.
ಅಮ್ಮನ ಮರಣದಿಂದಾಗಿ ಶಿಶುವಿಗೆ ಆಕ್ಸಿಜನ್ ಸಿಕ್ಕದೆ ಮಗುವಿನ ಮೆದುಳಿನಲ್ಲಿ ಗಾಯಾಗಿದೆಯೇ ಎಂಬ ವಿಷಯವನ್ನು ವೈದ್ಯರು ಈವರೆಗೂ ದೃಢಪಡಿಸಿಲ್ಲ. ಹುಟ್ಟುವ ಮಗುವಿಗಾಗಿ ತನ್ನ ಮಗಳು ಕಾದಿದ್ದಳು. ಈಗ ಈ ಮಗು ಅಮ್ಮ ಇಲ್ಲದೆ ಬೆಳೆಯಬೇಕಾಗಿದೆ ಎಂದು ಹಿಲರಿಯ ಅಮ್ಮ ಪಾಟ್ರಿಷ್ಯ ನೈಟ್ ಅತೀವ ದುಃಖದಲ್ಲಿ ಹೇಳಿದ್ದಾರೆಂದು ವರದಿಯಾಗಿದೆ.





