ತಿರುವನಂತಪುರಂ, ಅಲಪ್ಪುಝದಲ್ಲಿ ಉಗ್ರವಾದ ಸಮುದ್ರ!: 110 ಮನೆಗೆಳು ನಾಶ!

ತಿರುವನಂತಪುರಂ, ಮೇ 17: ಕೇರಳದ ದಕ್ಷಿಣ ಭಾಗದಲ್ಲಿ ಮತ್ತುಮಧ್ಯಕೇರಳದಲ್ಲಿ ಭಾರೀ ಮಳೆಯಾಗಿದೆ. ತಿರುವನಂತಪುರಂನಲ್ಲಿ ಮತ್ತು ಅಲಪ್ಪುಝದಲ್ಲಿ ಗಂಭೀರ ಕಡಲುಕೊರೆತ ಸಂಭವಿಸಿದ್ದು ತಿರುವನಂತಪುರಂನ ಕರಾವಳಿ ಪ್ರದೇಶ ವಲಿಯ ತುರ, ಪುಂದೂರಿನಲ್ಲಿ ಕಡಲಿನ ಅಟ್ಟಹಾಸದಲ್ಲಿ 116 ಮನೆಗಳು ಕುಸಿದು ಬಿದ್ದಿವೆ ಎಂದು ವರದಿಯಾಗಿದೆ.
ಕಳೆದ ದಿವಸ ಮಧ್ಯಾಹ್ನ ಒಂದು ಗಂಟೆಗೆ ಕಡಲ್ಕೊರೆತ ಆರಂಭವಾಗಿತ್ತು. ವಾಹನ ಸಂಚಾರಕ್ಕೂ ಆಡ್ಡಿ ಸಂಭವಿಸಿದೆ. ಕಡಲ್ಕೊರೆತದಿಂದಾಗಿ ವಲಿಯ ತುರದಲ್ಲಿ ಮನೆಗಳು ನಷ್ಟವಾದವರು ಇಲೆಕ್ಟ್ರಿಕ್ ಕಂಬಗಳನ್ನು ದಾರಿಯಲ್ಲಿ ಹಾಕಿ ಪ್ರತಿಭಟನೆ ನಡೆಸಿದರು. ಪುನರ್ವಸತಿ ಮಾಡಿಕೊಟ್ಟಿಲ್ಲ ಎಂಬುದು ಅವರ ಆಕ್ರೋಶಕ್ಕೆಕಾರಣವಾಗಿತ್ತು.
ಅಲಪ್ಪುಝದಲ್ಲಿ ಅಂಬಲಪುಝ, ಮಾರಾರಿಕುಳಂ, ತೃಕ್ಕೂಣಪುಝ, ಅರಾಟ್ಟಪುಝ,ತುರವೂರ್ ಎಂಬ ಸ್ಥಳಗಳಲ್ಲಿ ಕಡಲ್ಕೊರೆತ ಉಂಟಾಗಿದೆ. ಇಲ್ಲೆಲ್ಲಾ ತಡೆಗೋಡೆಯನ್ನು ಕಿತ್ತೊಗೆದು ನೀರು ಮುಂದೊತ್ತರಿಸಿ ಬಂದಿದೆ. ಕಡಲಿನ ಆಕ್ರಮಣದಿಂದಾಗಿ ಸಂತ್ರಸ್ತರಾದ ಜನರನ್ನು ಕ್ಯಾಂಪ್‌ಗಳಿಗೆ ಸ್ಥಳಾಂತರಿಸಬೇಕೆಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.ತೃಕ್ಕುನ್ನಪುಝದಲ್ಲಿನ ಜನರನ್ನು ಪುನರ್ವಸತಿ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.





