ದುಬೈ ವಾಹನ ಅಪಘಾತದಲ್ಲಿ ಕೇರಳದ ಅಪ್ಪ- ಮಗ ಮೃತ್ಯು

ದುಬೈ,ಮೇ 17: ದುಬೈಯಲ್ಲಿ ನಡೆದ ವಾಹನ ಅಪಘಾತದಲ್ಲಿ ಕೇರಳ ವ್ಯಕ್ತಿ ಹಾಗೂ ಅವರ ಪುತ್ರ ಮೃತರಾಗಿದ್ದು ಮೃತ ವ್ಯಕ್ತಿಯನ್ನು ತೃಶೂರ್ ಕೇಚ್ಚೇರಿ ಚಿರನ್ನಲ್ಲೂರ್ ಚುಂಡಲ್ ಹೌಸ್‌ನ ಸನ್ನಿ(45), ಹತ್ತು ವರ್ಷದ ಅವರ ಮೊದಲ ಪುತ್ರ ಎಂದು ಗರುತಿಸಲಾಗಿದೆ ಎಂದು ವರದಿಯಾಗಿದೆ. ದುಬೈಯ ಮುಹೈಸಿನ ವಾಣಿಜ್ಯ ವಲಯದಲ್ಲಿ ಈ ಅಪಘಾತ ವುಂಟಾಗಿದೆ. ಅಪಘಾತ ಸಮಯದಲ್ಲಿ ಜೊತೆಯಲ್ಲಿದ ಸನ್ನಿಯ ಪತ್ನಿ ಮತ್ತು ಎರಡನೆ ಮಗ ನಿಗೂ ಗಾಯವಾಗಿದ್ದು ದುಬೈ ರಾಶಿದ್ ಆಸ್ಪತ್ರೆಗೆ ಸೇರಿಸಲಾಗಿದೆ.
ಸೋಮವಾರ ರಾತ್ರಿಯಲ್ಲಿ ಅಪಘಾತ ಸಂಭವಿಸಿದೆ. ಕುಟುಂಬದ ಜೊತೆ ಪ್ರಯಾಣಿಸುತ್ತಿದ್ದ ಕಾರಿಗೆ ಹಿಂಬದಿಯಿಂದ ಬಂದ ಇನ್ನೊಂದು ವಾಹನ ಢಿಕ್ಕಿಹೊಡೆದಿತ್ತು. ದುಬೈಗೆ ಪತಿಯನ್ನು ಸೇರಿಕೊಳ್ಳಲು ಪತ್ನಿ ಮಕ್ಕಳೊಂದಿಗೆ ಸಂದರ್ಶಕ ವೀಸಾದಲ್ಲಿ ಬಂದಿದ್ದರು. ಈ ತಿಂಗಳು 28ಕ್ಕೆ ಊರಿಗೆ ಮರಳುವವರಿದ್ದರು. ಮೃತನಾಗಿರುವ ಪುತ್ರ ಆರನೆ ತರಗತಿಯ ವಿದ್ಯಾರ್ಥಿಯೆಂದು ವರದಿಯಾಗಿದೆ.
Next Story





