ಕೇಜ್ರಿವಾಲ್‌ರ ಉದ್ಯೋಗ ಕೊಡುಗೆಯನ್ನು ನಿರಾಕರಿಸಿದ ರೋಹಿತ್ ವೇಮುಲಾರ ಸಹೋದರ

ಹೊದಿಲ್ಲಿ, ಮೇ 17: ಆತ್ಮಹತ್ಯೆ ಮಾಡಿಕೊಂಡ ಹೈದರಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ರೋಹಿತ್ ವೇಮುಲಾರ ಸಹೋದರ ದಿಲ್ಲಿ ಸರಕಾರ ನೀಡಿದ ಉದ್ಯೋಗ ಕೊಡುಗೆಯನ್ನು ನಿರಾಕರಿಸಿದ್ದಾರೆಂದು ವರದಿಯಾಗಿದೆ. ಕೇಜ್ರಿವಾಲ್ ಸರಕಾರ ರೋಹಿತ್‌ರ ತಮ್ಮ ರಾಜಾ ಚೇತನ್ಯ ಕುಮಾರ್ ವೇಮುಲಾರಿಗೆ ನೌಕರಿಯ ಕೊಡುಗೆ ಮುಂದಿಟ್ಟಿತ್ತು. ಆದರೆ ಮಂಗಳವಾರದಂದು ರಾಜಾ ಚೆತನ್ಯ ಕುಮಾರ್ ವೇಮುಲಾ ಈ ಕೊಡುಗೆಯನ್ನು ನಿರಾಕರಿಸಿದ್ದಾರೆಂದು ದಿಲ್ಲಿ ಹೈಕೋರ್ಟ್ ಕೇಜ್ರಿವಾಲ್ ಸರಕಾರ ತಿಳಿಸಿದೆ .
ದಿಲ್ಲಿಸರಕಾರ ಹೇಳಿರುವ ಪ್ರಕಾರ ರೋಹಿತ್ ವೇಮುಲಾ ಸಹೋದರ ರಾಜಾ ಚೆತನ್ಯ ಕುಮಾರ್ ವೇಮುಲಾ ಪತ್ರ ಬರೆದು ತನಗೆ ದಿಲ್ಲಿಯಲ್ಲಿ ಕೆಲಸ ಬೇಕೆಂದು ವಿನಂತಿಸಿದ್ದರು. ಆದರೆ ದಿಲ್ಲಿ ಸರಕಾರ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದೆ. ಹೈಕೋರ್ಟ್ ಈ ವಿಚಾರದಲ್ಲಿ ಎರಡು ವಾರಗಳೊಳಗೆ ಅಫಿದಾವಿತ್ ಸಲ್ಲಿಸಬೇಕೆಂದು ದಿಲ್ಲಿ ಸರಕಾರಕ್ಕೆ ಸೂಚಿಸಿತ್ತು.
ಕಳೆದ ಒಂಬತ್ತು ತಾರೀಕಿನಂದು ವಕೀಲ ಅವಧ್ ಕೌಶಿಕ್ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ದಿಲ್ಲಿ ಸರಕಾರವು ಹೈದರಾಬಾದ್‌ನ ಯಾವ ವ್ಯಕ್ತಿಗೆ ಕೆಲಸ ಕೊಡಬಹುದು? ಸರಕಾರದ ನೀತಿ ಏನು? ಸರಕಾರದ ಬಳಿ ಇದಕ್ಕೆ ಸಂಬಂಧಿಸಿದ ಕಾನೂನು ಆಧಾರ ಇದೆಯೇ? ಯಾವ ಆಧಾರದಲ್ಲಿ ರೋಹಿತ್‌ನ ಸಹೋದರನಿಗೆ ದಿಲ್ಲಿಸರಕಾರ ಕೆಲಸ ಕೊಡುವ ಆಫರ್ ನೀಡಿದೆ ಎಂದು ಪ್ರಶ್ನಿಸಿದ್ದರು ಎಂದು ವರದಿಗಳು ತಿಳಿಸಿವೆ.





