Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ದೇವರಿಗೇ ದೋಖಾ !

ದೇವರಿಗೇ ದೋಖಾ !

ವಕ್ಫ್ ಭೂಮಿ ಗುಳುಂ ಬಗ್ಗೆ ಕರ್ನಾಟಕ ಸರಕಾರದ ನಿಗೂಢ ಮೌನ

ವಾರ್ತಾಭಾರತಿವಾರ್ತಾಭಾರತಿ17 May 2016 5:31 PM IST
share
ದೇವರಿಗೇ ದೋಖಾ !

ವಕ್ಫ್ ಮಂಡಳಿ ಭೂ ಅವ್ಯವಹಾರ ಬಗೆಗೆ 2012ರಲ್ಲಿ ನೀಡಿದ ವರದಿಯನ್ನು ವಿಧಾನಮಂಡದಲ್ಲಿ ಮಂಡಿಸಲು ಸಿದ್ದರಾಮಯ್ಯ ಸರಕಾರ ನಿರಾಕರಿಸುವುದರೊಂದಿಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಬಿಜೆಪಿ ಮುಖಂಡ ಹಾಗೂ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಂದಿನ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿಯವರು ಅಂದಿನ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಗೆ ಈ ವರದಿ ಸಲ್ಲಿಸಿದ್ದರು.

ಈ ವರದಿಯನ್ನು ಸದನದಲ್ಲಿ ಮಂಡಿಸಲು ಸರಕಾರ ಹಿಂಜರಿಯಲು ಮುಖ್ಯ ಕಾರಣವೆಂದರೆ, ಸರಕಾರದಲ್ಲಿ ಇದೀಗ ಸಚಿವರಾಗಿರುವವರು ಸೇರಿದಂತೆ ಹಲವು ಮಂದಿ ಹಿರಿಯ ಕಾಂಗ್ರೆಸ್ ನಾಯಕರು ಈ ಭೂಕಬಳಿಕೆಯಲ್ಲಿ ಶಾಮೀಲಾಗಿರುವ ಬಗ್ಗೆ ಉಲ್ಲೇಖವಿದೆ ಎನ್ನುವುದು ವಿರೋಧ ಪಕ್ಷಗಳ ಆರೋಪ. ಭ್ರಷ್ಟಾಚಾರ ವಿರೋಧಿ ಕಾವಲುಗಾರ ಎನಿಸಿದ ಲೋಕಾಯುಕ್ತವನ್ನು ದುರ್ಬಲಗೊಳಿಸುವ ಸಲುವಾಗಿ ಭ್ರಷ್ಟಾಚಾರ ವಿರೋಧಿ ಬ್ಯೂರೊ (ಎಸಿಬಿ) ರಚನೆ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ಸರ್ಕಾರದ ಮೇಲೆ ಟೀಕಾ ಪ್ರಹಾರ ನಡೆಯುತ್ತಿರುವಾಗಲೇ ಮತ್ತೊಂದು ಬರಸಿಡಿಲು ಸರಕಾರಕ್ಕೆ ಎದುರಾಗಿದೆ.

ಕರ್ನಾಟಕದಲ್ಲಿ ವಿಧಾನಸಭೆ ಹಾಗೂ ವಿಧಾನ ಪರಿಷತ್ ಹೀಗೆ ಎರಡು ಹಂತದ ಶಾಸಕಾಂಗ ವ್ಯವಸ್ಥೆ ಇದೆ. ವಿಧಾನ ಪರಿಷತ್‌ನಲ್ಲಿ ಬಿಜೆಪಿ ಹಾಗೂ ಜಾತ್ಯತೀತ ಜನತಾದಳ ಸೇರಿ ಬಹುಮತ ಹೊಂದಿವೆ. ಮಾಣಿಪ್ಪಾಡಿ ವರದಿ ಕುರಿತು ಕೈಗೊಂಡ ಕ್ರಮದ ಬಗೆಗಿನ ವರದಿಯನ್ನು ಮಾರ್ಚ್ 5ರಂದು ಸರ್ಕಾರ ವಿಧಾನ ಪರಿಷತ್‌ನಲ್ಲಿ ಮಂಡಿಸಿತು. ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಪದೇ ಪದೇ, ಮಾಣಿಪ್ಪಾಡಿ ವರದಿಯನ್ನು ಸಮಗ್ರವಾಗಿ ಮಂಡಿಸುವಂತೆ ಆಗ್ರಹಿಸಿದರು. ಈ ವಿಷಯದ ಬಗ್ಗೆ ಶಂಕರಮೂರ್ತಿಯವರು ರಾಜ್ಯಪಾಲ ವಾಜುಭಾಯ್ ವಾಲಾ ಅವರ ಅಭಿಪ್ರಾಯ ಕೇಳಲು ಮುಂದಾದರು. ವರದಿಯನ್ನು ಸದನದಲ್ಲಿ ಮಂಡಿಸದೇ ಇರುವ ಸರಕಾರದ ಕ್ರಮದ ಬಗ್ಗೆ ರಾಜ್ಯಪಾಲರು ಕೂಡಾ ಅಸಮಾಧಾನ ವ್ಯಕ್ತಪಡಿಸಿದರು.

"ಅಲ್ಪಸಂಖ್ಯಾತರ ಪರ ಎಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷ ವಕ್ಫ್‌ಮಂಡಳಿಯ ಭೂಮಿ ಕಬಳಿಸಿದ ಭೂಗಳ್ಳರನ್ನು ರಕ್ಷಿಸಲು ಯತ್ನಿಸುತ್ತಿದೆ" ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆಪಾದಿಸುತ್ತಾರೆ.

ಈ ವರದಿ ಕಾನೂನುಬದ್ಧವಲ್ಲ ಎಂಬ ತಗಾದೆ ತೆಗೆದು ಕಾಂಗ್ರೆಸ್ ಪಕ್ಷ ಗದ್ದಲ ಎಬ್ಬಿಸಿ ಈ ವರದಿಯನ್ನು ಸದನದಲ್ಲಿ ಮಂಡಿಸದಂತೆ ಅಂದಿನ ಸದಾನಂದ ಗೌಡ ಸರಕಾರವನ್ನು ತಡೆದಿತ್ತು. ಈ ವಿವಾದವನ್ನು ಕಾನೂನು ತಜ್ಞರ ತಂಡದ ಪರಾಮರ್ಶೆಗೆ ಒಳಪಡಿಸಲಾಯಿತು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿತು. ಕಳೆದ ವರ್ಷ ವಕ್ಫ್ ಸಚಿವ ಖಮರುಲ್ ಇಸ್ಲಾಂ ಸಾಹೇಬ್ ಅವರು ವಿಧಾನ ಪರಿಷತ್ತಿನಲ್ಲಿ ಹೇಳಿಕೆ ನೀಡಿ, "ಈ ವರದಿ ಅನಧಿಕೃತ; ಆದ್ದರಿಂದ ಇದಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ. ಈ ವರದಿಗೆ ಆಯೋಗದ ಯಾವ ಸದಸ್ಯರೂ ಒಪ್ಪಿಗೆ ನೀಡಿರಲಿಲ್ಲ" ಎಂದು ಸ್ಪಷ್ಟಪಡಿಸಿದ್ದರು.

2014ರ ಅಕ್ಟೋಬರ್‌ನಲ್ಲಿ, ಕೋಲಾರ ಮೂಲದ ಸಾಮಾಜಿಕ ಕಾರ್ಯಕರ್ತ ತರ್ಬೆಜ್ ಪಾಷಾ ಅವರು ಗುಲ್ಬರ್ಗದಲ್ಲಿ ವಕ್ಫ್ ಭೂಮಿಯನ್ನು ಅನಧಿಕೃತವಾಗಿ ಸ್ವಾಧೀನಪಡಿಸಿಕೊಂಡು ಮಾರಾಟ ಮಾಡಿದ ಆರೋಪದಲ್ಲಿ ಖಮರುಲ್ ಇಸ್ಲಾಂ ವಿರುದ್ಧ ದೂರು ದಾಖಲಿಸಿದರು. ಇತ್ತೀಚೆಗೆ ಮಾಜಿ ಸಚಿವ ಎಸ್.ಕೆ.ಕಾಂತಾ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ಬಳಿಕ ಸರ್ಕಾರ ವರದಿ ಕುರಿತು ಕೈಗೊಂಡ ಕ್ರಮಗಳ ಬಗೆಗೆ ವಿವರವನ್ನು ವಿಧಾನ ಪರಿಷತ್ತಿನಲ್ಲಿ ಮಂಡಿಸಿತು. ಈ ವರದಿಯನ್ನು ಸದನದಲ್ಲಿ ಮಂಡಿಸುವುದಾಗಿ ಹೈಕೋರ್ಟ್‌ಗೆ ಸರ್ಕಾರ ತಿಳಿಸಿತ್ತು.

ಭ್ರಷ್ಟಾಚಾರ ವಿರೋಧಿ ಬ್ಯೂರೊ ಎ.ಸಿ.ಬಿ. ರಚನೆ, ಸರ್ಕಾರದ ವಿರೋಧಿಗಳನ್ನು ಮತ್ತಷ್ಟು ಕೆರಳಿಸಿತು. "ಮುಖ್ಯಮಂತ್ರಿ, ಸಚಿವರು, ಶಾಸಕರು ಹಾಗೂ ಸರ್ಕಾರಿ ಉದ್ಯೋಗಿಗಳ ವಿಚಾರಣೆಗೆ ಅವಕಾಶ ಮಾಡಿಕೊಡುವ 1984ರ ಲೋಕಾಯುಕ್ತ ಕಾಯ್ದೆಗಿಂತ ಎಸಿಬಿ ಹೇಗೆ ಹೆಚ್ಚು ಪರಿಣಾಮಕಾರಿ ಎನ್ನುವುದನ್ನು ಸರ್ಕಾರ ಸಮರ್ಥಿಸಿಕೊಳ್ಳಲು ಸಾಧ್ಯವೇ?" ಎಂದು ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ್ ಪ್ರಶ್ನಿಸುತ್ತಾರೆ.

ಕಾಂಗ್ರೆಸ್ ಮುಖಂಡ ಬಿ.ಎಲ್.ಶಂಕರ್ ಪ್ರಕಾರ, "ಮಾಣಿಪ್ಪಾಡಿ ವರದಿ ವಾಸ್ತವವಾಗಿ ಒಂದು ವರದಿಯೇ ಅಲ್ಲ. ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿ ಮಾಣಿಪ್ಪಾಡಿಯವರು ಸ್ವಯಂಪ್ರೇರಿತವಾಗಿ ದಾಳಿ ನಡೆಸಿದ್ದರು. ಆದರೆ ಅದಕ್ಕೆ ಪೂರಕವಾದ ಪುರಾವೆಗಳನ್ನು ಸಲ್ಲಿಸಿರಲಿಲ್ಲ. ವಕ್ಫ್ ಹಗರಣ ಸುಮಾರು 15 ಲಕ್ಷ ಕೋಟಿ ರೂಪಾಯಿಯ ಬೃಹತ್ ಹಗರಣ ಎಂದು ಅತಿರಂಜಿತ ವರದಿ ನೀಡಲಾಗಿದೆ. ಹಿಂದಿನ ಕಬಳಿಕೆ ತಡೆ ಸಮಿತಿಗಳಂತೆ ಮಾಣಿಪ್ಪಾಡಿ ಸಮಿತಿಯ ವರದಿ ತನಿಖಾ ವರದಿಯಲ್ಲ. ಆದ್ದರಿಂದ ಸರ್ಕಾರ, ಈ ವರದಿಯ ಶಿಫಾರಸ್ಸುಗಳನ್ನು ಸಂಕ್ಷಿಪ್ತವಾಗಿ ಸದನದಲ್ಲಿ ಮಂಡಿಸಿದೆ"

ಆದರೆ ಮಾಣಿಪ್ಪಾಡಿ ಈ ವಾದವನ್ನು ಅಲ್ಲಗಳೆಯುತ್ತಾರೆ. ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ಕಾಯ್ದೆ-1994ರ ಸೆಕ್ಷನ್ 10 (1-2)ರ ಅನ್ವಯ ಆಯೋಗದ ಅಧ್ಯಕ್ಷರಿಗೆ ಕಾಲದಿಂದ ಕಾಲಕ್ಕೆ ಸರ್ಕಾರಕ್ಕೆ ಶಿಫಾರಸ್ಸುಗಳನ್ನು ಮಾಡಲು ಅಧಿಕಾರವಿದ್ದು, ಸರ್ಕಾರ ಇದನ್ನು ಶಾಸನಸಭೆಯ ಉಭಯ ಸದನಗಳಲ್ಲಿ ಮಂಡಿಸಬೇಕಾಗುತ್ತದೆ. ಆದರೆ ಕಾಂಗ್ರೆಸ್ ಸರ್ಕಾರದ ಮೇಲೆ ಈ ವರದಿ ಮಂಡಿಸದಂತೆ ಒತ್ತಡ ಇದ್ದು, ವರದಿಯನ್ನು ಮಂಡಿಸದಿರುವುದೇ ಕಾಂಗ್ರೆಸ್‌ನ ತಪ್ಪಿತಸ್ಥ ಮನೋಭಾವವನ್ನು ಸೂಚಿಸುತ್ತದೆ ಎಂದು ಮಾಣಿಪ್ಪಾಡಿ ಹೇಳುತ್ತಾರೆ.

"ಮೊದಲು ಬೀದರ್ ಜಿಲ್ಲೆಯಲ್ಲಿ ಖಬರಸ್ತಾನವನ್ನು ಕಬಳಿಕೆ ಮಾಡಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು, ಈ ದಾಳಿ ಬಳಿಕ ವಿವಿಧ ಜಿಲ್ಲೆಗಳಿಂದ ಇಂಥ ದೂರುಗಳ ಮಹಾಪೂರವೇ ಹರಿದುಬರಲು ಆರಂಭವಾಯಿತು. ಇದರಿಂದ ಆಯೋಗದ ವತಿಯಿಂದ ನಿಯತವಾಗಿ ದಾಳಿ ನಡೆಸಿದೆವು. ಇದಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ಪುರಾವೆಗಳ ನಾಲ್ಕು ಸಂಪುಟಗಳು ನನ್ನ ಬಳಿ ಇವೆ. ಇವೆಲ್ಲವೂ ಹಿರಿಯ ಕಾಂಗ್ರೆಸ್ ನಾಯಕರನ್ನು ಬೆಟ್ಟು ಮಾಡುತ್ತವೆ" ಎಂದು ಅವರು ಸ್ಪಷ್ಟಪಡಿಸುತ್ತಾರೆ.

"ವಕ್ಫ್ ಆಸ್ತಿಗಳ ಮುತುವಲ್ಲಿಗಳು ಹಾಗೂ ರಾಜಕಾರಣಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ರಾಜ್ಯದಲ್ಲಿ ಸುಮಾರು 54 ಸಾವಿರ ಎಕರೆ ನೊಂದಾಯಿತ ವಕ್ಫ್ ಭೂಮಿ ಇದೆ. ಅಂತೆಯೇ 23 ಸಾವಿರ ಎಕರೆ ನೊಂದಾವಣೆಯಾಗದ ಭೂಮಿ ಇದೆ. ಆದರೆ ಪ್ರತಿ ಸಮೀಕ್ಷೆ ನಡೆಸಿದಾಗಲೂ ವಕ್ಫ್ ಭೂಮಿ ಸಂಕುಚಿತಗೊಳ್ಳುತ್ತಲೇ ಇದೆ. ಸರ್ಕಾರದ ಮಾರ್ಗಸೂಚಿ ದರದ ಹಿನ್ನೆಲೆಯಲ್ಲಿ ಲೆಕ್ಕಾಚಾರ ಮಾಡಿದರೆ ಹಾಲಿ ಹಗರಣ ಸುಮಾರು ಎರಡು ಲಕ್ಷ ಕೋಟಿ ರೂಪಾಯಿಗಳ ದೊಡ್ಡ ಹಗರಣವಾಗುತ್ತದೆ. ಆದರೆ ಕಬಳಿಕೆಯಾದ ಆಸ್ತಿಯ ಮಾರುಕಟ್ಟೆ ಮೌಲ್ಯ ಸುಮಾರು 15 ಲಕ್ಷ ಕೋಟಿ ರೂಪಾಯಿಯನ್ನು ಮೀರುತ್ತದೆ" ಎಂದು ಹಗರಣದ ವ್ಯಾಪಕತೆಯನ್ನು ಅವರು ವಿವರಿಸುತ್ತಾರೆ.

"ಮುತುವಲ್ಲಿ ವಕ್ಫ್ ಮಂಡಳಿಯ ಜತೆ ಒಡಂಬಡಿಕೆ ಮಾಡಿಕೊಂಡು, ಭೂಮಿ ಮಾರಾಟಕ್ಕೆ ನಿರಾಕ್ಷೇಪಣಾ ಪತ್ರ ಪಡೆಯುತ್ತಾರೆ. ಈ ಭೂಮಿಯನ್ನು ಬೇನಾಮಿ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ. ಆದರೆ ವಾಸ್ತವವಾಗಿ ಬೇರೆಯವರು ಅದನ್ನು ಅನುಭವಿಸುತ್ತಿರುತ್ತಾರೆ. ಕೆಲವೊಂದು ಪ್ರಕರಣಗಳಲ್ಲಿ ಮೂರನೇ ವ್ಯಕ್ತಿಗೆ ಮಾರಾಟ ಮಾಡಿರುವ ನಿದರ್ಶನಗಳೂ ಇದ್ದು, ಬಂದ ಲಾಭವನ್ನು ಎಲ್ಲರೂ ಹಂಚಿಕೊಂಡಿದ್ದಾರೆ. ಮತ್ತೆ ಕೆಲ ಪ್ರಕರಣಗಳಲ್ಲಿ, ವಕ್ಫ್ ಮಂಡಳಿ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಖಾತೆ ಸಚಿವರು ಭೂಮಿಯನ್ನು ಡಿನೋಟಿಫೈ ಮಾಡಿ ಭೂಮಿಯನ್ನು ಮಾರಾಟ ಮಾಡಿದ್ದಾರೆ. ಅಂಥ ಪ್ರಕರಣಗಳಲ್ಲಿ ಸಿಕ್ಕಿಹಾಕಿಕೊಂಡಾಗ ಮತ್ತೆ ಖರೀದಿದಾರರಿಂದ ಭೂಮಿಯನ್ನು ವಾಪಾಸು ಪಡೆದಿದ್ದಾರೆ. ದೊಡ್ಡ ಪ್ರಮಾಣದಲ್ಲಿ ತೀರಾ ಕಡಿಮೆ ಬೆಲೆಗೆ ಭೂಮಿಯನ್ನು ಭೋಗ್ಯಕ್ಕೆ ನೀಡಲಾಗಿದೆ"

ವಿಧಾನ ಪರಿಷತ್ ಹಕ್ಕುಬಾಧ್ಯತಾ ಸಮಿತಿಯ ಮಾಜಿ ಅಧ್ಯಕ್ಷ ಜಿ.ಮಧುಸೂಧನ್ ಅವರು ಹೇಳುವಂತೆ, "ಅಲ್ಪಸಂಖ್ಯಾತ ಸಮುದಾಯದ ಮುಖಂಡರ ಕೂಟವೊಂದು ವಕ್ಫ್ ಸಚಿವ, ವಕ್ಫ್ ಮಂಡಳಿ ಅಧ್ಯಕ್ಷ ಹಾಗೂ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಹೀಗೆ ಮೂರು ಮುಖ್ಯ ಹುದ್ದೆಗಳನ್ನು ಹಿಡಿತದಲ್ಲಿಟ್ಟುಕೊಂಡಿದೆ. ಇದರಿಂದಾಗಿ ಪ್ರತಿ ಗಜೆಟ್ ಅಧಿಸೂಚನೆ ವೇಳೆಯೂ ವಕ್ಫ್ ಭೂಮಿ ಸಂಕುಚಿತಗೊಳ್ಳುತ್ತಿದ್ದರೂ, ಅದರ ಹಿಂದಿನ ಮಾರಾಟ ಹಗರಣ ಬೆಳಕಿಗೆ ಬರುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಸುಳ್ಳು ಹೇಳುತ್ತಿದೆ"

ಶಂಕರ್ ಅವರ ಊಹೆಯಂತೆ ಈ ವರದಿಯಲ್ಲಿ, ಸರ್ಕಾರಿ ಜಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿಕೊಂಡ ಎಲ್ಲ ರಾಜಕೀಯ ಪಕ್ಷಗಳ ಮುಖಂಡರ ಹೆಸರುಗಳೂ ಇವೆ. ಆದರೆ ಅಂಥ ಕಬಳಿಕೆ ಪ್ರಕರಣಗಳನ್ನು ವಿಶೇಷ ನ್ಯಾಯಾಲಯಗಳಲ್ಲೇ ವಿಚಾರಣೆಗೆ ಗುರಿಪಡಿಸಬೇಕು. ಸರ್ಕಾರಿ ಭೂಮಿ, ವಕ್ಫ್ ಭೂಮಿ, ಗೋಮಾಳ, ಮುಜರಾಯಿ ಭೂಮಿಯ ಒತ್ತುವರಿ ಪ್ರಕರಣಗಳ ವಿಚಾರಣೆಗೇ ವಿಶೇಷ ನ್ಯಾಯಾಲಯ ರಚಿಸಬೇಕು ಎಂದು ಅವರು ಆಗ್ರಹಿಸುತ್ತಾರೆ. ಭಾರತದಲ್ಲಿ ರೈಲ್ವೆ ಹಾಗೂ ರಕ್ಷಣಾ ಪಡೆಗಳನ್ನು ಹೊರತುಪಡಿಸಿದರೆ, ವಕ್ಫ್ ಅತಿಹೆಚ್ಚು ಭೂ ಹಿಡುವಳಿ ಹೊಂದಿರುವ ಸಂಸ್ಥೆಯಾಗಿದೆ. ಆದರೆ ಈ ಭೂಮಿಯ ಪೈಕಿ ಶೇಕಡ ಎರಡರಷ್ಟು ಕೂಡಾ ಸಮುದಾಯದ ಅಭಿವೃದ್ಧಿಗೆ ಬಳಕೆಯಾಗುತ್ತಿಲ್ಲ.

ಕಾಂಗ್ರೆಸ್ ಪಕ್ಷದ ಮುಸ್ಲಿಂ ಮುಖಂಡರೊಬ್ಬರು ಹೇಳುವಂತೆ, "ಭೂಮಿ ಒತ್ತುವರಿಯಲ್ಲಿ ರಾಜಕಾರಣಿಗಳು, ಪ್ರಭಾವಿ ವ್ಯಕ್ತಿಗಳಿಂದ ಹಿಡಿದು ಜನಸಾಮಾನ್ಯರ ವರೆಗೆ ಎಲ್ಲರೂ ಶಾಮೀಲಾಗಿದ್ದಾರೆ. ವಕ್ಫ್ ಕಾಯ್ದೆಗೆ ತಿದ್ದುಪಡಿ ತಾರದಿದ್ದರೆ ಅಥವಾ ವಕ್ಫ್ ಅಭಿವೃದ್ಧಿ ಮಂಡಳಿಗೆ ರಾಜಕೀಯೇತರ ವ್ಯಕ್ತಿಗಳನ್ನು ನೇಮಕ ಮಾಡದಿದ್ದರೆ, ಇಲ್ಲವೇ ವಕ್ಫ್ ಆಸ್ತಿಗಳ ಬಾಡಿಗೆಯನ್ನು ನಿಯತವಾಗಿ ಪರಿಷ್ಕರಿಸದಿದ್ದರೆ, ಇಡೀ ಸಮುದಾಯ ಇನ್ನೂ ಸರ್ಕಾರದ ಮರ್ಜಿಯಲ್ಲೇ ಉಳಿಯಬೇಕಾಗುತ್ತದೆ"

ಕುತೂಹಲಕಾರಿ ಅಂಶವೆಂದರೆ, ವಕ್ಫ್ ಭೂಮಿಯ ಕಬಳಿಕೆ ಬಗ್ಗೆ ತನಿಖೆಗೆ ಹಿಂದೆ ನೇಮಿಸಿದ್ದ ಸಮಿತಿ ಶಿಫಾರಸ್ಸುಗಳು ಇನ್ನೂ ಧೂಳು ತಿನ್ನುತ್ತಾ ಬಿದ್ದಿವೆ. ಉದಾಹರಣೆಗೆ ಎ.ಟಿ.ರಾಮಸ್ವಾಮಿ ನೇತೃತ್ವದಲ್ಲಿ ರಚಿಸಿದ್ದ ಜಂಟಿ ಸದನ ಸಮಿತಿ ವರದಿ, ವಿ.ಬಾಲಸುಬ್ರಹ್ಮಣ್ಯನ್ ನೇತೃತ್ವದ ವಿಶೇಷ ಕಾರ್ಯ ಪಡೆ ವರದಿ, ಉಪಲೋಕಾಯುಕ್ತ ನ್ಯಾಯಮೂರ್ತಿ ಎನ್.ಆನಂದ್ ಅವರ ವರದಿ, ನಿವೃತ್ತ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಸೈಯದ್ ನಿಸಾರ್ ಅಹ್ಮದ್ ವರದಿಗಳನ್ನು ಹೆಸರಿಸಬಹುದು. "ಸರ್ಕಾರದ ಉದ್ದೇಶ ಸಮಿತಿಗಳನ್ನು ರಚಿಸುವುದೇ ವಿನಃ ಅದರ ವರದಿಗಳನ್ನು ಅನುಷ್ಠಾನಗೊಳಿಸುವುದಲ್ಲ" ಎಂದು ವಕ್ಫ್ ಭೂಮಿ ಕಬಳಿಕೆಗಳ ಬಗೆಗಿನ ತನಿಖಾ ಆಯೋಗದ ಆಯುಕ್ತರಾಗಿದ್ದ ನಿಸಾರ್ ಅಹ್ಮದ್ ಅಭಿಪ್ರಾಯಪಡುತ್ತಾರೆ.

ಇತ್ತೀಚಿನ ವರ್ಷಗಳಲ್ಲಿ ಸಮಗ್ರ ಸಮೀಕ್ಷೆ ನಡೆಸದಿರುವುದು, ಜಿಐಎಸ್ ಮ್ಯಾಪಿಂಗ್ ಹಾಗೂ ವಕ್ಫ್ ಆಸ್ತಿಗಳ ದಾಖಲೀಕರಣದ ಕೊರತೆಯಿಂದಾಗಿ ಒತ್ತುವರಿ ಸುಲಭವಾಗಿದೆ. ನಾವಿನ್ನೂ ಬ್ರಿಟಿಷ್ ನಕ್ಷೆಗಳನ್ನು ಅನುಸರಿಸುತ್ತಿದ್ದೇವೆ. 1930ರ ಬಳಿಕ ಯಾವ ಸರ್ಕಾರಿ ಭೂಮಿಯ ಸಮೀಕ್ಷೆಯೂ ನಡೆದಿಲ್ಲ ಎಂದು ಶಂಕರ್ ವ್ಯವಸ್ಥೆಯ ಲೋಪವನ್ನು ವಿವರಿಸುತ್ತಾರೆ.

ವಕ್ಫ್ ಭೂಮಿಯ ಮರು ಸಮೀಕ್ಷೆ ನಡೆಯಬೇಕು ಎನ್ನುವುದು ಮಾಣಿಪ್ಪಾಡಿಯವರ ವಾದ. ಸಹಜವಾಗಿಯೇ ಅವರಿಗೆ ಇನ್ನೊಂದು ಹೆದರಿಕೆ ಇದೆ. ಅವರಿಗೆ ನೀಡಿದ್ದ ಪೊಲೀಸ್ ಭದ್ರತೆಯನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ವಾಪಾಸು ಪಡೆಯಲಾಗಿದೆ.

ಕೃಪೆ:www.theweek.in

share
ವಾರ್ತಾಭಾರತಿ
ವಾರ್ತಾಭಾರತಿ
Next Story
X